lowborn ಅಪರಾಧ ಘಟನೆಗಳು 25-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 25-07-20

ಹುಲಿಯೂರುದುರ್ಗ ಪೊಲೀಸ್‌ ಠಾಣಾ CR NO  : 84/2020  U/S 87 KP ACT

ದಿನಾಂಕ 24-07-2020 ರಂದು ರಾತ್ರಿ 07-15 ಗಂಟೆಗೆ ಪಿ ಎಸ್ ಐ ಸಾಹೇಬರು ಪಿ ಸಿ 426 ರವರ ಮುಖೇನ ಕಳುಹಿಸಿ ಕೊಟ್ಟ ದೂರಿನಂಶವೇನೆಂದರೆ  ದಿನಾಂಕ: 24-07-2020 ರಂದು ಸಾಯಂಕಾಲ 04-00 ಗಂಟೆಯಲ್ಲಿ ನಾನು ಪೊಲೀಸ್‌ ಠಾಣೆಯಲ್ಲಿರುವಾಗ ಹುಲಿಯೂರುದುರ್ಗ ಪೊಲೀಸ್ ಠಾಣಾ ಸರಹದ್ದು ಹುಲಿಯೂರುದುರ್ಗ ಹೋಬಳಿ ಕೆಂಕೆರೆ ಗ್ರಾಮದ ಬಸವಣ್ಣನ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಂದರ್‌ ಬಾಹರ್‌ ಇಸ್ವೀಟ್‌ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು ಜೂಜಾಟವಾಡುತ್ತಿರುವವರ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಜರುಗಿಸುವ ಸಲುವಾಗಿ ಪಂಚಾಯ್ತದಾರರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ದಾಳಿ ಮಾಡುವ ಸಮಯದಲ್ಲಿ ಪಂಚಾಯ್ತದಾರರಾಗಿ ಬಂದು ಸಹಕರಿಸುವಂತೆ ಅವರಿಗೆ ತಿಳಿಸಿ ಅವರು ಒಪ್ಪಿದ ನಂತರ ಸಾಯಂಕಾಲ 04-15 ಗಂಟೆಗೆ ಠಾಣೆಯನ್ನು ಬಿಟ್ಟು ನಾನು, ಪೊಲೀಸ್ ಸಿಬ್ಬಂದಿ ಮತ್ತು ಪಂಚಾಯ್ತುದಾರರೊಂದಿಗೆ ಖಾಸಗಿ ವಾಹನದಲ್ಲಿ ಸಾಯಂಕಾಲ 04-45 ಗಂಟೆಯ ಸಮಯಕ್ಕೆ ಕೆಂಕೆರೆ ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿಯೇ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಬಸವಣ್ಣನ ದೇವಸ್ಥಾನದ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಸಾರ್ವಜನಿಕ ಸ್ಥಳವಾದ ಬಸವಣ್ಣನ ದೇವಸ್ಥಾನದ ಮುಂಭಾಗದ ಆವರಣದಲ್ಲಿ 04 ಜನರು ಕುಳಿತುಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳಿಂದ  ಆಚೆ, ಒಳಗೆ (ಅಂದರ್-ಬಾಹರ್) ಎಂತ ಮಾತನಾಡಿಕೊಳ್ಳುತ್ತಾ ಜೂಜಾಟವಾಡುತ್ತಿದ್ದುದು ಕಂಡು ಬಂತು. ಕೂಡಲೇ ನಾನು ಮತ್ತು ನಮ್ಮ ಸಿಬ್ಬಂದಿಯವರು ಸೇರಿಕೊಂಡು ಜೂಜಾಟವಾಡುತ್ತಿದ್ದವರನ್ನು ಸುತ್ತುವರಿದು ದಾಳಿ ಮಾಡಲು ಹೋಗುವಷ್ಟರಲ್ಲಿ ಜೂಜಾಟವಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೊಲೀಸ್‌ರನ್ನು ನೋಡಿ ಎದ್ದು ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ನಾವುಗಳು ಅವರನ್ನು ಸುತ್ತುವರಿದು 03 ಜನ ಆಸಾಮಿಗಳನ್ನು ಸ್ಥಳದಲ್ಲಿಯೇ ಹಿಡಿದುಕೊಂಡೆವು. ಒಬ್ಬ ಆಸಾಮಿಯು ಸ್ಥಳದಿಂದ ಓಡಿ ಹೋದನು. ಸ್ಥಳದಲ್ಲಿ ಹಿಡಿದುಕೊಂಡ ಆಸಾಮಿಗಳ ಹೆಸರು ವಿಳಾಸವನ್ನು ಕೇಳಲಾಗಿ 1) ಕೃಷ್ಣಮೂರ್ತಿ ಬಿನ್ ಲೇ|| ಕೆಂಚಯ್ಯ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಕೆಂಕೆರೆ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ 2) ನರಸಿಂಹಯ್ಯ ಬಿನ್ ಲೇ|| ಶಂಕರಯ್ಯ, 40 ವರ್ಷ, ಒಕ್ಕಲಿಗರು, ವ್ಯವಸಾಯ, ಸುಗ್ಗನಹಳ್ಳಿ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ 3) ನಾಗೇಶ ಬಿನ್ ಚಲುವಯ್ಯ, 43 ವರ್ಷ, ಬೆಸ್ತರ ಜನಾಂಗ, ವ್ಯವಸಾಯ, ಮರಡೀಪುರ, ದುದ್ದ ಹೋಬಳಿ, ಮಂಡ್ಯ ತಾಲ್ಲೂಕು & ಜಿಲ್ಲೆ ಎಂದು ತಿಳಿಸಿರುತ್ತಾರೆ. ಓಡಿ ಹೋದ ಆಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ 4) ಸಿದ್ದರಾಜು @ ಸಿದ್ದ ಬಿನ್ ಜವರಯ್ಯ, ಕೆಂಕೆರೆ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೂಕು ಎಂದು ತಿಳಿಸಿದರು. ನಂತರ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಣವನ್ನು ಎಣಿಕೆ ಮಾಡಲಾಗಿ 3700/- ರೂ ನಗದು ಹಣ, 52 ಇಸ್ಪೀಟು ಎಲೆಗಳು ಮತ್ತು ಒಂದು ಹಳೆಯ ನ್ಯೂಸ್ ಪೇಪರ್ ಇರುತ್ತೆ ಎಂದು  ಕಾನೂನು ಕ್ರಮ ಜರುಗಿಸಿ ಸ್ಥಳದಲ್ಲಿಯೇ ದೂರನ್ನು ಬರೆದು ಠಾಣಾ ಸಿಬಂಧಿಯಾದ ರಂಗಸ್ವಾಮಿ ಪಿ ಸಿ 426  ರವರ ಮೂಲಕ ಮುಂದಿನ ಕ್ರಮಕ್ಕೆ ಠಾಣೆಗೆ ಕಳುಹಿಸಿಕೊಟ್ಟ ದೂರನ್ನು ಪಡೆದು ಠಾಣಾ ಎನ್ ಸಿ ಆರ್ ನಂ143/2020 ರಲ್ಲಿ ದಾಖಲಿಸಿರುತ್ತೆ ಪಿ,ಎಸ್,ಐ ರವರು  ನೀಡಿರುವ ದೂರಿನ ಅಂಶವು ಅಸಂಜ್ಞೇಯ ಪ್ರಕರಣವಾಗಿರುತ್ತೆ. ಆದ್ದರಿಂದ ಠಾಣಾ ಎನ್,ಸಿ,ಆರ್ ನಂ-143/2020 ರಲ್ಲಿ ಕಲಂ: 87 ಕೆ.ಪಿ ಆಕ್ಟ್ ರೀತ್ಯಾ ಪ್ರಥಮ ವರ್ತಮಾನ ವರದಿಯನ್ನು ತಯಾರಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಬೇಕೆಂದು ಘನ ನ್ಯಾಯಾಲಯದಲ್ಲಿ ಕೋರಿದ್ದು, ಘನ ನ್ಯಾಯಾಲಯವು ಅನುಮತಿ ನೀಡಿದ್ದನ್ನು ಪಡೆದು ಇದೇ ದಿವಸ ರಾತ್ರಿ 07-15  ಗಂಟೆಗೆ ಠಾಣಾ ಮೊ,ನಂ-84/2020 ಕಲಂ-87 ಕೆ,ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

 

