lowborn ಪತ್ರಿಕಾ ಪ್ರಕಟಣೆ ದಿ21-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ21-07-20

ಪತ್ರಿಕಾ ಪ್ರಕಟಣೆ

ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ ಹಣವನ್ನು ಲಪಟಾಯಿಸಲು ವಂಚನೆ, ನಂಬಿಕೆ ದ್ರೋಹ ಮಾಡಿದ ಆರೋಪಿಗಳ ಬಂಧನ

ದಿನಾಂಕ:15-07-2020 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿ, ನಟರಾಜು.ಸಿ, ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್, ಚಿಕ್ಕದಾಸರಹಳ್ಳಿ, ಶಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ಈ ದಿನ ರಾತ್ರಿ 07-30 ಗಂಟೆಯಲ್ಲಿ ಬ್ಯಾಂಕಿನ ರಿಕವರಿ ಬಾಬ್ತು 7,53,000/- ರೂ ಹಣವನ್ನು ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಮೋಟಾರ್ ಸೈಕಲ್ ನಲ್ಲಿ ಯರಗುಂಟೆ ಗೇಟ್ ನಿಂದ ಶಿರಾ ಕಡೆಗೆ ಬರುತ್ತಿರುವಾಗ, ಉಲ್ಲಾಸ್ ತೋಪಿನ ಬಳಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಕಬ್ಬಿಣದ ಚೈನ್ ನಿಂದ ನನ್ನ ಬೆನ್ನಿಗೆ ಹಾಗೂ ಮೈ ಕೈಗೆ ಹೊಡೆದು,  ನನ್ನ ಬ್ಯಾಗಿನಲ್ಲಿದ್ದ 7,53,000/- ರೂ ಹಣವನ್ನು ಕಿತ್ತುಕೊಂಡು ಹೋಗಿರುತ್ತಾರೆ ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಶಿರಾ ಠಾಣಾ ಮೊ ನಂ:260/2020 ಕಲಂ 394 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಸದರಿ ಪ್ರಕರಣದ ಆರೋಪಿಗಳು ಮತ್ತು ಕಳವು ಹಣವನ್ನು ಪತ್ತೆ ಮಾಡಲು ಶ್ರೀ ಹನುಮಂತಪ್ಪ.ಪಿ.ಬಿ, ಪಿ.ಐ, ಶಿರಾ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡವು ಬ್ಯಾಂಕಿನ ಗ್ರಾಹಕ ಚಿದಾನಂದ ಮತ್ತು ಆರೋಪಿಗಳಾದ ನಟರಾಜು.ಸಿ ಹಾಗೂ ಸ್ನೇಹಿತ ಅಶೋಕ.ಬಿ.ಹೆಚ್, ರವರುಗಳನ್ನು ವಿಚಾರಣೆ ಮಾಡಿದ್ದು, ನಂತರ ಸದರಿ ಪ್ರಕರಣವನ್ನು ತಾಂತ್ರಿಕವಾಗಿ ತನಿಖೆ ಮಾಡಿ  ವಿಚಾರಣೆ ನಡೆಸಿದ ಸಮಯದಲ್ಲಿ ಆಸಾಮಿಗಳು ತಾವೇ ಹಣವನ್ನು ತೆಗೆದುಕೊಂಡು ಹೋಗಿ ಬಚ್ಚಿಟ್ಟು, ಸದರಿ ಹಣವು ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿ ಮಾಡಿ, ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದಾಗಿ ನುಡಿದು, ತಾವು ಬಚ್ಚಿಟ್ಟಿರುವ 7,53,000/-ರೂ ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್ ಗಳು, 03 ಮೊಬೈಲ್ ಗಳು, ಒಂದು ಸೈಕಲ್ ಚೈನ್, ಹಾಗೂ ಖಾರದಪುಡಿಯ  ಪ್ಲಾಸ್ಟಿಕ್ ಕವರ್ ಮತ್ತು ಬಾಕ್ಸ್ ಅನ್ನು ಅಮಾನತ್ತುಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

ಬಂಧಿತ ಆರೋಪಿಗಳ ಹೆಸರು ಮತ್ತು ವಿಳಾಸ & ಪೋಟೋ

1)    ನಟರಾಜು.ಸಿ ಬಿನ್ ಚಿಕ್ಕಣ್ಣ, 31 ವರ್ಷ, ಕೋಟೆಕ್ ಮಹೇಂದ್ರ ಬ್ಯಾಂಕ್ ನಲ್ಲಿ ರಿಕವರಿ ಎಕ್ಸಿಕ್ಯೂಟಿವ್, ಚಿಕ್ಕದಾಸರಹಳ್ಳಿ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.

2) ಅಶೋಕ.ಬಿ.ಹೆಚ್ ಬಿನ್ ಹುಚ್ಚವೀರಪ್ಪ, 32 ವರ್ಷ, ವ್ಯವಸಾಯ, ಭೂಪಸಂದ್ರ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕ್, ತುಮಕೂರು ಜಿಲ್ಲೆ.

ಸದರಿ ಪ್ರಕರಣದ ಆರೋಪಿ ಮತ್ತು ಕಳವು ಹಣವನ್ನು ವಶಪಡಿಸಿಕೊಳ್ಳಲು ಶ್ರಮಿಸಿದ  ಶ್ರೀ.ಉದೇಶ್,  ಕೆ.ಎಸ್.ಪಿ.ಎಸ್‌‌. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಶ್ರೀ.ಕುಮಾರಪ್ಪ.ಎಲ್ ಡಿ.ಎಸ್.ಪಿ, ಶಿರಾ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಹನುಮಂತಪ್ಪ.ಪಿ.ಬಿ, ಪಿ.ಐ, ಶಿರಾ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಭಾರತಿ ಎಸ್.ಸಿ  ಪಿ.ಎಸ್,ಐ, ಸಿಬ್ಬಂದಿಗಳಾದ ನಾಗರಾಜು, ರಂಗನಾಥ, ನಂಜೇಗೌಡ, ಶಿವಕುಮಾರ, ಮಂಜುನಾಥ ಸ್ವಾಮಿ ಕೆ.ಬಿ, ಗೋಪಿನಾಥ, ನಾಗರಾಜು, ಹಾಗೂ  ಜಿಲ್ಲಾ ಪೊಲೀಸ್ ಕಛೇರಿಯ  ನರಸಿಂಹರಾಜು ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್‌. ರವರು ಅಭಿನಂದಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಕಛೇರಿ,

ತುಮಕೂರು ಜಿಲ್ಲೆ,

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 25 guests online
Content View Hits : 833568
Hackguard Security Enabled