lowborn ಅಪರಾಧ ಘಟನೆಗಳು 28-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 28-07-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ. 73/2020 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 28/07/2020 ರಂದು ಮಧ್ಯಾಹ್ನ 02.00 ಗಂಟೆಗೆ ಪಿರ್ಯಾದುದಾರರಾದ ಲಿಂಗರಾಜು ಎ.ಎಂ. ಬಿನ್ ಮರಿಯಪ್ಪ, ಅಜ್ಜೇನಹಳ್ಳಿ, ಶೆಟ್ಟಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ, ಸುಮಾರು 50 ವರ್ಷಗಳಿಂದ 1-00 ಎಕರೆ ಜಮೀನಿನಲ್ಲಿ ಅನುಭವ ಇದ್ದು, ಈ ಪೈಕಿ 0-30 ಗುಂಟೆ ಮಂಜೂರು ಆಗಿದ್ದು, ಮಿಕ್ಕಿದ 5-00 ಎಕರೆ ಸರ್ಕಾರಿ ಜಾಗಕ್ಕೆ ಟಿ.ಟಿ. ಕಟ್ಟಿರುತ್ತೇವೆ. ಈ ಜಮೀನಿನಲ್ಲಿ 300 ಶ್ರೀಗಂಧದ ಸಸಿಗಳು, 200 ತೇಗದ ಸಸಿಗಳು ನೆಟ್ಟಿದ್ದೆವು. ಅದೇ ಅಜ್ಜೇನಹಳ್ಳಿ ಗ್ರಾಮದ ಎ.ಬಿ. ಕೃಷ್ಣಪ್ಪ ಬಿನ್ ಬಸಪ್ಪ ಮತ್ತು ಮಾಲಕ್ಕ ಕೋಂ ಮಹಾಲಿಂಗಯ್ಯ, ಇವರ ಮಗ ಭಾನು ಇವರೆಲ್ಲರೂ ಸೇರಿ ದಿನಾಂಕ: 26/07/2020 ರಂದು ಮಧ್ಯಾಹ್ನ ಸುಮಾರು 03.30 ಗಂಟೆ ಸಮಯದಲ್ಲಿ ನನ್ನ ತಾಯಿ ಮೇಲೆ ದೌರ್ಜನ್ಯದಿಂದ ಇವರ ಮುಖದ ಮೇಲೆ ಮತ್ತು ಕಣ್ಣಿಗೆ ಬಲವಾಗಿ ಎ.ಬಿ. ಕೃಷ್ಣಪ್ಪ ಹೊಡೆದಿರುತ್ತಾನೆ. ಕಪಾಳಕ್ಕೆ  ಮಾಲಕ್ಕ ಮತ್ತು ಮಾಲಕ್ಕನ ಗಂಡ ಮಹಾಲಿಂಗಯ್ಯ ಮತ್ತು ಇವರ ಭಾನು ಬೆನ್ನಿಗೆ ಮತ್ತು ಕಪಾಳಕ್ಕೆ ಹೊಡೆದು ನೂಕಿದರು. ಏಕೆಂದರೆ ನಾನು ನನ್ನ ಜಮೀನಿನ ಹತ್ತಿರ ಕೆಲಸ ಮಾಡುತ್ತಿದ್ದೆ. ಕೃಷ್ಣಪ್ಪ ಮತ್ತು ತಂಗಿ ಗಂಡ ಮಕ್ಕಳು ಇವರು ಹೊಲದ ಹತ್ತಿರ ಬಂದಿದ್ದರು. ನಾನು ನಮ್ಮ ಹೊಲವನ್ನು ಅಕ್ರಮವಾಗಿ ಜೆ.ಸಿ.ಪಿ.ಯಿಂದ ನೂಕಿಸಿ ಬದುಗಳನ್ನು ಹಾಕಿದ್ದೀರಾ, ನಮಗೆ ಜಮೀನು ಮಂಜೂರು ಆಗಿದೆ. ನಿಮ್ಮ ಅಣ್ಣನಾದ ಕೆಂಗಣ್ಣ ಈ ಮೊದಲು ಸುಮಾರು 12-7-2020 ರಂದು ನನ್ನ ಮಾಂಗಲ್ಯ ಸರವು ಜೆ.ಸಿ.ಪಿ. ಕುಳಕ್ಕೆ ಸಿಕ್ಕಿಹಾಕಿಕೊಂಡು ಚಿನ್ನದ ಮಾಂಗಲ್ಯ ಸರ ಹರಿದು ಹೋಗಿ ಮಣ್ಣಲ್ಲಿ ಮುಚ್ಚಿ ಹೋಗಿರುತ್ತದೆ ಎಂದು ಕೇಳಿದಾಗ ಈ ಬಂಗಾರದ ಸರವನ್ನು ನನಗೆ ಮಾಡಿಸಿಕೊಡು ಕೃಷ್ಣಪ್ಪ ಎಂದು ಕೇಳಿದಾಗ ಏಕಾಏಕಿ ಎ.