lowborn ಅಪರಾಧ ಘಟನೆಗಳು 17-02-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 28/03/2020 ಅಮೃತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾರಿನ ಗಾಜು... >> ಪತ್ರಿಕಾ ಪ್ರಕಟಣೆ ದಿನಾಂಕ 24-03-20 ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ... >> ಪತ್ರಿಕಾ ಪ್ರಕಟಣೆ ದಿನಾಂಕ 20-03-2020 ಕೊರೋನ ವೈರಸ್‍  ಬಗ್ಗೆ ವಾಟ್ಸಪ್‍  ಗ್ರೂಪ್‍ನಲ್ಲಿ ... >> ಪತ್ರಿಕಾ ಪ್ರಕಟಣೆ. ದಿ:16-03-2020. ಎಟಿಎಂ ಕಾರ್ಡ್ ಗಳ ದತ್ತಾಂಶವನ್ನು ಗ್ರಾಹಕರಿಂದ... >> ದಿನಾಂಕ 26/02/20 ಅಫೀಮು ಮಾರಾಟ ಮಾಡುತಿದ್ದ ಆರೋಪಿಯ ಬಂಧನ ದಿನಾಂಕ: 25-02-2020 ರಂದು ¸ÀAeÉ 6:30... >> ಪತ್ರಿಕಾ ಪ್ರಕಟಣೆ ದಿನಾಂಕ: 17-02-2020 ಗಾಂಜಾ ಆರೋಪಿಗಳ ಬಂಧನ     ದಿನಾಂಕ : 17/02/2020 ರಂದು... >> ಪತ್ರಿಕಾ ಪ್ರಕಟಣೆ ದಿ:15/02/2020   ಆನ್ ಲೈನ್ ಮೂಲಕ ಕುದುರೆ ರೇಸ್ ಬೆಟ್ಟಿಂಗ್ : 4 ಜನರ ಬಂಧನ :... >> ಪತ್ರಿಕಾ ಪ್ರಕಟಣೆ ದಿನಾಂಕ. 10-02-2020 ಆನ್ ಲೈನ್  ಮೂಲಕ  ಕ್ರಿಕೆಟ್  ಬೆಟ್ಟಿಂಗ್ & ಕುದುರೆ... >> ಪತ್ರಿಕಾ ಪ್ರಕಟಣೆ ದಿನಾಂಕ:03/02/2020 ವೇಶ್ಯಾವಾಟಿಕೆ  ನಡೆಸುತ್ತಿರುವವರ  ಮೇಲೆ  ದಾಳಿ... >> ಪತ್ರಿಕಾ ಪ್ರಕಟಣೆ ದರೋಡೆಕೋರರ ಬಂಧನ ಆರೋಪಿತರಿಂದ 2 .5 ಲಕ್ಷ ರೂ ಬೆಲೆಬಾಳುವ ವಡವೆ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 17-02-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- 13/2020 ಕಲಂ: 15 (ಎ), 32 (3) ಕೆ.ಇ ಆಕ್ಟ್

ದಿನಾಂಕ: 16/02/2020 ರಂದು ಸಂಜೆ 7-35 ಗಂಟೆಗೆ ಶ್ರೀ ಕೃಷ್ಣಕುಮಾರ್ ಪಿ.ಎಸ್.