ತಿಪಟೂರು ಗ್ರಾಮಂತರ ಪೊಲೀಸ್ ಠಾಣಾ ಮೊ.ನಂ- 64/2020 ಕಲಂ; 323,324 ರೆ/ವಿ 149 ಐ.ಪಿ.ಸಿ

ದಿನಾಂಕ:24/07/2020 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ಎನ್ ಅನಿಲ್ ಕುಮಾರ್ ಬಿನ್ ಲೇಟ್ ನಾಗರಾಜರಾವ್, 42 ವರ್ಷ, ಭಾವಸಾರ ಕ್ಷತ್ರಿಯಾ ಜನಾಂಗ, ಕೋಳಿ ವ್ಯಾಪಾರ, 4ನೇ ಮುಖ್ಯ ರಸ್ತೆ,  ಕೆ.ಆರ್ ಬಡಾವಣೆ, ತಿಪಟೂರು ಟೌನ್ ರವರಿಂದ ಮಧ್ಯಾಹ್ನ 2-00 ಗಂಟೆಯಿಂದ 2-30 ಗಂಟೆಯವರೆಗೆ ಪಡೆದ ಹೇಳಿಕೆಯ ಅಂಶವೇನೆಂದರೆ, ನಾನು ಟಿ.ಎಂ ಮಂಜುನಾಥನಗರದ ರಂಗನಾಥ ಎಂಬುವರೊಂದಿಗೆ  ಕೋಳಿ ವ್ಯಾಪಾರವನ್ನು ಮಾಡುತ್ತಿರುತ್ತೇನೆ. ಕೋಳಿ ವ್ಯಾಪಾರವನ್ನು ರಂಗನಾಥ್ ರವರ KA-44 A-0358 ರ ಬಜಾಜ್ ಮ್ಯಾಕ್ಸಿಮೋ ಆಟೋದಲ್ಲಿ ಮಾಡುತ್ತಿದ್ದು, ನಾವು ಈ ದಿನ ದಿನಾಂಕ: 24/07/2020 ರಂದು ಬೆಳಿಗ್ಗೆ 6-30 ಗಂಟೆಯಲ್ಲಿ ಸದರಿ ಆಟೋದಲ್ಲಿ ನಾನು ಮತ್ತು ರಂಗನಾಥ್ ರವರು ತಿಪಟೂರನ್ನು ಬಿಟ್ಟು ಹಾಸನ ರಸ್ತೆಯ ಚಿಂದೇನಹಳ್ಳಿ ಗಡಿಗೆ ಹೋಗಿ ಪುನಃ ವಾಪಸ್ ಗಡಿಯಿಂದ ತಿಪಟೂರಿಗೆ ಹೋಗಲು ರಂಗಾಪುರ ಗ್ರಾಮಕ್ಕೆ ಬೆಳಿಗ್ಗೆ ಸುಮಾರು 9-15 ಗಂಟೆಯಲ್ಲಿ ಬಂದಿದ್ದು, ಈ ಸಮಯದಲ್ಲಿ ರಂಗಾಪುರ ಗ್ರಾಮದಲ್ಲಿ ನಮ್ಮ ಎದುರಿಗೆ KA-05 HE-1062 ನೇ ಮೋಟಾರ್ ಸೈಕಲ್ ಸವಾರ ಬಂದಿದ್ದು, ಎರಡೂ ವಾಹನಗಳಿಗೆ ಮುಖಾಮುಖಿ ಡಿಕ್ಕಿ ಉಂಟಾಯಿತು. ಈ ಸಮಯ KA-44 A-0358 ರ ಆಟೋವನ್ನು ನಾನೇ ಓಡಿಸುತ್ತಿದ್ದು, ರಂಗನಾಥ ನನ್ನ ಪಕ್ಕದಲ್ಲಿ ಕುಳಿತಿದ್ದ ಮೋಟಾರ್ ಸೈಕಲ್ ಸವಾರ ಕೆಳಕ್ಕೆ ಬಿದ್ದನು. ಈ ಅಪಘಾತ ನೋಡಿದ ಅಲ್ಲೇ ಇದ್ದ 4-5 ಜನ ಯಾರೋ ಸಾರ್ವಜನಿಕರು ನನಗೆ ಕಾಲಿನಿಂದ ಮೈ-ಕೈಗೆ ಒದ್ದು, ಕೈಗಳಿಂದ ನನ್ನ ಮೈಕೈಗೆ ಹೊಡೆದರು. ಅಲ್ಲದೇ ಅಲ್ಲೇ ಇದ್ದ ತೆಂಗಿನ ಎಡೆಮೊಟ್ಟೆಯಿಂದ ನನ್ನ ಬೆನ್ನಿಗೆ, ಕಾಲಿಗೆ, ಹೊಡೆದರು. ಅಲ್ಲದೆ ನನ್ನ ಮುಖಕ್ಕೆ ಗುದ್ದಿದ್ದರಿಂದ ಬಲಭಾಗದ ಮುಖದ ಕೆನ್ನೆ ಊದಿರುತ್ತದೆ. ಅಲ್ಲದೆ ಬಲಭಾಗದ ಕಿವಿಗೆ ಪೆಟ್ಟು ಬಿದ್ದಿರುತ್ತದೆ. ನಾನು ಸಾರ್ವಜನಿಕರನ್ನು ನೋಡಿದರೆ ಗುರುತಿಸುತ್ತೇನೆ. ನನಗೆ ಒದ್ದು ಕೈಯಿಂದ ಮತ್ತು ಎಡೆಮಟ್ಟೆಯಿಂದ ಹೊಡೆದಿರುವ ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಕೋರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಈ ನನ್ನ ಹೇಳಿಕೆಯನ್ನು ನೀಡಿರುತ್ತೇನೆಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆಯನ್ನು ಪಡೆದು 2-45 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ನಂ 64/2020 ಕಲಂ; 323,324 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-108/2020 ಕಲಂ 457,380 ಐಪಿಸಿ

ದಿನಾಂಕ-24/07/2020 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿ ಶ್ರೀಮತಿ ಜಯಲಕ್ಷ್ಮಮ್ಮ ಹೆಚ್ ಕೋಂ ದಾಸಪ್ಪ, 46 ವರ್ಷ, ಬೋವಿ ಜನಾಂಗ, ಕಂದಾಯ ತನಿಖಾಧಿಕಾರಿಗಳು, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು ವಾಸ ಸಿದ್ದರಾಮೇಶ್ವರ ಬಡವಾಣೆ, ತುಮಕೂರು ನಗರ, ದೂ.ನಂ-9844046613 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ನಾನು ಹೆಬ್ಬೂರು ಕಂದಾಯ ರನಿಖಾದಿಖಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸರಿಯಷ್ಠೆ, ನಿಡುವಳಲು ಗ್ರಾಮದಲ್ಲಿ ಶ್ರೀ ಲಕ್ಷ್ಮದೇವಸ್ಥಾನವಿದ್ದು, ಸದರಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿರುತ್ತದೆ, ನಾನು ದಿನಾಂಕ-20/07/2020 ರಂದು ಮನೆಯಲ್ಲಿದ್ದಾಗ ನಿಡುವಳಲು ಗ್ರಾಮದ ವಾಸಿಯಾದ ತಮ್ಮಯ್ಯ ಬಿನ್ ಗಂಗಯ್ಯ ರವರು ದೂರವಾಣಿ ಮೂಲಕ ಶ್ರೀ ಲಕ್ಷ್ಮೀದೇವಸ್ಥಾನದ ಮುಂಭಾಗದ ಕಬ್ಬಿಣದ ಗೇಟಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಯಾರೋ ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡಿ ದೇವಸ್ಥಾನದಲ್ಲಿರುವ ಗರ್ಭಗುಡಿ ಮುಂಭಾಗ ಸ್ಥಿರವಾಗಿ ಇಟ್ಟಿದ್ದ ಭಕ್ತಾಧಿಗಳು ಕಾಣಿಕೆ ಹಾಕುವ ಹುಂಡಿಯನ್ನು ಮೀಟಿ ಬಾಗಿಲು ತೆಗೆದು ಸದರಿ ಹುಂಡಿಯಲ್ಲಿದ್ದ ಸುಮಾರು 15,000/- (ಹದಿನೈದು