lowborn ಅಪರಾಧ ಘಟನೆಗಳು 09-10-19 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ:25/01/2020 ದಿನಾಂಕ:03/12/19 ರಂದು ಮಧುಗಿರಿ ತಾ. ದೊಡ್ಡೇರಿ ಹೋ.... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪೋನ್ ಗಳ ಕಳವು... >> ಪತ್ರಿಕಾ ಪ್ರಕಟಣೆ ದಿನಾಂಕ 22/01/2020 ಸಿ.ಇ.ಎನ್. ಪೊಲೀಸ್ ಠಾಣೆಯಿಂದ ಆನ್ ಲೈನ್  ವಂಚಕನ... >> ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 06/2020 ಕಲಂ: 3(1)(r)(s) ಮತ್ತು 3(2)(Va)  SC/ST (pa) ACT  2015 ಹಾಗೂ ಕಲಂ 324 ... >> ದಿನಾಂಕ : 21-01-2020 ಕನ್ನ ಕಳವು  ಆರೋಪಿಗಳ ಬಂಧನ ******* ದಿನಾಂಕ : 20-04-2013 ರಂದು ಮದ್ಯಾಹ್ನ 12.00... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 09-10-19

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 152/2019 u/s 457,380 IPC

ದಿನಾಂಕ:08/10/2019 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಶಾಹೀನ ಕೋಂ ಸೈಯದ್ ಶಬ್ಬೀರ್, 42ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ವಾಸ ಎಂ.ಆರ್.ರಾಮಣ್ಣ ಲೇಔಟ್, ಗಾಂದೀನಗರ , ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 07/10/2019 ರಂದು ನನ್ನ ಗಂಡ ಮತ್ತು ಮಗ ಸಂಬಂದಿಕರ ಊರಾದ ಹೊನ್ನವಳ್ಳಿಗೆ ಹೋಗಿ ಅಲ್ಲೆ ಉಳಿದುಕೊಂಡಿದ್ದು, ನಾನು ಮನೆಯಲ್ಲಿ ಒಬ್ಬಳೆ ಮಲಗಲು ಭಯ ಆಗಿದ್ದರಿಂದ 10-30 ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ನಮ್ಮ ನಾದಿನಿ ಮನೆಗೆ ಹೋಗಿ ಮಲಗಿದ್ದು, ಈ ದಿನ ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಮನೆ ಬಳಿ ಬಂದಾಗ ಮನೆ ಬಾಗಿಲು ತೆಗೆದಿದ್ದು, ಗಾಬರಿಯಾಗಿ ಒಳಗೆ ಹೋಗಿ ನೋಡಿದಾಗ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಪ್ರವೇಶ ಮಾಡಿ ಬೀರುವಿಗೆ ಬೀಗ ಹಾಕಿರಲಿಲ್ಲ. ಬೀರುವಿನಲ್ಲಿದ್ದ 8 ಗ್ರಾಂ ಚಿನ್ನದ ರಿಂಗ್, 3 ಗ್ರಾಂ ಚಿನ್ನದ ಓಲೆ, 3 ಗ್ರಾಂ 2 ಚಿನ್ನದ ಉಂಗುರ ಹಾಗೂ 2 ಗ್ರಾಂ ಚಿನ್ನದ 2 ಉಂಗುರ, 9000 ಸಾವಿರ ಮೌಲ್ಯದ ಒಂದು ಚಿನ್ನದ ಸರ ಇದ್ದು, ಇವುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಗೆ ನುಗ್ಗಿ ಕಳವು ಮಾಡಿಕೊಂಡು   ಹೋಗಿರುತ್ತಾರೆ. ಈ ಒಡವೆಗಳನ್ನು ಈ ಹಿಂದೆ ಮಾಡಿಸಿದ್ದು, ಬೆಲೆಯನ್ನು  ತಿಳಿದು ನಂತರ ತಿಳಿಸಲಾಗುವುದು ಈ ಮೇಲ್ಕಂಡ 16 ಗ್ರಾಂ ಚಿನ್ನದ ಒಡವೆಗಳು ಹಾಗೂ ಚಿನ್ನದ ಸರದ ಅಂದಾಜು ಬೆಲೆ ಸುಮಾರು 24000/- ರೂ ಆಗಬಹುದು.  ಒಡವೆಗಳನ್ನು ಕಳವು ಮಾಡಿರುವ  ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ. 152/2019 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಜಯನಗರ ಪೊಲೀಸ್ ಠಾಣಾ  ಯು.ಡಿ.ಆರ್ ನಂ. 41/2019 ಕಲಂ 174 ಸಿ.ಆರ್‍.ಪಿ.ಸಿ

ದಿನಾಂಕ: 08/10/2019 ರಂದು ಬೆಳಿಗ್ಗೆ 11-45 ಗಂಟೆಯಲ್ಲಿ ತುಮಕೂರು ಟೌನ್‍, ಮಾರುತಿನಗರ ವಾಸಿ ರಾಮಕೃಷ್ಣ ಬಿನ್ ವಡ್ಡೆಹನುಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ತುಮಕೂರಿನಲ್ಲಿ ನೀರಿನ ಪೈಪ್‍ ಲೈನ್ ತೆಗೆಯುವ ಕೂಲಿ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು ಒಂದೂವರೆ ತಿಂಗಳಿನಿಂದ ಮಾರುತಿನಗರ ಕೊನೆಯಲ್ಲಿ ಶೆಡ್‍ ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದು, ದಿನಾಂಕ: 28/09/2019 ರಂದು ನಮ್ಮ ತಂದೆ ವಡ್ಡೆಹನುಮಪ್ಪ ರವರು ನಮ್ಮನ್ನು ನೋಡಿಕೊಂಡು ಹೋಗಲೆಂದು ಮಾರುತಿನಗರದಲ್ಲಿರುವ ಶೆಡ್ಡಿಗೆ ಬಂದಿದ್ದರು.  ದಿನಾಂಕ: 03/10/2019 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸಣ್ಣನಾಗಮ್ಮ ಕೂಲಿಕೆಲಸಕ್ಕೆ ಹೋಗಿದ್ದಾಗ ವಡ್ಡೆಹನುಮಪ್ಪ ರವರು ನಮ್ಮ ಶೆಡ್ ನಲ್ಲಿಯೇ ಉಳಿದುಕೊಂಡಿದ್ದರು.  ಮದ್ಯಾಹ್ನ 2-00 ಗಂಟೆಯಲ್ಲಿ ಪಕ್ಕದ ಶೆಡ್ಡಿನಲ್ಲಿ ವಾಸವಾಗಿರುವ ಕೃಷ್ಣಪ್ಪ ಪೋನ್ ಮಾಡಿ ಶೆಡ್‍ ಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುತ್ತೆ ತಿಳಿಸಿದ್ದು, ತಕ್ಷಣ ನಾವಿಬ್ಬರೂ ಬಂದು ನೋಡಿದಾಗ ಶೆಡ್ ಅರ್ಧ ಬರ್ಧ ಸುಟ್ಟು ಹೋಗಿದ್ದು, ನಮ್ಮ ತಂದೆಗೆ ಸುಟ್ಟಗಾಯಗಳಾಗಿದ್ದವು.  