ಐ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಆರೋಪಿ ಹಾಗೂ ಆತನು ಉಪಯೋಗಿಸುತ್ತಿದ್ದ ವಸ್ತುಗಳ ಸಮೇತ ಠಾಣೆಗೆ ಬಂದು ಪಂಚನಾಮೆಯೊಂದಿಗೆ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ;16-02-2020 ರಂದು ಸಂಜೆ 05-45 ಗಂಟೆ  ಸಮಯದಲ್ಲಿ  ನನಗೆ  ಬಂದ  ಖಚಿತ  ಮಾಹಿತಿಯ  ಮೇರೆಗೆ  ಠಾಣಾ  ಸಿಬ್ಬಂದಿ ಹಾಗೂ  ಪಂಚಾಯ್ತಿದಾರರೊಂದಿಗೆ   ತಿಪಟೂರು  ಗ್ರಾಮಾಂತರ ಪೊಲೀಸ್  ಠಾಣಾ  ಸರಹದ್ದು, ಬನ್ನಿಹಳ್ಳಿ ಗೇಟ್  ಮುಂದೆ, ಪೆಟ್ಟಿಗೆ ಅಂಗಡಿ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ  ಎರಡು  ಪ್ಲಾಸ್ಟಿಕ್ ಲೋಟ, ಎರಡು ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 1  ಲೀಟರ್ ನೀರಿನ ಬಾಟಲ್ ಇಟ್ಟುಕೊಂಡು ಮದ್ಯಪಾನ ಮಾಡುತ್ತಿದ್ದ ಗಂಡಸಿನ ಮೇಲೆ  ದಾಳಿ  ಮಾಡಿ  ಹಿಡಿದುಕೊಂಡು  ಅವನ   ಹೆಸರು  ವಿಳಾಸ  ಕೇಳಲಾಗಿ ಪ್ರದೀಪ್ ಬಿನ್ ಶಂಭುಲಿಂಗಪ್ಪ, 35 ವರ್ಷ ಲಿಂಗಾಯ್ತರು, ಜಿರಾಯ್ತಿ, ಬನ್ನಿಹಳ್ಳಿ, ಕಸಬಾ  ಹೋಬಳಿ, ತಿಪಟೂರು ತಾಲ್ಲೋಕ್ ಎಂದು ನುಡಿದಿದ್ದು,  ಆರೋಪಿತ ಕೃತ್ಯಕ್ಕೆ ಬಳಸಿದ  ಎರಡು  ಪ್ಲಾಸ್ಟಿಕ್ ಲೋಟ, ಒಂದು  90 ಎಂ ಎಲ್ ನ ಮದ್ಯದ ಹೈವಾಡ್ಸ್ ಟೆಟ್ರಾ  ಖಾಲಿ ಪ್ಯಾಕೆಟ್ ,  ಮತ್ತು ಒಂದು ಮದ್ಯ  ತುಂಬಿರುವ  ಹೈವಾಡ್ಸ್ ಟೆಟ್ರಾ  ಪ್ಯಾಕೆಟ್,  1  ಲೀಟರ್ ನೀರಿನ ಬಾಟಲ್ ಮತ್ತು ಆರೋಪಿಯನ್ನು ವಶಕ್ಕೆ ಪಡೆದು, ಈ ದಿನ  ಸಂಜೆ 06-15 ಗಂಟೆಯಿಂದ 07-00 ಗಂಟೆಯವರೆವಿಗೆ ಪಂಚರ ಸಮಕ್ಷಮ  ಪಂಚನಾಮೆಯನ್ನು  ಬರೆದಿದ್ದು ಅಮಾನತ್ತು ಪಡಿಸಿಕೊಂಡ ವಸ್ತುಗಳು ಮತ್ತು ಆರೋಪಿ ಪ್ರದೀಪ್  ರವರನ್ನು ವಶಕ್ಕೆ ನೀಡುತ್ತಿದ್ದು ಈತನ ವಿರುದ್ದ  ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳುಲು ನೀಡಿದ ಜ್ಞಾಪನದ ಮೇರೆಗೆ ಠಾಣಾ ಮೊ.ನಂ 13/2020 ಕಲಂ: 15 (ಎ), 32 (3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಬೆಳ್ಳಾವಿ ಪೊಲೀಸ್ ಠಾಣೆ ಯು.ಡಿ.ಆರ್‍ ನಂ    03/2020  ಕಲಂ  174  CRPC

