lowborn ಅಪರಾಧ ಘಟನೆಗಳು 22-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 22-07-20

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ 62/2020 ಕಲಂ: 324,504,506 ರೆ/ವಿ 34 ಐ.ಪಿ.ಸಿ

ದಿನಾಂಕ:21/07/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀ ಚಿಕ್ಕಣ್ಣ ಬಿನ್ ಜವರಯ್ಯ, 53 ವರ್ಷ, ಕುರುಬರು, ವ್ಯವಸಾಯ, ರಾಮಶೆಟ್ಟಿಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 19/07/2020 ರಂದು ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮಗನಾದ ಕಿಶೋರ್ ರವರು ನಮ್ಮ ಜಮೀನು ಹತ್ತಿರ ಇರುವಾಗ ನನ್ನ ತಮ್ಮನಾದ ಶಂಕರಯ್ಯರವರು ಅವರ ಜಮೀನಿನಲ್ಲಿ ಯಾರೋ ತರಣಿಕಾಯಿಯನ್ನು ಕಿತ್ತುಕೊಂಡು ಹೋಗಿರುತ್ತಾರೆ ಇದಕ್ಕೆ ನಾವೇ ಕಾರಣ ಎಂತ ನಮ್ಮನ್ನು ಕುರಿತು ಬೈಯುತ್ತಿದ್ದ ಅದಕ್ಕೆ ನಾನು ಯಾಕಪ್ಪ ನಮ್ಮನ್ನು ಬೈಯುತ್ತಿಯಾ ಎಂತಾ ಕೇಳಿದ್ದಕ್ಕೆ ಶಂಕರಯ್ಯನು ಬೋಳಿ ಮಗನೇ, ಸೂಳೆ ಮಗನೇ ಎಂತಾ ಬೈದು, ಶಂಕರಯ್ಯರವರ ಹೆಂಡತಿಯಾದ ವನಜಾಕ್ಷಮ್ಮ ರವರು ಸಹ ಬಾಯಿಗೆ ಬಂದಂತೆ ಲೋಫರ್ ನನ್ನ ಮಕ್ಕಳಾ ಎಂತಾ ಬೈದಳು. ಶಂಕರಯ್ಯನವರು ಸ್ಥಳದಲ್ಲಿ ಬಿದ್ದಿದ್ದ ತೆಂಗಿನ ಮರದ ಕುರಂಬಾಳೆ ಕುಂಜಿಗೆಯಿಂದ ನನ್ನ ಬಲಭಾಗದ ಎದೆಗೆ ಹೊಡೆದು ರಕ್ತಗಾಯಪಡಿಸಿದ ಗಂಡ ಹೆಂಡತಿ ಇಬ್ಬರೂ ಸೇರಿ ನಮ್ಮ ತಂಟೆಗೆ ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂತಾ ಪ್ರಾಣ ಬೆದರಿಕೆ ಹಾಕಿದರು. ನನ್ನ ಮಗ ಬಂದು ಶಂಕರಯ್ಯರವರ ಕೈಯಲ್ಲಿದ್ದ ಕುರಂಬಾಳೆ ಕುಂಚಿಗೆಯನ್ನು ಕಿತ್ತುಕೊಂಡು ಜಗಳ ಬಿಡಿಸಿದನು. ನಾನು ಈ ವಿಚಾರವನ್ನು ಮನೆಯಲ್ಲಿ ಚರ್ಚೆ ಮಾಡಿ ಸುಮ್ಮನಾಗಿದ್ದೆ. ಈ ದಿನ ದಿನಾಂಕ: 21/07/2020 ರಂದು ಬೆಳಿಗ್ಗೆ ಶಂಕರಯ್ಯನವರು ಹೊಡೆದ ಜಾಗದಲ್ಲಿ ನೋವು ಕಾಣಿಸಿದ್ದರಿಂದ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿರುತ್ತೇನೆ. ನನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆಯನ್ನು ಹಾಕಿ ರಕ್ತಗಾಯಪಡಿಸಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಮೊ.ನಂ 62/2020 ಕಲಂ: 324,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ. 69/2020 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ:21/07/2020 ರಂದು ಸಂಜೆ 05.30 ಗಂಟೆಗೆ ಅರ್ಜಿದಾರರಾದ ಸಂದೀಪ್ ಬಿನ್ ನರಸಿಂಹಯ್ಯ, ಸುಮಾರು 27 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ರಾಮನಹಳ್ಳಿ, ಕಂದಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾದಲ್ಲಿ ವಾಸವಾಗಿದ್ದು, ಕಂದಿಕೆರೆ ಹೋಬಳಿ, ಮಾದನಹಳ್ಳಿ ಗ್ರಾಮದ ಸರ್ವೇ ನಂ. 20 ರಲ್ಲಿ 04 ಎಕರೆ ಜಮೀನು ಇದ್ದು, ಈ ಜಮೀನನ್ನು ನಾನೇ ಸಾಗುವಳಿ ಮಾಡಿಕೊಂಡು ಸುಮಾರು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಆದರೆ ಇದೇ ಜಮೀನು ನಮಗೆ ಸೇರಿದ್ದು ಎಂದು ನಮ್ಮ ಗ್ರಾಮದ ವಾಸಿಗಳು ಈ ಜಮೀನು ನಮಗೆ ಸೇರಿದ್ದು ಎಂದು ಗಲಾಟೆ ಮಾಡಿದ್ದು, ದಿ: 08/07/2020 ರಂದು ಚಿನಾಹಳ್ಳಿ ಠಾಣೆಗೆ ದೂರು ನೀಡಿದ್ದು, ಮತ್ತೆ ನಮ್ಮ ತಂಟೆಗೆ ಬಾರದ ಹಾಗೆ ಅನುಸರಿಸಿಕೊಂಡು ಹೋಗುತ್ತೇವೆ ಎಂದು ರಾಜಿ ಪತ್ರ ಬರೆದುಕೊಟ್ಟಿರುತ್ತಾರೆ. ಆದರೆ ನಾನು ದಿ: 21/07/2020 ರಂದು ಸುಮಾರು ಬೆಳಿಗ್ಗೆ 09.00 ಗಂಟೆಗೆ ಈ ಮೇಲ್ಕಂಡ ಜಮೀನನ್ನು ಜೆ.ಸಿ.ಬಿ ಮೂಲಕ ಹುದಿಬದ ಮಾಡಿಸಲು ಹೋಗಿ ಕೆಲಸ ಮಾಡುತ್ತಿದ್ದೆನು. ಮಧ್ಯಾಹ್ನ ಸುಮಾರು 01 ಗಂಟೆ ಸಮಯದಲ್ಲಿ ಕೆಲಸಗಾರರಿಗೆ ಊಟ ತರಲೆಂದು ಹೋಗಿ ತಿಮ್ಮನಹಳ್ಳಿಯಿಂದ ಊಟ ತೆಗೆದುಕೊಂಡು 01.25 ರ ಸಮಯಕ್ಕೆ ಬಂದೆನು. ಈ ತಿಮ್ಮಯ್ಯ ಬಿನ್ ಲೇಟ್ ಕೆಂಚಯ್ಯ, ಲೋಹಿತ್ ಬಿನ್ ತಿಮ್ಮಯ್ಯ, ಬಸವಯ್ಯ ಬಿನ್ ಲೇಟ್ ಕೆಂಚಯ್ಯ, ಮಣಿಕಂಠ ಬಿನ್ ಬಸವಯ್ಯ ಇವರುಗಳು ಸೇರಿಕೊಂಡು ನಾನು ಕೆಲಸ ಮಾಡುತ್ತಿದ್ದ ಜೆ.ಸಿ.