lowborn ಪತ್ರಿಕಾ ಪ್ರಕಟಣೆ ದಿ:15-02-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:15-02-20

ಪತ್ರಿಕಾ ಪ್ರಕಟಣೆ ದಿ:15/02/2020

 

ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :

11400/- ರೂ ನಗದು ಹಾಗೂ 4 ಮೊಬೈಲ್‌ ಪೋನ್‌ಗಳ ಜಪ್ತಿ.


ತುಮಕೂರು ನಗರ ವ್ಯಾಪ್ತಿಯ ಸಾರ್ವಜನಿಕರಿಂದ ಮೊಬೈಲ್ ಮುಖಾಂತರ ಸ್ಪೆಕ್ಟಿಕುಲರ್ ಎಂಬ ಆಫ್ ನಲ್ಲಿ ಕುದುರೆ ರೇಸ್ ಆಟಗಳಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಾ ಅನಧಿಕೃತ ಜೂಜಾಟ ಆಡಿಸುತ್ತಿರುವ ಹಾಗೂ ಹಲವು ಸಾರ್ವಜನಿಕರಿಗೆ ವಂಚಿಸುತ್ತಿರುವ ಜಾಲದ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು, ತುಮಕೂರು ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಂ.ವಿ. ಶೇಷಾದ್ರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ನಿಯೋಜಿಸಿದ್ದರು.

ದಿನಾಂಕ:14-02-2020 ರಂದು ವಿಶೇಷ ತಂಡವು ಕುದುರೆ ರೇಸ್ ಜೂಜಾಟ ನಡೆಯುತ್ತಿದ್ದ ಶ್ರೀರಾಜ್ ಟಾಕೀಸ್ ಬ್ರಿಡ್ಜ್ ಶಿವರಾಮಕಾರಂತ ನಗರ ಕ್ಯಾತ್ಸಂದ್ರ ಬಳಿಯಿರುವ ಒಂದು ಟೀ ಅಂಗಡಿ ಮುಂಭಾಗ ಸಂಜೆ 4-00 ಗಂಟೆಗೆ ಆರೋಪಿಗಳನ್ನು ಪತ್ತೆ ಮಾಡಿ ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿರುತ್ತಾರೆ.

ಆರೋಪಿಗಳ ಹೆಸರು ವಿಳಾಸ

1] ತುರಣ್ ಬಿನ್ ಮಲ್ಲೇಶ 20 ವರ್ಷ, ಬಜಾಜ್ ಆಟೋಫೈನಾನ್ಸ್ ರಿಕವರಿ ಕೆಲಸ, ವಾಸ: ಹಳೇ ಅಂಚೆ ಕಚೇರಿ ರಸ್ತೆ, ಕ್ಯಾತ್ಸಂದ್ರ.

2] ರೇವಂತ್ ಬಿನ್ ಮಂಜುನಾಥ 21 ವರ್ಷ, ವಾಸ: ಸುಮತಿ ಸ್ಕೂಲ್ ಮುಂಭಾಗ ಸಿ.ಎಂ.ಬಡಾವಣೆ, ಕ್ಯಾತ್ಸಂದ್ರ, ತುಮಕೂರು.

3] ಸಂಜಯ್ ಬಿನ್ ನರಸಿಂಹಮೂರ್ತಿ 19 ವರ್ಷ, ವಾಸ: ಸುಮತಿ ಸ್ಕೂಲ್ ಹಿಂಭಾಗ 1 ನೇ ಮೈನ್ ಸಿ.ಎಂ.ಬಡಾವಣೆ, ಕ್ಯಾತ್ಸಂದ್ರ.

4] ಚರಣ್ ಕೆ.ಆರ್. ಬಿನ್ ಜಿ. ರಮೇಶ್ 21 ವರ್ಷ, ವಾಸ: ಹಳೇ ಅಂಚೆ ಕಚೇರಿ ರಸ್ತೆ ಕ್ಯಾತ್ಸಂದ್ರ.