ದಿನಾಂಕ-16/02/202 ರಂದು   ಸಂಜೆ 6-30  ಗಂಟೆಗೆ  ಈ ಪ್ರಕರಣದ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ-16/02/2020 ರಂದು  ನನ್ನ ತಂಗಿಗೆ  ಈಗ್ಗೆ ಸುಮಾರು 40 ವರ್ಷದ ಹಿಂದೆ ಚಿಕ್ಕಬೆಳ್ಳಾವಿ ಗ್ರಾಮದ  ಬೀರಲಿಂಗಯ್ಯ ರವರಿಗೆ ಮದುವೆ ಮಾಡಿಕೊಟ್ಟಿದ್ದು, 10 ವರ್ಷಗಳ ಕಾಲ ಸಂಸಾರ ಮಾಡಿ ನಂತರ ಆಕೆಗೆ ಮಕ್ಕಳಾಗದ ಕಾರಣ  ವೈಮನಸ್ಸಾಗಿ ತವರಿಗೆ ಆಗಾಗ್ಗೆ ಬರುತ್ತಿದ್ದಳು , ಒಂದು ದಿನ ಆತನಿಂದ ದೂರವಾಗಿ ಬಂದು ನಮ್ಮ ಗ್ರಾಮದಲ್ಲಿಯೇ ಒಂಟಿಯಾಗಿ ವಾಸವಿದ್ದಳು, ನನ್ನ ತಂಗಿ ಕೆಂಪಮ್ಮನಿಗೆ ಸುಮಾರು 60 ವರ್ಷ ವಯಸ್ಸಾಗಿದ್ದು ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ,  ದಿನ ದಿನಾಂಕ-16/02/2020 ರಂದು  ಮದ್ಯಾಹ್ನ 1-00 ಗಂಟೆಗೆ  ತಾನು ಅಡಿಗೆ ಮಾಡುವಾಗ ಕಾಳುಗಳಿಗೆ ಹಾಕುವ ಮಾತ್ರೆಗಳನ್ನು ಹಾಕಿದ್ದ ಡಬ್ಬದಿಂದ ಕಾಳುಗಳನ್ನು ತೆಗೆದು ಮಾತ್ರೆಗಳನ್ನೂ ಸಹ ಗೊತ್ತಾಗದೇ ಸಾಂಬಾರ್ ಗೆ ಹಾಕಿ ಅಡಿಗೆ ಮಾಡಿ ಊಟಮಾಡಿದ್ದು, ನಂತರ ಸ್ವಲ್ಪ ಹೊತ್ತಿನಲ್ಲಿ ವಾಂತಿಯಾದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ , ಚಿಕಿತ್ಸೆಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ, ಇದರಲ್ಲಿ ಯಾವುದೇ ಅನುಮಾನ  ಇರುವುದಿಲ್ಲ,  ಮುಂದಿನ ಕ್ರಮ ಜರುಗಿಸಿ ಎಂತಾ ಇತ್ಯಾದಿ

ಮಧುಗಿರಿ ಪೊಲೀಸ್ ಠಾಣಾ ಯು.ಡಿ.ಆರ್. 04/2020 ಕಲಂ 174 (C) CRPC

ದಿನಾಂಕ:16-02-2020 ರಂದು ಸಂಜೆ 04-00 ಗಂಟೆಗೆ ಈ ಕೇಸಿನ ಪಿರ್ಯಾದಿ ರಂಗನಾಥ ಬಿನ್ ಲೇ|| ರಾಮಯ್ಯ, ಇಡಿಗ ಜನಾಂಗ, ಆರ್.ಎಂ.ಸಿ ಯಾರ್ಡ, ಮಧುಗಿರಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯು  ದಿನಾಂಕ: 16-02-2020 ರಂದು ತನ್ನ ಸ್ವಂತ ಕೆಲಸದ ನಿಮಿತ್ತ ಮಧುಗಿರಿ ಟೌನ್  ಸಿವಿಲ್ ಬಸ್ ನಿಲ್ದಾಣ ದ ಹಿಂಭಾಗ ಇರುವ ಗಂಧರ್ವ ರೆಸ್ಟೋರೆಂಟ್ ಬಳಿ ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಗಂಧರ್ವ ರೆಸ್ಟೋರೆಂಟ್ ಮುಂಭಾಗ ಜನರು ಗುಂಪಾಗಿ ನಿಂತುಕೊಂಡು  ನೋಡುತ್ತಿದ್ದರು