lowborn ಅಪರಾಧ ಘಟನೆಗಳು 24-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 24-07-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ ನಂ 71/2020 ಕಲಂ 427, 447 ಐಪಿಸಿ ರೆ/ವಿ ಕಲಂ 3, Prevention of Public Property Damages Act - 1984

ದಿನಾಂಕ:- 23/07/2020 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ತಹಸೀಲ್ದಾರ್ ರವರ ಕಚೇರಿಯಿಂದ ಗ್ರಾಮಲೆಕ್ಕಿಗರಾದ ರಘುರವರು ತಂದು ಹಾಜರುಪಡಿಸಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕ್‍, ಶೆಟ್ಟಿಕೆರೆ ಹೋಬಳಿ, ಪಂಕಜನಹಳ್ಳಿ ಗ್ರಾಮದ ಸರ್ವೇ ನಂ. 10 ಹಾಗೂ 01 ರ ಜಮೀನಿನಲ್ಲಿ ಸ್ಥಾಪಿತವಾಗಿದ್ದು, ಸದರಿ ದೇವಸ್ಥಾನದ ಪಕ್ಕದಲ್ಲಿ ಪುರಾತನವಾದ ಕಲ್ಯಾಣಿ ಇರುತ್ತದೆ. ಈ ಕಲ್ಯಾಣಿಯನ್ನು ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಸೂಚನೆ ಮೇರೆಗೆ ಗ್ರಾಮ ಪಂಚಾಯತಿಯಿಂದ ಕಲ್ಯಾಣಿಯನ್ನು ಶುದ್ದಪಡಿಸಿ ಕಲ್ಯಾಣಿಯ ಅಕ್ಕಪಕ್ಕ ಗಿಡಗಳನ್ನು ನೆಡಿಸಿ ಸದರಿ ಗಿಡಗಳನ್ನು ಕಾವಲು ಕಾಯಲು ಅರಣ್ಯ ಇಲಾಖೆಯಿಂದ ದಾಸಣ್ಣ ಎಂಬ ಕಾವಲುಗಾರರನ್ನು ನೇಮಿಸಿರುತ್ತಾರೆ. ಈ ಜಾಗವನ್ನು ಪಂಕಜನಹಳ್ಳಿ ಗ್ರಾಮದ ಎಸ್. ವಿಶ್ವನಾಥ್ ಬಿನ್ ಸಿದ್ಧರಾಮಯ್ಯ ಎಂಬುವವರು ಒತ್ತುವರಿ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ದೂರು ನೀಡಿದ್ದು, ಈ ಬಗ್ಗೆ ಸದರಿ ಸ್ಥಳದ ಪರಿಶೀಲನೆ ಸಂದರ್ಭದಲ್ಲಿ ಸದರಿ ಸ.ನಂ. ಜಮೀನನ್ನು ಅಳತೆ ಮಾಡುವವರೆಗೆ ಸದರಿ ಜಾಗವನ್ನು ಯಾವುದೇ ಕಾರಣಕ್ಕೂ ಉಳುಮೆ ಮಾಡಬಾರದಾಗಿ ನಿರ್ದೇಶನ ನೀಡಲಾಗಿರುತ್ತದೆ. ಅದರಂತೆ ಅಳತೆಗೆ ದಿನಾಂಕವನ್ನು ನಿಗದಿಪಡಿಸುವಂತೆ ತಾಲ್ಲೂಕು ಸರ್ವೇಯರ್ ರವರಿಗೆ ಸೂಚಿಸಲಾಗಿರುತ್ತದೆ. ಈ ಮಧ್ಯೆ ಸದರಿ ಜಾಗದಲ್ಲಿ ಇದ್ದಂತಹ ಗಿಡಗಳನ್ನು ಶ್ರೀ ಎಸ್. ವಿಶ್ವನಾಥ್ ಬಿನ್ ಸಿದ್ಧರಾಮಯ್ಯ ಇವರು ಬುಡಸಮೇತ ಕಿತ್ತುಹಾಕಿರುವ ಬಗ್ಗೆ ಗ್ರಾಮಸ್ಥರು ತಿಳಿಸಲಾಗಿ ಮತ್ತೊಮ್ಮೆ ಖುದ್ದು ಸ್ಥಳಕ್ಕೆ ಕರೆಯಿಸಿ ವಿಚಾರಣೆ ಮಾಡಲಾಗಿ ತಾನೇ ಗಿಡಗಳನ್ನು ಕಿತ್ತಿರುವುದು ನಿಜ ಎಂಬುದಾಗಿ ತಿಳಿಸಿರುತ್ತಾರೆ. ಸರ್ಕಾರಿ ಜಮೀನನ್ನು ಅಳತೆ ಮಾಡುವವರೆಗೂ ಸದರಿ ಜಮೀನಿಗೆ ಪ್ರವೇಶ ಮಾಡಬಾರದಾಗಿ ತಿಳಿಸಿದರೂ ಎಸ್.ವಿಶ್ವನಾಥ್ ಬಿನ್ ಸಿದ್ಧರಾಮಯ್ಯ ಇವರು ಸರ್ಕಾರಿ ಜಾಗದಲ್ಲಿರುವ ಅರಣ್ಯ ಇಲಾಖೆಯಿಂದ ನೆಟ್ಟಿರುವ ಗಿಡಗಳನ್ನು ಕಿತ್ತು ಹಾಕಿರುತ್ತಾರೆ. ಆದ್ದರಿಂದ ಎಸ್. ವಿಶ್ವನಾಥ್ ಬಿನ್ ಸಿದ್ಧರಾಮಯ್ಯ ಇವರ ಮೇಲೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮಸ್ಥರ ಮಹಜರ್, ವಿಶ್ವನಾಥ ಇವರ ಹೇಳಿಕೆ, ಕಾವಲುಗಾರನ ಹೇಳಿಕೆ ಹಾಗೂ ಛಾಯಾಚಿತ್ರದ ಪ್ರತಿಗಳನ್ನು ಲಗತ್ತಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಮೇರೆಗೆ ಠಾಣಾ ಮೊ ನಂ 71/2020 ಕಲಂ 427, 447 ಐಪಿಸಿ ರೆ/ವಿ ಕಲಂ 3, Prevention of Public Property Damages Act - 1984 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