ಸಾವಿರ) ರೂ ಹಣವನ್ನು ಕಳ್ಳತನ ಮಾಡಿರುತ್ತಾರೆ ಎಂದು ವಿಚಾರ ತಿಳಿಸಿರುತ್ತಾರೆ, ನಾನು ದಿನಾಂಕ-20/07/2020 ರಂದು ಬೆಳಿಗ್ಗೆ ನಮ್ಮ ಇಲಾಖೆ ಸಿಬ್ಬಂದಿಗಳ ಜೊತೆ ಹೋಗಿ ನೋಡಲಾಗಿ ಕಳ್ಳತನವಾಗಿರುವುದು ಸತ್ಯವಾಗಿರುತ್ತದೆ, ಸದರಿ ಕಳ್ಳತನು ದಿನಾಂಕ-19/07/2020 ರಂದು ರಾತ್ರಿ ಸುಮಾರು 1-30 ಗಂಟೆಯಲ್ಲಿ ನಡೆದಿರುತ್ತೆ ಆದ್ದರಿಂದ ಸದರಿ ಕಳ್ಳತನವನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಲು ನಮ್ಮ ಇಲಾಖಾ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ತಡವಾಗಿ ಬಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ-108/2020 ಕಲಂ 457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಅಮೃತೂರು ಪೊಲೀಸ್‌ ಠಾಣಾ ಮೊ.ನಂ-90/2020 ಕಲಂ-279, 337, 304(ಎ) ಐಪಿಸಿ

ದಿನಾಂಕ: 24-07-2020 ರಂದು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಷಫೀವುಲ್ಲಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 23-07-2020 ರಂದು ಕೆ.ಎ-04 ಎಂ.ಯು-4620 ರ ಮಾರುತಿ ಓಮಿನಿ ಕಾರಿನಲ್ಲಿ ಬೆಂಗಳೂರಿನ ಸೈಯ್ಯದ್ ಮೌಲಾ ಬಿನ್ ಶಾನೂರ್ ರವರು ಚಾಲಕನಾಗಿ, ಆ ಕಾರಿನಲ್ಲಿ ಬೆಂಗಳೂರಿನಲ್ಲಿ ವಾಸವಿರುವ ನನ್ನ ತಮ್ಮ ಆಯೂಬ್ ಪಾಷಾ, ಅವರ ಹೆಂಡತಿ ಸೈಯದ್ ಮಾಮುದಾ, ಅವರ ಮಗಳು ಸಾಯಿಮಾ, ಅವರ ಅತ್ತೆ ನಸ್ರೀನ್ ತಾಜ್, ಅವರ ಭಾಮೈದ ಸೈಯದ್ ಖಾದಿರ್ ರವರು ಮಂಡ್ಯ ಜಿಲ್ಲೆಯ ನಾಗಮಂಗಲ ಟೌನ್ ನ ನಮ್ಮ ಸಂಭಂದಿಕರ ಸಾವಿಗೆ ಹೋಗಿದ್ದು, ನಾನು ಸಹ ನನ್ನ ಬೈಕಿನಲ್ಲಿ ಅದೇ ಸಾವಿನ ಅಂತ್ಯ ಸಂಸ್ಕಾರಕ್ಕೆ ಹೋಗಿ, ಅಂತ್ಯ ಸಂಸ್ಕಾರ ಮುಗಿಸಿಕೊಂಡು ನಾವು ಬೆಳ್ಳೂರ್ ಕ್ರಾಸ್ ಮಾರ್ಗವಾಗಿ ವಾಪಸ್ ಕುಣಿಗಲ್ ಕಡೆಗೆ ಹೋಗಲು ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೂಕ್, ಯಡಿಯೂರು ಹೋಬಳಿ, ತಟ್ಟೆಕೆರೆ ಗೇಟ್ ಸಮೀಪ ಬೀರಗಾನಹಳ್ಳಿ ಗ್ರಾಮದ ಜಗದೀಶ್ ಎಂಬುವರ ತೋಟದ ನೇರದಲ್ಲಿ ಎನ್.ಹೆಚ್-75 ರ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ರಸ್ತೆಯ ಎಡಪಕ್ಕದಲ್ಲಿ ಹೋಗುತ್ತಿರುವಾಗ ಎನ್.