ಹಾಗೂ ಪಕ್ಕದ ಶೆಡ್ ನಲ್ಲಿದ್ದ ನಮ್ಮ ಸಂಬಂಧಿ ಇಂದಮ್ಮ @ ಇಂದು ಗೆ ಸುಟ್ಟಗಾಯಗಳಾಗಿದ್ದು, ಇಬ್ಬರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಘಟನೆ ಬಗ್ಗೆ ನಮ್ಮ ತಂದೆಯವರನ್ನು ವಿಚಾರಿಸಿದಾಗ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನಾನು ಮತ್ತು ಇಂದಮ್ಮ ಶೆಡ್‍ ನಲ್ಲಿ ಅಡುಗೆ ಮಾಡಿಕೊಳ್ಳೋಣವೆಂದು ಸ್ಟೋವ್ ನ್ನು ಹಚ್ಚಲು ಹೋದಾಗ ಹೇಗೋ ಆಕಸ್ಮಿಕವಾಗಿ ಗ್ಯಾಸ್ ಸ್ಟೋವ್ ಹತ್ತಿಕೊಂಡು ನಮ್ಮಿಬ್ಬರ ಬಟ್ಟೆಗೆ ತಗುಲಿ ಶೆಡ್ ಹೊತ್ತಿಕೊಂಡು ಉರಿಯುತ್ತಿದ್ದಾಗ ಅಕ್ಕಪಕ್ಕದವರು ಬೆಂಕಿ ಹಾರಿಸಿರುತ್ತಾರೆಂತ ತಿಳಿಸಿದರು.  ನಮ್ಮ ತಂದೆ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ: 08/10/2019 ರಂದು ಬೆಳಿಗ್ಗೆ ಸುಮಾರು 6-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.  ತಂದೆಯವರ ಸಾವಿನಲ್ಲಿ ಅನುಮಾನ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ  ಯುಡಿಆರ್ ನಂ 17/2019 ಕಲಂ 174(ಸಿ)    ಸಿ ಆರ್ ಪಿಸಿ

ದಿನಾಂಕ: 08-10-2019 ರಂದು ಮಧ್ಯಾಹ್ನ 01-30 ಗಂಟೆಗೆ ಗಂಗಾಧರಯ್ಯ ಬಿನ್ ಲೇಟ್ ಬಸವಯ್ಯ, 50 ವರ್ಷ, ಒಕ್ಕಲಿಗರು, ಜಿರಾಯ್ತಿ ಕೆಲಸ, ಮುದುಗೆರೆಪಾಳ್ಯ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ, “ನನಗೆ ಸಂಸಾರದಲ್ಲಿ ಶ್ರೀರಂಗಮ್ಮ ಮತ್ತು ಪುಟ್ಟಲಕ್ಷ್ಮಮ್ಮ ಎಂಬುವ ಇಬ್ಬರು ಹೆಂಡತಿಯರಿದ್ದು ಶ್ರೀರಂಗಮ್ಮ ರವರು ಈಗ್ಗೆ ಸುಮಾರು 25 ವರ್ಷಗಳ ಹಿಂದೆ ಮೃತಪಟ್ಟಿದ್ದು ಇವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು ನಂತರ ಪುಟ್ಟಲಕ್ಷ್ಮಮ್ಮ ರವರಿಗೆ ಮದುವೆಯಾಗಿದ್ದು ಇವರಿಗೆ ಒಂದು ಗಂಡು ಮಗು ಇದ್ದು ನಾನು ಎಲ್ಲರಿಗೂ ಅನ್ಯೂನ್ಯವಾಗಿ ನೋಡಿಕೊಳ್ಳುತ್ತಿದ್ದು 2ನೇ ಹೆಂಡತಿ ಪುಟ್ಟಲಕ್ಷ್ಮಮ್ಮ ರವರ ಮಗನಾದ ಯಶ್ವಂತ್ ಬಿನ್ ಗಂಗಾಧರಯ್ಯ, 21 ವರ್ಷ, ವಿದ್ಯಾರ್ಥಿ, ಒಕ್ಕಲಿಗರು, ಮುದುಗೆರೆಪಾಳ್ಯ ಗ್ರಾಮ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ  ರವರು ಪ್ರತಿದಿನ ಕಾಲೇಜಿಗೆ ನಮ್ಮ ಗ್ರಾಮದಿಂದ ತುಮಕೂರಿಗೆ ಹೋಗಿ ಬರುತ್ತಿದ್ದು ಈ ಅವಧಿಯಲ್ಲಿ ಈತನ ಸ್ನೇಹಿತನಾದ ಭೈಚೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರ ಜೊತೆ ಯಾವಾಗಲೂ ಮೊಬೈಲ್ ನಲ್ಲಿ ಮಾತನಾಡುವುದು