ದಂಡಿನಶಿವರ ಠಾಣಾ ಯು ಡಿ ಆರ್ ನಂ: 14/2020 ಕಲಂ 174 ಸಿ ಆರ್ ಪಿ ಸಿ

ದಿನಾಂಕ:23-07-2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಛಾಯಾ ಕೋಂ ರಮೇಶ್ 27 ವರ್ಷ ಆದಿ ಕರ್ನಾಟಕ ನೊಣವಿನಕೆರೆ ಗ್ರಾಮ ತಿಪಟೂರು ತಾ/  ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ದಿನಾಂಕ:17-07-2020 ರಂದು ಮಧ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ನನ್ನ ತಂಗಿಯಾದ ಚೈತ್ರ ಸಿದ್ಧಾ ಪುರದ ತನ್ನ ಮನೆಯಲ್ಲಿ ನೀರು ಬಿಸಿ ಮಾಡಲು ಒಲೆಗೆ ತೆಂಗಿನ ಮಟ್ಟೆಗಳನ್ನು ಹಾಕಿ ಸೀಮೆ ಎಣ್ಣೆ ಎರಚಿ ಬೆಂಕಿ ಹಚ್ಚುವಾಗ ಹಿಂದೆಯೇ ಬೆಂಕಿಯ ಉರಿ ರಾಚಿ ನನ್ನ ತಂಗಿಯ ಮೈ ಮತ್ತು ಕಾಲುಗಳ ಮೇಲೆ ಬೆಂಕಿ ಹತ್ತಿಕೊಂಡ ಪ್ರಯುಕ್ತ ಆಕೆಯನ್ನು ಆಕೆಯ ಗಂಡ ಸುರೇಶ್ ಆಕೆಯ ಮೇಲೆ ನೀರು ಎರಚಿ ತುರುವೇಕೆರೆ ಸರ್ಕಾರಿ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಅದೇ ದಿನ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಈ ವಿಚಾರವನ್ನು ಆಕೆಯ ಗಂಡ ಸುರೇಶ ಮತ್ತು ನನ್ನ ತಾಯಿಯಾದ ಕೆಂಪಮ್ಮ ಇವರಿಂದ ತಿಳಿದುಕೊಂಡೆನು. ನನ್ನ ತಂಗಿ ಚಿಕಿತ್ಸೆಯಿಂದ ಗುಣಮುಖವಾಗದೆ ದಿನಾಂಕ:23-07-2020 ರಂದು ಬೆಳಿಗ್ಗೆ 7-45 ಗಂಟೆ ಸಮಯದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ.  ನನ್ನ ತಂಗಿ ನೀರು ಕಾಯಿಸಲು ಹೋಗಿ ಒಲೆಗೆ ತೆಂಗಿನ ಮಟ್ಟೆಗಳನ್ನು ಇಟ್ಟು ಮಟ್ಟೆಗೆ ಸೀಮೆ ಎಣ್ಣೆ  ಹಾಕಿ ಬೆಂಕಿ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿಯ ಉರಿ ಹೊರಗೆ ರಾಚಿ ಆಕೆಯ ಮೈ ಮತ್ತು ಕಾಲುಗಳ ಮೇಲೆ ಬೆಂಕಿ ಹತ್ತಿಕೊಂಡು ಸುಟ್ಟ ಗಾಯ ಗಳಿಂದ ಮೃತಪಟ್ಟಿರುತ್ತಾಳೆ.  ಆಕೆಯ ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನ ಇರುವುದಿಲ್ಲ.  ಆದ್ದರಿಂದ ಆಕೆಯ ಶವದ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಇತ್ಯಾದಿ ಪಿರ್ಯಾದಿ ನೀಡಿದ ದೂರನ್ನು ಪಡೆದು ದಂಡಿನಶಿವರ ಠಾಣಾ ಯು ಡಿ ಆರ್ ನಂ: 14/2020 ಕಲಂ 174 ಸಿ ಆರ್ ಪಿ ಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ,