ಹೆಚ್-75 ರ ಬೆಂಗಳೂರು-ಹಾಸನ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗಲು ಬಂದ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲಭಾಗದ ಡಿವೈಡರ್ ಹತ್ತಿಸಿ ಎನ್.ಹೆಚ್-75 ರ ಹಾಸನ-ಬೆಂಗಳೂರು ರಸ್ತೆಗೆ ಬಂದು ಕೆ.ಎ-04 ಎಂ.ಯು-4620 ರ ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಎರಡೂ ಕಾರುಗಳು ಜಖಂಗೊಂಡವು. ತಕ್ಷಣ ನಾನು ನನ್ನ ಬೈಕನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ, ಮಾರುತಿ ಓಮಿನಿ ಕಾರಿನಲ್ಲಿದ್ದ ನನ್ನ ತಮ್ಮ ಆಯೂಬ್ ಷಾಷಾ ರವರಿಗೆ ಎದೆಗೆ, ಕಾಲಿಗೆ, ಮೈಕೈಗೆ ತೀವ್ರ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅದೇ ಕಾರಿನಲ್ಲಿದ್ದ ಚಾಲಕ ಸೈಯದ್ ಮೌಲಾ, ಸೈಯದ್ ಮಾಮುದಾ, ಸಾಯಿಮಾ, ನಸ್ರೀನ್ ತಾಜ್, ಸೈಯದ್ ಖಾದಿರ್  ರವರಿಗೆ ಮೈಕೈ ಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದವು. ಅಪಘಾತಪಡಿಸಿದ ಕಾರಿನಲ್ಲಿದ್ದ 4-5 ಜನರಿಗೂ ಸಹ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದವು. ನಂತರ ನಾನು ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಲೈಟ್ ಬೆಳಕಿನಲ್ಲಿ ಅಪಘಾತಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆ.ಎ-53 ಜಡ್-4485 ಆಗಿತ್ತು. ಆನಂತರ ನಾನು ಗಾಯಾಳುಗಳನ್ನು ಉಪಚರಿಸಿ ಅಲ್ಲಿಗೆ ಬಂದ ಆಂಬುಲೆನ್ಸ್ ನಲ್ಲಿ ಎಲ್ಲರನ್ನು ಚಿಕಿತ್ಸೆಗಾಗಿ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು, ನನ್ನ ತಮ್ಮನ ಶವವನ್ನು ಮತ್ತೊಂದು ಆಂಬುಲೆನ್ಸ್ ನಲ್ಲಿ ಎ.ಸಿ.ಗಿರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ನಂತರ ನಾನು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟು ಈಗ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆ.ಎ-53 ಜಡ್-4485 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 36 guests online
Content View Hits : 833576
Hackguard Security Enabled