ಹಾಗೂ ನನ್ನ ಮೊದಲನೇ ಹೆಂಡತಿ ಮಗಳಾದ ಶಕುಂತಲ ಎಂಬುವವರನ್ನು ಭೈಚೇನಹಳ್ಳಿ ಗ್ರಾಮದ ಚಿಕ್ಕಣ್ಣ ರವರ ಮಗನಾದ ನಾಗರಾಜು ಎಂಬುವವರಿಗೆ ಕೊಟ್ಟು ಮದುವೆ ಮಾಡಿಸಿದ್ದು ಅವರ ಮನೆಗೆ ಹೋಗುವಾಗಲೂ ಸಹ ಯಾವಾಗಲೂ ಸ್ವಾಮಿ ಎಂಬುವವರ ಜೊತೆಯೇ ಇರುತ್ತಿದ್ದು ದಿನಾಂಕ:07-10-2019 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಿಂದ 11-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದಿಂದ ಫಯಾಜ್ ಎಂಬುವವರ ಆಟೋದಲ್ಲಿ ನಾಗವಲ್ಲಿಗೆ ಬರುವಾಗ ಫಯಾಜ್ ರವರ ಬಳಿ ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದು ನಂತರ ಅದೇ ದಿನ ಸಾಯಂಕಾಲ ಸುಮಾರು 05-00 ಗಂಟೆ ಸಮಯದಲ್ಲಿ ಭೈಚೇನಹಳ್ಳಿ ಗ್ರಾಮದ ಗಂಗಚಿಕ್ಕಯ್ಯ ರವರಿಗೆ ಸೇರಿದ ಕರಲುಬಾರೆ ಬಳಿ ಇರುವ ಜಮೀನಿನಲ್ಲಿರುವ ನೀರಿನ ಹೊಂಡದ ಬಳಿ ಬಟ್ಟೆ, ಬ್ಯಾಗು, ಮೊಬೈಲ್, ಚಪ್ಪಲಿ, ಪುಸ್ತಕಗಳು, ಇವುಗಳು ದಡದಲ್ಲಿ ಇದ್ದುದ್ದನ್ನು ಹಾಲು ತೆಗೆದುಕೊಂಡು ಬರುವಾಗ ನೋಡಿದ ದಾಸೇಗೌಡ ರವರು ಗುರ್ತಿಸಿ ನನ್ನ ಅಳಿಯನಾದ ನಾಗರಾಜು ರವರಿಗೆ ತಿಳಿಸಿದಾಗ ನಾಗರಾಜು ರವರು ನನಗೆ ಪೋನ್ ಮಾಡಿ ವಿಚಾರ ತಿಳಿಸಿದಾಗ ನಾನು ಸಾಯಂಕಾಲ ಸುಮಾರು 06-30 ಗಂಟೆಗೆ ಕರಲುಬಾರೆ ಬಳಿ ಇರುವ ನೀರಿನ ಹೊಂಡದ ಬಳಿ ಹೋಗಿ ನೋಡಲಾಗಿ ದಡದಲ್ಲಿದ್ದ ಬಟ್ಟೆ, ಬ್ಯಾಗು, ಮೊಬೈಲ್, ಚಪ್ಪಲಿ, ಪುಸ್ತಕಗಳು ನನ್ನ ಮಗ ಯಶ್ವಂತ್ ರವರದ್ದಾಗಿದ್ದು ನನ್ನ ಮಗನಿಗೆ ಭೈಚೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರು ಕರೆಸಿಕೊಂಡು ಯಾವುದೋ ಉದ್ದೇಶದಿಂದ ಈಜಾಡಲು ತಿಳಿಸಿದಾಗಲೋ ಅಥವಾ ನೂಕಿದಾಗಲೋ ಅಥವಾ ಸ್ವತಃ ತಾನೇ ಹೊಂಡದ ನೀರಿಗೆ ಬಿದ್ದು ಮೃತಪಟ್ಟಿದ್ದು ಈ ದಿನ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಡುಕಾಡಲಾಗಿ ನನ್ನ ಮಗ ಕರಲುಬಾರೆ ಬಳಿಯ ಗಂಗಚಿಕ್ಕಯ್ಯ ರವರ ಜಮೀನಿನಲ್ಲಿರುವ ನೀರಿನ ಹೊಂಡದಲ್ಲಿ ಮೃತದೇಹ ಸಿಕ್ಕಿದ್ದು ಮೃತದೇಹವನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲು ಕಳುಹಿಸಿಕೊಟ್ಟಿದ್ದು ನನ್ನ ಮಗನ ಸಾವಿನಲ್ಲಿ ಸ್ವಾಮಿ ರವರ ಮೇಲೆ ಅನುಮಾನ ಇದ್ದು ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಿಕೊಡಲು” ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಸಿ.ಎಸ್.ಪುರ   ಠಾಣಾ  ಯು,ಡಿ.ಆರ್  ನಂ; 08/2019. ಕಲಂ:174 ಸಿ.ಆರ್.ಪಿ.ಸಿ

