lowborn ಅಪರಾಧ ಘಟನೆಗಳು 04-10-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ. 01-10-2019. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ... >> ಪ್ರತ್ರಿಕಾ ಪ್ರಕಟಣೆ ದಿನಾಂಕ 27-09-2019   ಕಳ್ಳತನ ಆರೋಪಿಗಳ ಬಂಧನ   ಶ್ರೀ ಅರುಣ್‍ಕುಮಾರ್... >>   ದಿನಾಂಕ :18-09-19 ಪತ್ರಿಕಾ ಪ್ರಕಟಣೆ. ಕುಖ್ಯಾತ ಮನೆ ಹಾಗೂ ದೇವಸ್ಥಾನಗಳ ಕಳ್ಳನ ಬಂಧನ ... >> ಪತ್ರಿಕಾ ಪ್ರಕಟಣೆ. ದಿನಾಂಕ. 16-09-2019. ದಿನಾಂಕ:16-09-2019 ರಂದು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್... >> ದಿನಾಂಕ : 13-09-2019 ಸಿಪಿಸಿ/ಮಪಿಸಿ ಮತ್ತು ಎಪಿಸಿ ಹುದ್ದೆಗಳಿಗೆ ತಾತ್ಕಾಲಿಕವಾಗಿ... >> ಪತ್ರಿಕಾ ಪ್ರಕಟಣೆ. ದಿನಾಂಕ:10-09-2019. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ 03... >> ದಿನಾಂಕ: 30-08-2019 ಪತ್ರಿಕಾ ಪ್ರಕಟಣೆ   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ... >> ಪತ್ರಿಕಾ ಪ್ರಕಟಣೆ ದಿನಾಂಕ:22-08-2019 ಖತರ್ನಾಕ್  ಮೋಟಾರ್ ಸೈಕಲ್ ಗಳ ಕಳ್ಳನ ಬಂಧನ: 5 ಲಕ್ಷ... >> ಪತ್ರಿಕಾ ಪ್ರಕಟಣೆ ದಿ:17/08/19 ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ನೆರೆ... >> ಪತ್ರಿಕಾ ಪ್ರಕಟಣೆ ದಿನಾಂಕ : 14/08/2019 ಕಳೆದ 26 ವರ್ಷಗಳಿಂದ ಪ್ರಕರಣಗಳ ತನಿಖೆಗಳಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 04-10-19

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 22/2019 ಕಲಂ: 174 CRPC

ದಿನಾಂಕ:03-10-2019 ರಂದು ಬೆಳಿಗ್ಗೆ:10-00 ಗಂಟೆಗೆ ಈ ಕೇಸಿನ ಪಿರ್ಯಾದಿ ಬಿ.ಎಲ್ ರಾಜೇಶ್ ಬಿನ್ ಲಿಂಗಪ್ಪ ಬಿ.ಪಿ, 34, ವರ್ಷ, ಹಿಂದೂ ಸಾದರ ಜನಾಂಗ, ಕೆಲಸ, ಬಿಜವರ, ಕಸಬಾ ಹೋಬಲಿ, ಮಧುಗಿರಿ ತಾ|| ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಪಿರ್ಯಾದಿಯ ತಂದೆ ಲಿಂಗಪ್ಪ ಬಿ.ಪಿ ಬಿನ್ ಪುಟ್ಟರಂಗಪ್ಪರವರು ಅಟೆಂಡರ್ ಕರ್ಮಷಿಯಲ್ ಟ್ಯಾಕ್ಸ ಆಪೀಸ್ ಮಧುಗಿರಿ ಯಲ್ಲಿ ಕೆಲಸ ಮಾಡುತ್ತಿದ್ದು, ಲಿಂಗಪ್ಪ ಬಿ.ಪಿ ರವರಿಗೆ ಲೋ ಬಿ.