ಬಿ ಯನ್ನು ನಿಲ್ಲಿಸಿದ್ದರು. ಆಗ ನಾನು ಹೋಗಿ ಏಕೆ ಕೆಲಸ ನಿಲ್ಲಿಸಿದ್ದೀರಿ, ಕೆಲಸ ಪ್ರಾರಂಭಿಸಿ ಎಂದೆನು. ಆಗ ಈ ತಿಮ್ಮಯ್ಯ, ಬಸವಯ್ಯ, ಲೋಹಿತ  ಈ ಮೂವರು ಬಂದು ಈ ಜಮೀನು ನಮಗೆ ಸೇರಿದ್ದು ನಿಮ್ಮ ಅಪ್ಪನದು ತೆಗೆದುಕೊಂಡು ಬಾ ಎಂದರು. ಆಗ ಏಕಾಏಕಿ ಈ ಲೋಹಿತ ನನ್ನ ಕೊರಳಪಟ್ಟಿ ಹಿಡಿದು ಏನೋ ಸೂಳೆಮಗನೆ ನನಗೆ ಎದುರು ಮಾತನಾಡುತ್ತೀಯ ಎಂದು ನನ್ನ ಹಾಕಿದ್ದ ಟೀ ಷರ್ಟ್ ‍ನ್ನು ಹರಿದು ಹಾಕಿದನು. ಅಲ್ಲಿಗೆ ಬಂದ ಮಣಿಕಂಠ ಹಾಗೂ ಬಸವಯ್ಯ ನನ್ನನ್ನು ಹಿಂಬದಿಯಿಂದ ಬಿಗಿಯಾಗಿ ಹಿಡಿದುಕೊಂಡರು. ಆಗ ಈ ತಿಮ್ಮಯ್ಯ ದೊಣ್ಣೆಯಿಂದ ನನ್ನ ತಲೆಗೆ ಬಲವಾಗಿ ಹೊಡೆದನು. ಆಗ ನಮ್ಮ ತಂದೆ ನರಸಿಂಹಯ್ಯ ಜಗಳ ಬಿಡಿಸಲು ಬಂದರು. ಅವರಿಗೂ ಸಹ  ಮೂರು ಜನ ಸೇರಿಕೊಂಡು ದೈಹಿಕವಾಗಿ ಹಲ್ಲೆ ಮಾಡಿ ನಮ್ಮ ತಂದೆ ಮೂರ್ಚೆ ಹೋಗುವಂತೆ ಮಾಡಿದರು. ಆಗ ನಾನು ನನ್ನನ್ನು ಹಿಡಿದುಕೊಂಡಿದ್ದ  ಮಣಿಕಂಠನಿಂದ ಬಿಡಿಸಿಕೊಂಡು ಬಂದು ನಮ್ಮ ತಂದೆಯವರನ್ನು ಎಬ್ಬಿಸುತ್ತಿದ್ದಾಗ ಈ ತಿಮ್ಮಯ್ಯ ಹಾಗೂ ಲೋಹಿತ ಬಲವಾಗಿ ದೊಣ್ಣೆಯಿಂದ ನನ್ನ ಮೇಲೆ ಎರಡು ಬಾರಿ ಹಲ್ಲೆ ಮಾಡಿ ರಕ್ತಗಾಯವಾಗುವಂತೆ ಮಾಡಿ ನನ್ನನ್ನು ಕೊಲೆ ಮಾಡುವ ಪ್ರಯತ್ನ ಮಾಡಿರುತ್ತಾರೆ ಹಾಗೂ ನಮ್ಮ ತಾಯಿ ಲಕ್ಷ್ಮಿದೇವಮ್ಮ ಇವರನ್ನೂ ಸಹ ಬಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ಸೂಳೆಮುಂಡೆ, ರಂಡೆ, ಆದರಗಿತ್ತಿ, ಬಸವಿ ಎಂದು ಲೋಹಿತ, ತಿಮ್ಮಯ್ಯ, ಬಸವಯ್ಯ ಈ ಮೂವರು ನಿಂದಿಸಿ ದೊಣ್ಣೆ ಹಾಗೂ ಮಚ್ಚಿನಿಂದ ಕೊಚ್ಚಿ ಹಾಕುತ್ತೇವೆ ಎಂದು ಬೆದರಿಕೆ ಹಾಕಿದರು. ನಂತರ ನಾನು ಚಿನಾಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ತಾವುಗಳು ದಯಮಾಡಿ ಈ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ಪಿರ್ಯಾದನ್ನು ಪಡೆದು ಠಾಣಾ ಮೊ.ನಂ. 69/2020 ಕಲಂ 323, 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 26 guests online
Content View Hits : 833646
Hackguard Security Enabled