 

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 45/2020 ಕಲಂ 379 ಐಪಿಸಿ

ದಿ:11/07/2020 ರಂದು ಮಧ್ಯಾಹ್ನ 12-30 ಗಂಟಯಲ್ಲಿ ಫಿರ್ಯಾದಿ  ಸೋಮಶೇಖರ್‍ ಬಿನ್‍ ಲೇಟ್ ತಿಪ್ಪೆಸ್ವಾಮಿ ಬಡವನಹಳ್ಳಿ  ಠಾಣೆಗೆ ಹಾಜರಾಗಿ, ನಾನು ತುಮಕೂರಿನ ತರಕಾರಿ ಮಾರ್ಕೇಟ್ ವ್ಯಾಪಾರ ಮಾಡಿಕೊಂಡಿರುತ್ತೇನೆ. ನನ್ನ ತಾಯಿ ಸುಮಾರು 75 ವರ್ಷ ವಯಸ್ಸಿನ ಗೌರಮ್ಮ ನಮ್ಮ ಸ್ವಂತ ಊರಾದ ಬಡವನಹಳ್ಳಿ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಅವರ ಬಳಿ ಸುಮಾರು 40 ಗ್ರಾಂ ತೂಕದ 1,25,000/- ರೂ ಬೆಲೆ ಬಾಳುವ ಬಂಗಾರದ ಎರಡು ಎಳೆಯ ಮಾಂಗಲ್ಯ ಸರ ಇದ್ದು, ದಿ:03/07/2020 ರಂದು ಸಂಜೆ ಸ್ನಾನ ಮಾಡಿ ಪೂಜೆ ಮಾಡಲು ಸರವನ್ನು ನಮ್ಮ ತಾಯಿ ಬಿಚ್ಚಿ ದಿವಾನಕಾಟಿನ ದಿಂಬಿನ ಹತ್ತಿರ ಇಟ್ಟು ಹಾಕಿಕೊಳ್ಳುವುದನ್ನು ಮರೆತ್ತಿದ್ದು ರಾತ್ರಿ ಸುಮಾರು 08-30 ಗಂಟೆಯಲ್ಲಿ ಮಳೆ ಬರುತ್ತಿದ್ದಾಗ, ಯಾರೋ ಸುಮಾರು 30-35 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಮಳೆ ಬರುತ್ತಿದೆ ಎಂದು ನಮ್ಮ ಮನೆಯ ಹತ್ತಿರ ಬಂದು ಕುಡಿಯಲು ನೀರು ಕೇಳಿದ್ದು, ನನ್ನ ತಾಯಿ ನೀರು ತರಲು ಒಳಗೆ ಹೋದಾಗ ದಿವಾನಕಾಟಿನ ದಿಂಬಿನ ಬಳಿ ಇದ್ದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ತಡವಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ  UDR NO  : 20/2020  U/S 174 CRPC