ಬಿ. ಕೃಷ್ಣಪ್ಪ ಕಾರಿನಲ್ಲಿದ್ದ ಗಟ್ಟಿಯಾದ ಚೆಂಡಿನ ಬಾಲಿನಿಂದ ಕಣ್ಣಿಗೆ ಹೊಡೆದನು. ನಂತರ ಮಾಲಕ್ಕ, ಮಹಾಲಿಂಗಯ್ಯ, ಭಾನು ಬೆನ್ನಿಗೆ ಹೊಡೆದು ಕಲ್ಲಿನ ಹುದಿ ಒಳಕ್ಕೆ ನೂಕಿದರು. ಮತ್ತು ನೀನು ನಿಮ್ಮ ಗಂಡ ಮರಿಯಪ್ಪ, ನಿನ್ನ ಮಗ ಲಿಂಗರಾಜು ಏನಾದರೂ ಈ ಜಮೀನಿನ ಒಳಕ್ಕೆ ಕಾಲಿಟ್ಟರೆ ಕೊಲೆ ಮಾಡಿ ನಿಮ್ಮ ಮೂವರನ್ನು ಜೆ.ಸಿ.ಪಿ.ಯಿಂದ ಮುಚ್ಚಿಸಿಬಿಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದಿರುವುದು ಸರಿಯಷ್ಟೆ. ಮತ್ತು ನನ್ನ ಗಂಡ, ಮಗ, ನನ್ನ ಮೇಲೆ ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ. ಒಂದು ವೇಳೆ ನಮ್ಮ ಮೂವರಿಗೆ ಏನಾದರೂ ಪ್ರಾಣಾಪಾಯವಾದರೆ ಎ.ಬಿ. ಕೃಷ್ಣಪ್ಪ ಮತ್ತು ಇವರ ತಂಗಿ ಗಂಡ ಮಾಲಕ್ಕ ಮಹಾಲಿಂಗಯ್ಯ, ಭಾನು ಇವರೇ ಕಾರಣರಾಗಿರುತ್ತಾರೆ. ಈ ಮೊದಲು ಎ.ಬಿ. ಕೃಷ್ಣಪ್ಪನ ಅಣ್ಣಂದಿರಾದ ಕೆಂಗಣ್ಣ ಮತ್ತು ನಿಂಗರಾಜಣ್ಣ ಇವರು ನನ್ನ ಮೇಲೆ ಹೊಡೆದಿರುತ್ತಾರೆ. ಇವರ ಮೇಲೆ ಕೇಸು ಮಾಡಿರುವುದು ಸರಿಯಷ್ಟೆ. ಇಷ್ಟಾದರೂ ಇಲಾಖೆಯಿಂದ ಯಾವುದೇ ರೀತಿ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಪದೇ ಪದೇ ನಮ್ಮ ಮೇಲೆ ಹೊಡೆದು ದೌರ್ಜನ್ಯವೆಸಗಿರುತ್ತಾರೆ. ಇವರೆಲ್ಲರ  ಮೇಲೆ ದಯವಿಟ್ಟು ಕಾನೂನು ಕ್ರಮ ಜರುಗಿಸತಕ್ಕದ್ದು  ಮತ್ತು ನಮಗೆ ನ್ಯಾಯರಕ್ಷಣೆ ಕೊಡತಕ್ಕದ್ದು ಎಂದು ತಮ್ಮಲ್ಲಿ ಕಳಕಳಿಯಾಗಿ ಬೇಡಿಕೊಳ್ಳುತ್ತೇವೆ. ಇದಾದ ನಂತರ ನಾನು ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ತಡವಾಗಿ ಬಂದು ನನ್ನ ತಾಯಿಯನ್ನು ಚಿನಾಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ಪಿರ್ಯಾದನ್ನು ಪಡೆದು ಠಾಣಾ ಮೊ.ನಂ. 73/2020 ಕಲಂ 323, 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 40 guests online
Content View Hits : 833612
Hackguard Security Enabled