ಪಿ ಮತ್ತು ಸಕ್ಕರೆ ಖಾಯಿಲೆಯಿದ್ದು ಹಾಗೂ ಹೃದಯಕ್ಕೆ ಸಂಬಂದಿಸಿದ ಖಾಯಿಲೆಯಿಂದ ನರಳುತ್ತಿದ್ದು ದಿನಾಂಕ 03-10-2019 ರಂದು ಬೆಳಿಗ್ಗೆ 6-00 ಗಂಟೆ ಮಧುಗಿರಿ ಸರ್ಕಾರಿ ಅಸ್ಪತ್ರೆಗೆ ಲೋ ಬಿ.ಪಿ ಯಿಂದ ಮತ್ತು ಅನಾರೋಗ್ಯದ ಪ್ರಯುಕ್ತ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ  ಬೆಳಿಗ್ಗೆ 6-30 ಗಂಟೆಗೆ ವೈದ್ಯರು ಲಿಂಗಪ್ಪ ಬಿ.ಪಿ ರವರನ್ನು  ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ , ಪಿರ್ಯಾದಿಯ ತಂದೆಯವರು ಮೃತಪಟ್ಟಿರುವುದರಿಂಧ ಈ ಬಗ್ಗೆ ಪಿ.ಎಂ ಮಾಡಿಸಿ ಮುಂದಿನ ಕಾನೂನುಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣಾ ಮೊ.ನಂ: 170/2019 ಕಲಂ:380 IPC

ದಿನಾಂಕ:03/10/2019 ರಂದು ಬೆಳಿಗ್ಗೆ 11-15 ಗಂಟೆಗೆ ಫಿರ್ಯಾದಿ ರಾಜಶೇಖರಯ್ಯ ಬಿನ್ ರಂಗಪ್ಪ, 50 ವರ್ಷ, ಕುರುಬ ಜನಾಂಗ, ಬಸವನಹಳ್ಳಿ, ಕಸಬಾ ಹೋಬಳಿ, ಮಧುಗಿರಿ ತಾ|| ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ಸುಮಾರು 25 ವರ್ಷಗಳಿಂದ ನನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ ಈ ಮನೆಯಲ್ಲಿ ನಾನು ನನ್ನ ಹೆಂಡತಿ ತಿಮ್ಮರಾಜಮ್ಮ ರವರು ಮಾತ್ರ ಇರುತ್ತೇವೆ ನನ್ನ ಮಗ ರಾಕೇಶ್ ರವರು ಗುಬ್ಬಿ ತಾಲ್ಲೋಕ್ ಚೋಳೂರು ಜೋಗಿಹಳ್ಳಿ, ಕೋಳಿ ಫಾರಂ ಒಂದರಲ್ಲಿ ಸೂಪರ್ ವೈಸರ್ ಆಗಿರುತ್ತಾನೆ, ಅಲ್ಲಿಯೇ ಕೆಲಸ ಮಾಡಿಕೊಂಡು ಅಲ್ಲಿಯೇ ಇರುತ್ತಾನೆ, ನಮ್ಮ ಗ್ರಾಮದಲ್ಲಿ ನಾನು ಮತ್ತು ನನ್ನ  ಹೆಂಡತಿ ತಿಮ್ಮರಾಜಮ್ಮ ಇರುತ್ತೇವೆ, ನನ್ನ ಹೆಂಡತಿ ತಿಮ್ಮರಾಜಮ್ಮ ರವರಿಗೆ ನಮ್ಮ ಮಧುವೆ ಸಮಯದಲ್ಲಿ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಮತ್ತು 15 ಗ್ರಾಂ ಕೊರಳ ಚೈನ್ನನ್ನು ಉಡುಗೊರೆಯಾಗಿ ಕೊಟ್ಟಿದ್ದರು ಇದನ್ನು ನಮ್ಮ ಮನೆಯನವರು ದಿನಾಂಕ:01/10/2019 ರಂದು ಬೆಳಿಗ್ಗೆ 10-00 ಗಂಟೆಗೆ ನಮ್ಮ ಅಕ್ಕ ಪಕ್ಕದ ಮನೆಯವರಿಗೆ ತೋರಿಸಿದ್ದರು ಅವುಗಳನ್ನು ಬೀರುವಿನಲ್ಲಿ ಇಟ್ಟು ಬೀರುವಿನ ಬೀಗ ಹಾಕಿಕೊಂಡು ನನ್ನ ಹೆಂಡತಿ ತಿಮ್ಮರಾಜಮ್ಮ ರವರು ಬೀಗದ ಕೀ ಯನ್ನು ಅವರ ಬಳಿ ಇಟ್ಟುಕೊಂಡು ನನಗೆ ಹೇಳಿ ಮಾರ್ನಾಮಿ ಹಬ್ಬಕ್ಕೆ ಮಗಳ ಊರಾದ ಗುಬ್ಬಿ ಪಕ್ಕದಲ್ಲಿರುವ ಕೋಡಿ ಪಾಳ್ಯಕ್ಕೆ ಬೆಳಿಗ್ಗೆ 11-00 ಗಂಟೆಗೆ ಮಧುಗಿರಿಯಿಂದ ಹೋದರು ನಾನು ಎಂದಿನಂತೆ ಮನೆಗೆ ಬೀಗ ಹಾಕಿ ಕೊಂಡು ಬಾಗಿಲ ಪಕ್ಕದಲ್ಲಿರುವ ಸಜ್ಜೆಯಲ್ಲಿ ಬೀಗದ ಕೀ ಯನ್ನು ಇಟ್ಟು ಕುರಿಗಳನ್ನು ಹೊಡೆದುಕೊಂಡು ಹೋದೆನು ನಂತರ ಇದೇ ದಿನ ಸಂಜೆ 06-00 ಗಂಟೆಗೆ ನಾನು ವಾಪಸ್ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಸ್ವಲ್ಪ ತೆರೆದಿತ್ತು, ನಂತರ ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಿದೆ ಮನೆಯಲ್ಲಿ ಯಾರು ಇರಲಿಲ್ಲ ನಾನು ಕೊಣೆಯಲ್ಲಿದ್ದ ಬೀರುವನ್ನು ನೋಡಲಾಗಿ ಬೀರುವಿನ ಬಾಗಿಲು ತೆಗೆದಿದ್ದು ಲಾಕರ್ ನಲ್ಲಿ ಇಟ್ಟಿದ್ದ 1] 35 ಗ್ರಾಮ ತೂಕದ ಬಂಗಾರದ ಮಾಂಗಲ್ಯ ಸರ, 2]15 ಗ್ರಾಂ ತೂಕದ ಬಂಗಾರದ ಕೊರಳ ಚೈನ್ ಕಾಣಲಿಲ್ಲ ಬಟ್ಟೆಗಳು ಯಾವುದು ಎಳೆದಾಡಿರುವುದು ಕಂಡು ಬಂದಿರುವುದಿಲ್ಲ ನಂತರ ನಾನು ನಮ್ಮ ಸಂಬಂಧಿಕ ಗೋವಿಂದನಿಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿದೆ ಇವುಗಳ ಒಟ್ಟು ಬೆಲೆ ಸುಮಾರು ಆಗ 42000/ ರೂ ಅಗಿರುತ್ತೆ. ನಾನು ನನ್ನ ಮಗನಿಗೆ ವಿಚಾರವನ್ನು ತಿಳಿಸಿ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ, ನಮ್ಮ ಮನೆಯಲ್ಲಿ ಕಳುವು ಮಾಡಿರುವ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ಮೊ.ನಂ.124/2019 ಕಲಂ:457, 380 .ಪಿ.ಸಿ

ದಿನಾಂಕ:03/10/2019 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿ ಮಧುಗಿರಿ ತಾಲ್ಲೋಕು, ಕೊಡಿಗೇನಹಳ್ಳಿ ಹೋಬಳಿ, ಮುದ್ದೇನಹಳ್ಳಿ ಗ್ರಾಮದ ದಲಿತ ಕಾಲೋನಿಯ ವಾಸಿಯಾದ ಅಶ್ವಥಮ್ಮ ಕೋಂ ಲೇ; ಮಲ್ಲಪ್ಪ, 50 ವರ್ಷ, ಪರಿಶಿಷ್ಠ ಜಾತಿ, ಕೂಲಿ ಕೆಲಸ, ರವರು ಠಾಣೆಗೆ ಹಾಜರಾಗಿ ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ 02-10-19 ರಂದು ನಾಗಸಂದ್ರದಲ್ಲಿರುವ ನಮ್ಮ ಸಂಬಂಧಿಕರ ಊರಿನಲ್ಲಿ ತಿಥಿ ಕಾರ್ಯಕ್ರಮ ಇದ್ದ ಕಾರಣ ನಾನು ನನ್ನ ಮನೆಯಲ್ಲಿದ್ದ ಬೀರುವಿನಲ್ಲಿ 15000-00 ರೂ ನಗದು, ಮತ್ತು ನನ್ನ ಬಾಬ್ತು ಹಿಂದಿನ ಬೆಲೆಯ ಸುಮಾರು 6000-00 ರೂ ಬೆಲೆಯ 3 ಗ್ರಾಂ ತೂಕದ ಒಂದು ಜೊತೆ ಓಲೆ, ಪ್ಲೇಟ್‍, ಸೈಡ್‍ ಮಾಟಿಯನ್ನು ಇಟ್ಟು ಮದ್ಯಾಹ್ನ 04-00 ಗಂಟೆಗೆ ನಾಗಸಂದ್ರಕ್ಕೆ ಹೋಗಿ ಸಂಬಂಧಿಕರ ಮನೆಯಲ್ಲಿಯೇ ರಾತ್ರಿ ತಂಗಿದ್ದು ದಿನಾಂಕ 03-10-19 