ಈ ಆರೋಪಿಗಳು ತುಮಕೂರು ನಗರದ ಆಕ್ಸಿಸ್ ಬ್ಯಾಂಕ್ ನಲ್ಲಿ ಚರಣ್ ಎಂಬುವರ ಹೆಸರಿನಲ್ಲಿ ಖಾತೆಯನ್ನು ತೆರೆದು ಅನ್‌ಲೈನ್‌ ಮೂಲಕ ಬೆಟ್ಟಿಂಗ್ ಹಣವನ್ನು ಈ ಖಾತೆಗೆ ಜಮಾ ಮಾಡುತ್ತಾ ವ್ಯವಹಾರ ಮಾಡುತ್ತಿರುವುದು ತಿಳಿದುಬಂದಿರುತ್ತದೆ. ಈ ಹಿಂದೆ ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿಗಳನ್ನು ದಸ್ತಗಿರಿ ಮಾಡಿದ್ದ ನಂತರ ಈ ಆರೋಪಿಗಳು ಬ್ಯಾಂಕ್‌ನಲ್ಲಿರುವ ಹಣವನ್ನು ಖಾಲಿ ಮಾಡಿ ಕೈ ಬರವಣಿಗೆಯಲ್ಲಿ ಕುದುರೆ ರೇಸ್‌ ಚೀಟಿಗಳನ್ನು ಬರೆದುಕೊಂಡು ಬೆಟ್ಟಿಂಗ್‌ ಜೂಜಾಟವನ್ನು ನಡೆಸುತ್ತಿರುವುದು ಕಂಡು ಬಂದಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಗಳಿಂದ 11400/- ರೂ ನಗದು ಹಣ, 4 ಮೊಬೈಲ್ ಫೋನ್ ಗಳು, ರೇಸ್ ಕಾರ್ಡ್ ಚೀಟಿ, ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಚೀಟಿ, ರೈಟಿಂಗ್ ಪ್ಯಾಡ್ ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ.

ಈ ಪ್ರಕರಣದಲ್ಲಿ ತುಮಕೂರಿನ ರಾಜೇಶ್, ದಿಲೀಪ, ಹಾಗೂ ಯಲ್ಲಾಪುರದ ಗಿರಿ @ ಗಿರೀಶ, ಹುಲಿಯೂರುದುರ್ಗದ ದಯಾನಂದ, ಹಾಗೂ ಶಿರಾ ಪಟ್ಟಣದ ಹರಿ ಎಂಬುವರುಗಳು ಪ್ರಮುಖರಾಗಿದ್ದು ಅವರ ಸೂಚನೆ ಮೇರೆಗೆ ಈ ಬೆಟ್ಟಿಂಗ್ ದಂದೆ ನಡೆಸುತ್ತಿರುವುದಾಗಿ ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಉದೇಶ್  ಕೆ.ಎಸ್.ಪಿ.ಎಸ್.ರವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್. ಪೊಲೀಸ್ ಠಾಣೆಯ ಇನ್ಸ್‌‌ಪೆಕ್ಟರ್ ಎಂ.ವಿ.ಶೇಷಾದ್ರಿ, ಕ್ಯಾತ್ಸಂದ್ರ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀಧರ್. ಎಸ್, ಕ್ಯಾತ್ಸಂದ್ರ ಠಾಣೆಯ ಪಿ.ಎಸ್.ಐ. ರಾಮಪ್ರಸಾದ, ಎ.ಎಸ್.ಐ, ಸಿದ್ದಪ್ಪ.  ಸಿಬ್ಬಂದಿಗಳಾದ ಸಿ.ಇ.ಎನ್. ಪೊಲೀಸ್ ಠಾಣೆ ಸಿಬ್ಬಂದಿಗಳಾದ ಅಯೂಬ್ ಖಾನ್, ಮಲ್ಲೇಶ್ ಹಾಗೂ ಕ್ಯಾತಸಂದ್ರ ಠಾಣೆಯ ಸಿಬ್ಬಂದಿಯವರಾದ  ಹೆಚ್.ಸಿ. ಮೋಹನ್ ಕುಮಾರ್,   ಪಿಸಿ  ರಮೇಶ  ರವರುಗಳು ಪತ್ತೆ ಮಾಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ಕೆ. ವಂಶಿಕೃಷ್ಣ, ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಕಚೇರಿ ತುಮಕೂರು.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 43 guests online
Content View Hits : 616922
Hackguard Security Enabled