ದಿನಾಂಕ: 08.10.2019 ರಂದು ಈ ಕೇಸಿನ ಫಿರ್ಯಾದಿಯಾದ ರಂಗಸ್ವಾಮಿ  ಬಿನ್ ಲೇಟ್ ಚಿಕ್ಕರಂಗಯ್ಯ, 48 ವರ್ಷ, ಆದಿ ಕರ್ನಾಟಕ  ಜನಾಂಗ,ಎಂ.ಎನ್. ಕೋಟೆ,ನಿಟ್ಟೂರು   ಹೋಬಳಿ, ಗುಬ್ಬಿ ತಾಲ್ಲೂಕುರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ  ಸಾರಾಂಶವೆಂದರೆ,  ನನ್ನ  ತಂಗಿ ಗಂಡನಾದ  ಕೃಷ್ಣಮೂರ್ತಿರವರು ಕೃಷಿಕನಾಗಿ ಕೆಲಸಮಾಡಿಕೊಂಡಿದ್ದು,ಪ್ರತಿ ದಿನ ಹೊಲಕ್ಕೆ  ಹೋಗಿ ಕೃಷಿ ಕೆಲಸ ಮುಗಿಸಿಕೊಂಡು  ವಾಪಸ್ಸು ಬರುತ್ತಿದ್ದರು, ಮನೆಯಲ್ಲಿ ಎರಡು ಹಸುವಿನ ಕರುಗಳಿದ್ದು ಮೇವು ಸಹ ತರುತ್ತಿದ್ದರು, ಪ್ರತಿ ದಿನದಂತೆ ದಿನಾಂಕ: 08.10.2019 ರಂಧು ಜಮೀನಿನಲ್ಲಿ  ಕೃಷಿ ಕೆಲಸ ಮುಗಿಸಕೊಂಡು ಹುಲ್ಲನ್ನು  ತೆಗೆದುಕೊಂಡು ಬರುತ್ತಿರುವಾಗ್ಗೆ, ಇದೇ ದಿನ ಮದ್ಯಾಹ್ನ 3 ರಿಂಧ 3.30 ಗಂಟೆ ಸುಮಾರಿನಲ್ಲಿ  ಎಸ್,ಕೊಡಗೇಹಳ್ಳಿ ವಾಸಿ ನಾರಾಯಣಪ್ಪರವರ  ಜಮೀನಿನ ಹತ್ತಿರ ಬರುವಾಗ್ಗೆ, ವಿದ್ಯುತ್  ಲೈನ್ ತುಂಡಾಗಿ ಬಿದ್ದಿದ್ದನ್ನು  ನೋಡದೇ, ವಿದ್ಯುತ್ ಲೈನ್ ತಗಲಿ ಹುಲ್ಲು ಹೊರೆ ಕೆಳಕ್ಕೆ ಬಿದ್ದಾಗ, ವಿದ್ಯುತ್ ಸಂಪರ್ಕವಾಗಿ  ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮರಣಹೊಂದಿರುತ್ತಾರೆ ಅಂತ ಮೃತ ಕೃಷ್ಣಮೂರ್ತಿರವರ  ಸಂಬಂದಿಕರು ನನಗೆ ಪೋನ್ ಮಾಡಿ ತಿಳಿಸಿದ್ದು, ಆಗ ನಾನು , ನನ್ನ ತಾಯಿ ದೊಡ್ಡಮ್ಮ , ನನ್ನ ಹೆಂಡತಿ ಮಂಜಮ್ಮ  ನಾವು ಮೂವರು ಸ್ಥಳಕ್ಕೆ  ಬಂದು ನೋಡಲಾಗಿ, ವಿದ್ಯುತ್  ಲೈನ್ ತುಂಡಾಗಿ ಬಿದ್ದಿದ್ದು ಕೃಷ್ಣಮೂರ್ತಿರವರು  ಮರಣಹೊಂದಿರುವುದು  ಸತ್ಯವಾಗಿತ್ತು, ಮೃತ ಕೃಷ್ಣಮೂರ್ತಿರವರು ವಿದ್ಯುತ್ ಶಾಕ್ ನಿಂದ ಆಕಸ್ಮಿಕವಾಗಿ ಮರಣಹೊಂದಿರುತ್ತಾರೆ ವಿನಹ ಬೇರೆ ಯಾವುದೇ ಅನುಮಾನ ಇರುವುದಿಲ್ಲಾ  ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು  ಪ್ರಕರಣ  ದಾಖಲಿಸಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 53 guests online
Content View Hits : 562734
Hackguard Security Enabled