ರಂದು ಬೆಳಿಗ್ಗೆ ನಮ್ಮ ಗ್ರಾಮದ ವಾಸಿ ನಮ್ಮ ಮನೆಯ ಪಕ್ಕದ ವಾಸಿ ನಾಗರಾಜು ರವರು ಪೋನ್‍ ಮಾಡಿ ನಿನ್ನ ಮನೆಯ ಬೀಗವನ್ನು ಯಾರೋ ಕಳ್ಳರು ಹೊಡೆದು ಹಾಕಿದ್ದು ಬಾಗಿಲು ತೆರೆದಿರುತ್ತೆ ಬನ್ನಿ ಅಂತ ತಿಳಿಸಿದ್ದರಿಂದ ನಾನು ನಾಗಸಂದ್ರದಿಂದ ಈ ದಿನ ಬೆಳಿಗ್ಗೆ ಮುದ್ದೇನಹಳ್ಳಿಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಮನೆಯ ಹಾಲ್‍ ನಲ್ಲಿದ್ದ ಬೀರುವಿನ ಬಾಗಿಲನ್ನು ಯಾವುದೋ ಅಯುಧದಿಂದ ಮೀಟಿ ತೆಗೆದು ಸಿಕ್ರೇಟ್‍ ಲಾಕರ್‍ ನಲ್ಲಿಟ್ಟಿದ್ದ  15,000-00 ರೂ ನಗದು, 6000-00 ರೂ ಬೆಲೆಯ 3 ಗ್ರಾಂ ತೂಕದ ಒಂದು ಜೊತೆ ಓಲೆ, ಪ್ಲೇಟ್‍ ಮತ್ತು ಸೈಡ್‍ ಮಾಟಿಯನ್ನು ಕಳವು ಮಾಡಿರುವುದು ಕಂಡು ಬಂದಿರುತ್ತೆ. ದಿನಾಂಕ 02-10-19 ರಂದು ರಾತ್ರಿ 12-00 ಗಂಟೆಯಿಂದ ದಿನಾಂಕ 03-10-19 ರಂದು ಬೆಳಗಿನ ಜಾವ 03-00 ಮಧ್ಯೆ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಮೇಲ್ಕಂಡ ವಡವೆ, ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪ್ರಕರಣ ದಾಖಲಿಸಿ ಸದರಿ ಕಳ್ಳರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತೆ.

ಜಯನಗರ ಪೊಲೀಸ್ ಠಾಣಾ  ಯು.ಡಿ.ಆರ್ ನಂ. 39/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ: 03/10/2019 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ  ರುಕ್ಸಾರ್ ಪೀರ್‍ದೋಸ್‍ ಕೋಂ ಏಜಾಸ್ ಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ನಮ್ಮ ಯಜಮನರು ಏಜಾಸ್‌‌ಪಾಷ ಅಲ್ಲಿ ಇಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು.  ನಮ್ಮ ಯಜಮಾನರ ಎರಡೂ ಕೈಗಳಿಗೂ ಇಸುಬಿನ ಗಾಯವಾಗಿದ್ದು, ಸದರಿ ಕೈಗಳ ಗಾಯದ ನೋವಿಗೆ ಈಗ್ಗೆ ಸುಮಾರು 3 ವರ್ಷಗಳಿಂದ ಮದ್ಯಪಾನ ಮಾಡುವ ಅಬ್ಯಾಸ ಬೆಳೆಸಿಕೊಂಡಿದ್ದರು.    ನಾವು ನಮ್ಮ ಯಜಮಾನರಿಗೆ ಇದ್ದ ಇಸುಬಿನ ಖಾಯಿಲೆ ಬಗ್ಗೆ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದರೂ ಸಹಾ ಗುಣವಾಗಿರಲಿಲ್ಲ.  ನಮ್ಮ ಯಜಮಾನರು ಅವರಿಗಿದ್ದ ಇಸುಬಿನ ಖಾಯಿಲೆಯಿಂದ ಕೊರಗುತ್ತಿದ್ದರು.  