lowborn ಅಪರಾಧ ಘಟನೆಗಳು 23-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 23-07-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ. 70/2020 ಕಲಂ 143, 147, 148, 323, 324, 54, 506, 114 ರೆ/ವಿ 149 ಐಪಿಸಿ

ದಿನಾಂಕ:22/07/2020 ರಂದು ಸಂಜೆ 07.30 ಗಂಟೆಗೆ ತಮ್ಮಯ್ಯ ಬಿನ್ ಸಣ್ಣತಿಮ್ಮಯ್ಯ, ಸುಮಾರು 50 ವರ್ಷ, ಪರಿಶಿಷ್ಟ ಜಾತಿ(ಎ.ಕೆ.), ಕೂಲಿಕೆಲಸ, ಸಿಂಗದಹಳ್ಳಿ, ಕಂದಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ  ಪಡೆಯುತ್ತಿದ್ದವರ ಹೇಳಿಕೆ ಪಿರ್ಯಾದನ್ನು ಪಡೆದಿದ್ದು, ಸದರಿ ಹೇಳಿಕೆಯ ಪಿರ್ಯಾದಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಹಾಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ದಿನಾಂಕ: 19/07/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ನಾನು ನನ್ನ ತೋಟಕ್ಕೆ ಹೋಗಿ ವಾಪಸ್ ನಮ್ಮ ಊರಿನ ಸೀನಪ್ಪನವರ ಪೆಟ್ಟಿಗೆ ಅಂಗಡಿ ಹಿಂಭಾಗ ಮನೆಗೆ ಹೋಗುತ್ತಿರುವಾಗ್ಗೆ ನಮ್ಮ ಊರಿನ ಗೋವಿಂದಯ್ಯನವರ ಮಗ ಬಸ್ಟ್ಯಾಂಡ್ ನಲ್ಲಿ ಕುಳಿತಿದ್ದವನು ನನ್ನ ಹಿಂದೆ ಬಂದು ಪೊಲೀಸ್ ಠಾಣೆಗೆ ಫೋನ್ ಮಾಡಿ ಬೆಂಗಳೂರಿನಿಂದ ಬಂದಿದ್ದಾರೆಂತ ಹೇಳಿದ್ದೀಯಾ, ಬೇರೆ ಯಾರೂ ನಮ್ಮ ಊರಿಗೆ ಬಂದಿಲ್ವ ಅಂತ ಬೋಳಿಮಗನೆ, ನಿನ್ನ ತಾಯ್ನಾ ಕ್ಯಾಯ, ಅಂತ ಗಲಾಟೆ ಮಾಡಿ ಒಂದು ಇಟ್ಟಿಗೆ ಚೂರಿನಿಂದ ನನ್ನ ಎಡಪಕ್ಕೆಗೆ ಹೊಡೆದು ಮೂಗೇಟು ಮಾಡಿದ್ದ. ಅಷ್ಟರಲ್ಲಿ ನಾನು ಕೂಗಾಡಿದ ಶಬ್ದ ಕೇಳಿ, ಲೇಟ್ ಮಸಿಯಪ್ಪನವರ ಮಗ ಗೋವಿಂದಯ್ಯ ಬಂದವನೇ ಜುಟ್ಟು ಹಿಡಿದು ನನಗೆ ನೋವಾಗುವಂತೆ ನನ್ನ ಎಳೆದಾಡಿ, ಈತನ ಜೊತೆಗೆ ಬಂದ ರಾಘವೇಂದ್ರ ಬಿನ್ ಗೋವಿಂದಯ್ಯ ಕಬ್ಬಿಣದ ರಾಡಿನಿಂದ ನನ್ನ ಎಡಭಾಗದ ತಲೆಗೆ ಹೊಡೆದು ರಕ್ತಗಾಯಪಡಿಸಿದ. ನಂತರ ನಾನು ತಪ್ಪಿಸಿಕೊಳ್ಳಲು ಹೋದಾಗ ಸಿದ್ದಗಂಗಮ್ಮ ಕೋಂ ದೇವರಾಜ, ಜಯಮ್ಮ ಕೋಂ ಮೂಡ್ಲಯ್ಯ ಹಾಗೂ ಶಾಂತಮ್ಮ ಕೋಂ ರಂಗನಾಥ, ಹಾಗೂ ರಂಗನಾಥ, ಶ್ರೀನಿವಾಸ ಬಿನ್ ಮೂಡ್ಲಯ್ಯ, ಕಮಲಮ್ಮ ಕೋಂ ರಾಮಚಂದ್ರಯ್ಯ ಇವರುಗಳೆಲ್ಲರೂ ಒಟ್ಟಾಗಿ ಬಂದು ಸಿದ್ದಗಂಗಮ್ಮ, ಜಯಮ್ಮ ಇವರು ಕುಡುಗೋಲಿನಿಂದ ಹೊಡೆಯಲು ಬಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಶಾಂತಮ್ಮ ಮತ್ತು ರಂಗನಾಥರವರು ತಂದಿದ್ದ ಚೂರಿಯಿಂದ ತಿವಿಯಲು ಬಂದರು. ಮೂಡ್ಲಯ್ಯನ ಮಗ ಶ್ರೀನಿವಾಸ ಏಕಾಏಕಿ ನನ್ನನ್ನು ಕುರಿತು ಈ ನನ್ನ ಮಗನೇ ಪೊಲೀಸ್ ಠಾಣೆಗೆ ಫೋನ್ ಮಾಡಿದ್ದು ಅಂತ ಮತ್ತೆ ನನ್ನ ಏಟಾಗಿದ್ದ ಜಾಗದಿಂದ ಕುತ್ತಿಗೆಯ ಕೆಳಗೆ ಹತ್ತಿರ ಕಲ್ಲಿನಿಂದ ಗುದ್ದಿದ. ಮೂಗೇಟಾಯ್ತು. ಗೋವಿಂದಯ್ಯನ ಸೊಸೆಯಾದ ಕಮಲಮ್ಮ ಕೋಂ ರಾಮಚಂದ್ರಯ್ಯ ಹಾಗೂ ರಾಮಚಂದ್ರಯ್ಯ ಇವರುಗಳು ನನ್ನ ಮಗನಿಗೆ ಬಂದು ಗತಿ ಕಾಣಿಸುತ್ತೇನೆಂತ ಕಾಲಿನಿಂದ ಒದ್ದು ಪ್ರಾಣ ಬೆದರಿಕೆ ಹಾಕಿದರು. ಇವರುಗಳು ನನ್ನನ್ನು ಹಿಂದಿನಿಂದಲೂ ಹೊಡೆಯಬೇಕೆಂಬ ಉದ್ದೇಶ ಇಟ್ಟುಕೊಂಡು ಈ ರೀತಿ ಗಲಾಟೆ ಮಾಡಿರುತ್ತಾರೆ. ನಾನು ನೋವಿನಲ್ಲಿ ಕೂಗಾಡಿಕೊಂಡು ಕಿರುಚಾಡಿದಾಗ ನನ್ನ ಹೆಂಡತಿಯಾದ ಗಿರಿಜಮ್ಮ ಹಾಗೂ ನನ್ನ ಅಕ್ಕನಾದ ಶಂಕರಮ್ಮನವರು ಜಗಳ ಬಿಡಿಸಿ ಮನೆಗೆ ಕರೆದುಕೊಂಡು ಹೋದರು. ಮನೆಯಿಂದ ನನ್ನನ್ನು ನನ್ನ ಹೆಂಡತಿ ಗಿರಿಜಮ್ಮ ಹಾಗೂ ನನ್ನ ಭಾಮೈದ ಮುರುಳರವರು ಯಾವುದೋ ವಾಹನದಲ್ಲಿ ಚಿನಾಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಸೇರಿಸಿದರು. ನಂತರ ಚಿಕಿತ್ಸೆ ಪಡೆದು ನಂತರ ವಾಪಸ್ ಮನೆಗೆ ಬಂದೆವು. ದಿನಾಂಕ: 20/07/2020 ರಂದು ನೋವು ಜಾಸ್ತಿಯಾಗಿದ್ದರಿಂದ 108 ಗೆ ಫೋನ್ ಮಾಡಿ ಚಿನಾಹಳ್ಳಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ. ಹಾಲಿ ನಾನು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಈ ಗಲಾಟೆ ಮಾಡಲು ಕಾರಣರಾದ ನನ್ನ ತಮ್ಮ ಶ್ರೀನಿವಾಸ ಬಿನ್ ತಿಮ್ಮಯ್ಯ ಹಾಗೂ ನನ್ನ ಅಣ್ಣನ ಮಗನಾದ ಚಿಕ್ಕಮೂಡ್ಲಯ್ಯ ಬಿನ್ ಚೌಡಯ್ಯ ಇವರು ಚಿತಾವಣೆಯಿಂದ ಈ ಘಟನೆ ನಡೆದಿರುತ್ತೆ. ಆದ್ದರಿಂದ ನನಗೆ ಹೊಡೆದು ಗಲಾಟೆ ಮಾಡಿ ಹೊಡೆದು ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಹೇಳಿಕೆಯನ್ನು ಸಂಜೆ 04.15 ರಿಂದ 05.15 ರವರೆಗೆ ನೀಡಿರುತ್ತೇನೆ ಎಂದು ನೀಡಿದ ಹೇಳಿಕೆ ಪಿರ್ಯಾದನ್ನು ಪಡೆದು ಠಾಣಾ ಮೊ.ನಂ. 70/2020 ಕಲಂ 143, 147, 148, 323, 324, 54, 506, 114 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ 11/2020 ಕಲ: 174 ಸಿ.ಆರ್.ಪಿ.ಸಿ