ಆಗ ಪಿರ್ಯಾದಿಯು ಸಹ ಹೋಗಿ ನೋಡಲಾಗಿ ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ನಂತರ ವಿಚಾರ ಮಾಡಲಾಗಿ ಈತನು ಬೆಳಿಗ್ಗೆ ಸುಮಾರು 11-00 ಗಂಟೆಯಿಂದ ಇಲ್ಲಿಯೇ ಮಲಗಿದ್ದನು ಎಂದು ಜನರು ತಿಳಿಸಿದರು ಈತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಈತನ ಸಾವಿಗೆ ಕಾರಣ ಏನೆಂಬುದು ಪಿರ್ಯಾದಿಗೂ ಸಹ ಗೊತ್ತಿರುವುದಿಲ್ಲ ಈ ಅಪರಿಚಿತ ವ್ಯಕ್ತಿಯ ಸಾವಿನ ಬಗ್ಗೆ  ಅನುಮಾನವಿರುತ್ತೆ, ಮೈಮೇಲೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಆದ್ದರಿಂದ ತಾವುಗಳು ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-22/2020 ಕಲಂ 379 ಐಪಿಸಿ

ದಿನಾಂಕ-16/02/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಕೆಂಪಹೊನ್ನಯ್ಯ ಬಿನ್ ಲೇಟ್.ಗಂಗಯ್ಯ, 48 ವರ್ಷ, ವ್ಯವಸಾಯ, ಒಕ್ಕಲಿಗರು, ಶೆಟ್ಟಿಗೆರೆ ಗ್ರಾಮ, ಕೊತ್ತಗೆರೆ ಹೋಬಳಿ, ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  2015 ನೇ ಸಾಲಿನಲ್ಲಿ ನಾನು ನನ್ನ ಅಣ್ಣನಾದ ಗೌಡಯ್ಯ ರವರ ಮಗನಾದ ಲೋಕೇಶ್.ಎಸ್.ಜಿ ರವರ ಹೆಸರಿನಲ್ಲಿ ಕೆಎ-41-ಇಡಿ-3148 ನೇ ನಂಬರಿನ ನೀಲಿ ಬಿಳಿ ಸ್ಟಿಕ್ಕರ್ ಉಳ್ಳ ಕಪ್ಪು ಬಣ್ಣದ ಹೀರೋ ಸ್ಪ್ಲೇಂಡರ್ ಪ್ಲಸ್ ಇಂಜಿನ್ ನಂಬರ್ HA10EJEHL31026  ಛಾಸಿ ನಂಬರ್ MBLHA10AMEHL85438 ದ್ವಿಚಕ್ರ ವಾಹನವನ್ನು ಖರೀದಿ ಮಾಡಿ ನಾನು ಓಡಾಡಿಸಿಕೊಂಡಿದ್ದು, ದಿನಾಂಕ:-12-02-2020 ರಂದು ನನಗೆ ತುಮಕೂರಿನಲ್ಲಿ ಸ್ವಂತ ಕೆಲಸ ಇದ್ದುದರಿಂದ ಮೇಲ್ಕಂಡ ನನ್ನ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಹೆಬ್ಬೂರು ಗ್ರಾಮಕ್ಕೆ ಬಂದು ದ್ವಿಚಕ್ರ ವಾಹನವನ್ನು ಬೆಳಿಗ್ಗೆ 10-30 ಗಂಟೆಯಲ್ಲಿ ಹೆಬ್ಬೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಬ್ಬಿಣದ ಜಾಲರಿ ಹಾಕಿರುವ ಪಕ್ಕದಲ್ಲಿ ನಿಲ್ಲಿಸಿ, ಸೈಡ್ ಲಾಕ್ ಮಾಡಿ ಬೀಗದ ಕೀಯನ್ನು ನಾನೇ ಇಟ್ಟುಕೊಂಡು ತುಮಕೂರಿಗೆ ಬಸ್ಸಿನಲ್ಲಿ ಹೋಗಿ ನನ್ನ ಕೆಲಸ ಮುಗಿಸಿಕೊಂಡು ವಾಪಸ್ಸು ಅದೇ ದಿನ ಮದ್ಯಾಹ್ನ 3-00 ಗಂಟೆಯಲ್ಲಿ ಬಂದು ನೋಡಲಾಗಿ ನಾನು ನಿಲ್ಲಿಸಿ ಹೋಗಿದ್ದ ನನ್ನ ಬಾಬ್ತು ಕೆಎ-41-ಇಡಿ-3148 ನೇ ನಂಬರಿನ ನೀಲಿ ಬಿಳಿ ಸ್ಟಿಕ್ಕರ್ ಉಳ್ಳ ಕಪ್ಪು ಬಣ್ಣದ ಹೀರೋ ಸ್ಪ್ಲೇಂಡರ್ ಪ್ಲಸ್ ದ್ವಿಚಕ್ರ ವಾಹನ ಕಾಣಲಿಲ್ಲ, ನಾನು ಸದರಿ ಸ್ಥಳದಲ್ಲಿ ಅಕ್ಕ ಪಕ್ಕ ಹಾಗೂ ಹೆಬ್ಬೂರು ಗ್ರಾಮದಲ್ಲಿ ಬಸ್ ನಿಲ್ದಾಣ ತುಮಕೂರು. ಸಿರಿವರ ರಸ್ತೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿಯೂ ಪತ್ತೆಯಾಗಲಿಲ್ಲ, ನನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ನನ್ನ ದ್ವಿಚಕ್ರ ವಾಹನದ ಈಗಿನ ಬೆಲೆ ಸುಮಾರು 20.000-00 ಬಾಳಬಹುದಾಗಿದ್ದು ಆರೋಪಿಯನ್ನು ಪತ್ತೆ ಮಾಡಿ ನನ್ನ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿ ಈದಿನ ತಡವಾಗಿ ಠಾಣೆಗೆ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-22/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ .ಮೊ.ನಂ. 13/2020 ಕಲಂ:279,337,304(ಎ) ಐಪಿಸಿ ರೆ/ವಿ 187 ಐಎಂವಿ ಆಕ್ಟ್ .

ದಿನಾಂಕ:16/02/2020 ರಂದು ಬೆಳಿಗ್ಗೆ 09-30 ಗಂಟೆಗೆ ಎ.ಎಸ್.ಐ ರವಿ ರವರು ಮಧುಗಿರಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಕೆ.ರಾಜು ರವರಿಂದ ಹೇಳಿಕೆ ಪಡೆದು ಠಾಣೆಗೆ ಬಂದು ನೀಡಿದ ಹೇಳಿಕೆ ಅಂಶವೇನೆಂದರೆ,  ನಾನು ಈಗ್ಗೆ 15 ದಿನಗಳಿಂದ ಮಧುಗಿರಿ ತಾಲ್ಲೋಕ್  ಜೀವಗೊಂಡನಹಳ್ಳಿಯಲ್ಲಿ ಮೇಸ್ತ್ರಿ ತಿಪ್ಪೇಸ್ವಾಮಿ ರವರ ಜೊತೆ ಗಾರೆ ಕೆಲಸ ಮಾಡಿಕೊಂಡಿದ್ದು ದಿನಾಂಕ 15/02/2020 ರ ರಾತ್ರಿ 10-00 ಗಂಟೆಯಲ್ಲಿ ನನ್ನ ಹೆಂಡತಿ ಪುಷ್ವಲತಾ ಫೋನ್ ಮಾಡಿ ನನಗೆ ಹುಷಾರಿಲ್ಲ ಬೇಗ ಬಾ ಎಂದು ಕರೆದರು ಆಗ ನಾನು ತಕ್ಷಣ ಕೆಲಸ ಮಾಡುತ್ತಿದ್ದ ಮನೆ ಪಕ್ಕದಲ್ಲೇ ಇದ್ದ ರಂಗನಾಥ ರವರ ಬಳಿ ಇದ್ದ ದ್ವಿ ಚಕ್ರ ವಾಹನವನ್ನು ಕೊಡು ಅಂತಾ ಕೇಳಿದೆ ಅವರು ಹೊಸ ಗಾಡಿ ಯಾರಿಗೂ ಕೊಡುವುದಿಲ್ಲ ಎಂತಾ ತಿಳಿಸಿದರು. ನಾನು ಮತ್ತೆ ಕೇಳಿಕೊಂಡಾಗ ಅವರು ನಾನೇ ಬರುತ್ತೇನೆಂದು ಹೇಳಿದರು. ಆಗ ನಾನು ಬನ್ನಿ ಹೋಗೋಣ ಎಂದು ಹೇಳಿದೆ. ಅವರು ಅವರ ಹೊಸ ದ್ವಿಚಕ್ರ ವಾಹನವನ್ನು ತೆಗೆದುಕೊಂಡರು ನಾನು ಗಾಡಿಯ ಹಿಂಭಾಗದಲ್ಲಿ ಕುಳಿತುಕೊಂಡು ಅವರು ಗಾಡಿಯನ್ನು ಓಡಿಸಿಕೊಂಡು ಮಧುಗಿರಿ ಪಾವಗಡ ರಸ್ತೆಯಲ್ಲಿ ರಾತ್ರಿ ಸುಮಾರು 10-30 ಗಂಟೆಯಲ್ಲಿ ಗಿರಿಯಮ್ಮನಪಾಳ್ಯದ ಹತ್ತಿರ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ಅದೇ ವೇಳೆಗೆ ಮಧುಗಿರಿ ಕಡೆಯಿಂದ ಬಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಂಗನಾಥ್ ಓಡಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ ನಾವು ಗಾಡಿಯಿಂದ ರಸ್ತೆಗೆ ಬಿದ್ದೆವು. ಅಪಘಾತ ಪಡಿಸಿದ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ಮತ್ತು ಕತ್ತಲಾದ್ದರಿಂದ ಅಪಘಾತ ಪಡಿಸಿದ ವಾಹನ ಯಾವುದೆಂದು ನನಗೆ ಗೊತ್ತಾಗಿಲಿಲ್ಲ ಏಟು ಬಿದ್ದಿದ್ದ ನನ್ನನ್ನ ಮತ್ತು ರಂಗನಾಥನನ್ನು ಯಾರೋ ಯಾವುದೋ ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ ಅಂತಾ ತಿಳಿಯಿತು. ನನಗೆ ಎಡಗಾಲಿಗೆ, ಬಲಗಾಲಿಗೆ, ಮುಖಕ್ಕೆ ಪೆಟ್ಟು ಬಿದ್ದಿರುತ್ತೆ. ಈ ಅಪಘಾತದಲ್ಲಿ ಪೆಟ್ಟು ಬಿದ್ದಿದ್ದ ರಂಗನಾಥ್ ಗೆ ಚಿಕಿತ್ಸೆ ಫಲಕಾರಿಯಾಗದೇ ಸತ್ತು ಹೋಗಿರುತ್ತಾರೆಂತಾ ಗೊತ್ತಾಯಿತು ಈ ಅಪಘಾತಕ್ಕೆ ಕಾರಣವಾಗಿರುವ ಯಾವುದೋ ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ಮೇರೆಗೆ ಠಾಣಾ ಮೊ.ನಂ.13/2020 ಕಲಂ:279,337.304(ಎ) ಐಪಿಸಿ ರೆ/ವಿ 187 ಐ.ಎಂ.ವಿ ಆಕ್ಟ್ ರಿತ್ಯಾ ಪ್ರಕರಣ   ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 89 guests online
Content View Hits : 616965
Hackguard Security Enabled