ಹೀಗಿರುವಾಗಿ ನಮ್ಮ ಮಗಳು ನೂರ್‌‌ಹನಿಗೆ ಜ್ವರ ಬಂದಿದ್ದರಿಂದ ನಾನು ದಿನಾಂಕ: 01-10-2019 ರಂದು ಬೆಳಿಗ್ಗೆ ರಾಜೀವಗಾಂಧಿ ಬಡಾವಣೆಯಲ್ಲಿರುವ ನಮ್ಮ ತವರು ಮನೆಗೆ ಹೋಗಿ ನಮ್ಮ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಂಡು ನಮ್ಮ ತಾಯಿಯ ಮನೆಯಲ್ಲಿಯೇ ಇದ್ದೆನು.  ಈ ದಿನ ದಿನಾಂಕ: 03-10-2019 ರಂದು ಬೆಳಿಗ್ಗೆ ಸುಮಾರು 6-45 ಗಂಟೆ ಸಮಯದಲ್ಲಿ ನಮ್ಮ ಭಾವ ಪೈರೋಜ್‌‌ ನಮ್ಮ ತಾಯಿಯ ಮನೆಗೆ  ಪೋನ್ ಮಾಡಿ ನಿನ್ನ ಗಂಡ ಏಜಾಸ್‌ಪಾಷ ಅವರ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂತಾ ವಿಚಾರ ತಿಳಿಸಿದರು. ಆಗ ತಕ್ಷಣ ಸಂಬಂಧಿಕರೊಂದಿಗೆ ಗೂಡ್‌‌ಶೆಡ್‌‌ ಕಾಲೋನಿನಲ್ಲಿರುವ ನಮ್ಮ ವಾಸದ ಮನೆಯ ಬಳಿಗೆ ಬಂದು ನೋಡಲಾಗಿ ನಮ್ಮ ಯಜಮಾನರು ನಮ್ಮ ಮನೆಯಲ್ಲಿ ರೂಮಿನಲ್ಲಿ ಮೇಲ್ಚಾವಣಿಗೆ ಅಳವಡಿಸಿದ್ದ ಮರದ ತೀರಿಗೆ ಪ್ಲಾಸ್ಟಿಕ್‌‌‌ ಹಗ್ಗದಿಂದ ಕಟ್ಟಿಕೊಂಡು ಮತ್ತೊಂದು ತುದಿಯನ್ನು ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದರು.  ಸ್ಥಳದಲ್ಲಿಯೇ ಇದ್ದ ನಮ್ಮ ಭಾವ ಪೈರೋಜ್‌‌‌ ರವರನ್ನು ವಿಚಾರ ಮಾಡಲಾಗಿ ನಿನ್ನೆ ದಿನ ರಾತ್ರಿ ಸುಮಾರು 10-30 ಗಂಟೆಯಲ್ಲಿ ನನ್ನ ತಮ್ಮ ಏಜಾಸ್‌‌ಪಾಷ  ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ರಾತ್ರಿ 11-00 ಗಂಟೆಗೆ ಮಲಗಲು ಮನೆಗೆ ಮನೆಗೆ ಹೋಗಿದ್ದರೆಂದು, ಈ ದಿನ ಬೆಳಿಗ್ಗೆ ಸುಮಾರು 6-20 ಗಂಟೆ ಸಮಯದಲ್ಲಿ ನಮ್ಮ ಸಂಬಂಧಿ ತೌಸೀಫ್‌‌‌‌ ಬಿನ್., ಮಹಮ್ಮದ್‌‌ ಷಫೀ ರವರು ನಿಮ್ಮ  ಮನೆಯ ಹತ್ತಿರ ಹೋದಾಗ ನಿಮ್ಮ ಯಜಮಾನರು ನೇಣುಹಾಕಿಕೊಂಡು ಮೃತಪಟ್ಟು ನೇತಾಡುತ್ತಿದ್ದನ್ನು ಕಂಡು ನಮ್ಮ ಮನೆಯ ಹತ್ತಿರ ಬಂದು ವಿಚಾರ ತಿಳಿಸಿದ್ದರಿಂದ ನಾವುಗಳೂ ಸಹಾ ಹೋಗಿ ನೋಡಲಾಗಿ ವಿಚಾರ ನಿಜವಾಗಿತ್ತೆಂತಾ ತಿಳಿಸಿರುತ್ತಾರೆ. ನಮ್ಮ ಯಜಮಾನರು ಅವರಿಗಿದ್ದ ಇಸುಬಿನ ಖಾಯಿಲೆಯಿಂದಲೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ರೀತಿ ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ಸಾವಿನಲ್ಲಿ ನಮಗೆ ಯಾವುದೇ ಅನುಮಾನ ಇರುವುದಿಲ್ಲ.  ತಾವು ಸ್ಥಳಕ್ಕೆ ಬಂದು ಶವ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 62 guests online
Content View Hits : 417798
Hackguard Security Enabled