ದಿನಾಂಕ:22/07/2020 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಶ್ರೀಮತಿ ವೆಂಕಟಮ್ಮ ಕೋಂ ಯಲ್ಲಯ್ಯ, 78 ವರ್ಷ, ಭೋವಿ ಜನಾಂಗ, ಮನೆಕೆಲಸ, ಶಂಕರೇಶ್ವರನಗರ, ಹೊಸಹಳ್ಳಿ ಮಜರೆ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮಗೆ ಮೂರು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳು ಇರುತ್ತಾರೆ. ನಾನು ಮತ್ತು ನನ್ನ ಗಂಡ ಯಲ್ಲಯ್ಯ (93 ವರ್ಷ) ಬೇರೆ ಇದ್ದೆವು. ನನ್ನ ಗಂಡನಿಗೆ ಈಗ್ಗೆ ಸುಮಾರು ವರ್ಷಗಳಿಂದ ತುಂಬಾ ತಲೆನೋವು ಬರುತ್ತಿದ್ದು, ನನ್ನ ಮಕ್ಕಳು ಹಲವಾರು ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಸಹ ತಲೆನೋವು ಎಂದು ಹೇಳುತ್ತಿದ್ದರು. ದಿನಾಂಕ: 22/07/2020 ರಂದು ಬೆಳಿಗ್ಗೆ 8-00 ಗಂಟೆಗೆ ನನ್ನ ಗಂಡ ಯಲ್ಲಯ್ಯರವರು ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬರದ ಕಾರಣ ನಾನೇ ಹುಡುಕಿಕೊಂಡು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಬಿಟ್ಟಿರುವ ನೀಲಗಿರಿ ತೋಪಿನ ಕಡೆ ಬಂದು ಹುಡುಕಿದೆ. ಆಗ ತೋಪಿನ ಒಂದು ನೀಲಗಿರಿ ಮರಕ್ಕೆ ನನ್ನ ಗಂಡ ಯಲ್ಲಯ್ಯನವರು ನೇಣು ಹಾಕಿಕೊಂಡು ನೇತಾಡುತ್ತಿದ್ದರು. ಅದನ್ನು ನೋಡಿದ ನಾನು ಕೂಗಿಕೊಂಡು ಶಂಕರೇಶ್ವರನಗರಕ್ಕೆ ಹೋಗಿ ಹೇಳಿದಾಗ ನನ್ನ ಮಗ ಜಗಧೀಶ ಮತ್ತು ಇತರರು ಸ್ಥಳಕ್ಕೆ ಬಂದು ನೋಡಿ ಇನ್ನು ಜೀವ ಇರಬಹುದೆಂದು ತಿಳಿದು, ಹಗ್ಗ ಕಟ್ ಮಾಡಿ ಕೆಳಕ್ಕೆ ಇಳಿಸಿ ಉಪಚರಿಸಿ ನೋಡಲಾಗಿ ನನ್ನ ಗಂಡ ಯಲ್ಲಯ್ಯರವರು  ಮೃತಪಟ್ಟಿದ್ದರು. ನನ್ನ ಗಂಡ ಯಲ್ಲಯ್ಯರವರಿಗೆ ಬರುತ್ತಿದ್ದ ತಲೆನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬದುಕುವುದೇ ಬೇಡ ಎಂತ ತೀರ್ಮಾನ ಮಾಡಿ ತನ್ಮೂಲಕ ತಾನೇ ನೀಲಗಿರಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ. ಮೃತರ ಸಾವಿನಲ್ಲಿ  ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಮೃತ ದೇಹ ನೇಣು ಹಾಕಿಕೊಂಡ ಸ್ಥಳದಲ್ಲಿಯೇ ಇರುತ್ತೆ. ತಾವು  ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಯು,ಡಿ.ಆರ್ ನಂ-11/2020 ಕಲಂ: 174 ಸಿ,ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

 

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 833652
Hackguard Security Enabled