ದಿನಾಂಕ 23/07/2020 ರಂದು ಸಂಜೆ ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಬಿಳಿಯಪ್ಪ ಬಿನ್ ಲೇಟ್ ಕಾಳಯ್ಯ, 60 ವರ್ಷ, ವ್ಯವಸಾಯ, ಪರಿಶಿಷ್ಟ ಜಾತಿ, ಶೆಟ್ಟಿಪುರ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿ ಗ್ರಾಮದ ಕೃಷ್ಣೇಗೌಡರ ಹೆಂಡತಿ ಜಯ್ಯಮ್ಮ ರವರಿಗೆ 03 ಜನ ಹೆಣ್ಣು ಮಕ್ಕಳಿದ್ದು, 3 ನೇ ಮಗಳಾದ ನೇತ್ರಾವತಿ 09 ನೇ ತರಗತಿ ವಿದ್ಯಾರ್ಥಿಯಾಗಿದ್ದು ನೇತ್ರಾವತಿಗೆ 14 ವರ್ಷ ವಯಸ್ಸಾಗಿದ್ದು ಈ ದಿನ ದಿನಾಂಕ 23-07-2020 ರಂದು ಜಯಮ್ಮ ರಶ್ಮಿತ ಇಬ್ಬರು ಹೊಲದ ಹತ್ತಿರಕ್ಕೆ ಹೋಗಿದ್ದು ಮನೆ ಬಳಿ ನೇತ್ರಾವತಿ ಅವರ ಅಜ್ಜಿಯಾದ ತಿಮ್ಮಮ್ಮ ಇದ್ದರು ಆ ಸಮಯದಲ್ಲಿ ಈ ದಿನ ಬೆಳಿಗ್ಗೆ ಸುಮಾರು 11 ಗಂಟೆಯಲ್ಲಿ ನೇತ್ರಾವತಿಯು ಅವರ ವಾಸದ ಮನೆಯ ಹಿಂದಿನ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಆಗ ತಿಮ್ಮಮ್ಮ ರವರು ನೋಡಿಕೊಂಡು ಕೂಗಾಡುತ್ತಿದ್ದು ಆಗ ನಮ್ಮ ಗ್ರಾಮದ ಕಾಂರಾಜು ಬಿನ್ ಕೃಷ್ಣಪ್ಪ , ಚಂದನ್ ಗೌಡ ಬಿನ್ ನಂಜುಡಯ್ಯ ಈ ಇಬ್ಬರು ಸೇರಿಕೊಂಡು ನೇತ್ರಾವತಿಯನ್ನು ನೇಣಿನಿಂದ ಇಳಿಸಿಕೊಂಡು ಆಕೆಗೆ ಚಿಕಿತ್ಸೆಯನ್ನು ಕೊಡಿಸುವ ಸಲುವಾಗಿ ಅಮೃತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ ವೈದ್ಯರು ನೇತ್ರಾವತಿಯನ್ನು ಮದ್ಯಾಹ್ನ ಸುಮಾರು 12 ಗಂಟೆಯಲ್ಲಿ ಚೆಕ್ ಮಾಡಿ ಆಕೆ ಮರಣ ಹೊಂದಿರುತ್ತಾರೆ ಎಂದು ತಿಳಿಸಿರುತ್ತಾರೆ, ನೇತ್ರಾವತಿ ನೇಣು ಹಾಕಿಕೊಂಡು ಸತ್ತಿರುವ ಬಗ್ಗೆ ನಾನು ಆಕೆಯ ತಾಯಿ ಜಯಮ್ಮಳನ್ನು ವಿಚಾರ ಮಾಡಲಾಗಿ  ನೇತ್ರಾವತಿಗೆ ತಿಂಗಳು ತಿಂಗಳು ಮುಟ್ಟಗುವ ಸಮಯದಲ್ಲಿ ಆಕೆಗೆ ವಿಪರೀತವಾಗಿ ಹೊಟ್ಟೆನೋವು ಬರುತ್ತಿದ್ದು ನಾವು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದ್ದು ಆದರು ಗುಣವಾಗದೆ ಆಗಾಗ ವಿಪರೀತವಾಗಿ ಹೊಟ್ಟೆನೋವು ಬರುತ್ತಿದ್ದು ಈ ನೋವನ್ನು ತಾಳಲಾರದೆ ನೇತ್ರಾವತಿ ನೇಣು ಬಿಗಿದುಕೊಂಡು ಮರಣ ಹೊಂದಿರುತ್ತಾಳೆ ವಿನಃ ಅವಳ ಸಾವಿನಲ್ಲಿ ಬೇರೆಯಾವುದೆ ಅನುಮಾನ ವಿರುವುದಿಲ್ಲ ಎಂದು ತಿಳಿಸಿರುತ್ತಾರೆ ನೇತ್ರಾವತಿ ಹೆಣವು ಅಮೃತೂರು ಸರ್ಕಾರಿ ಆಸ್ಪತ್ರೆಯಲ್ಲಿರುತ್ತೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ .

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 38 guests online
Content View Hits : 833680
Hackguard Security Enabled