lowborn ಅಪರಾಧ ಘಟನೆಗಳು 30-07-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ:13-08-20 ವ್ಯಾಟ್ಸ್ಅಪ್ ಸಂದೇಶ ಹಾಗೂ ವ್ಯಾಟ್ಸ್ಅಪ್ ಕರೆಗಳ ಮೂಲಕ... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ:18.05.2020. ದಿನಾಂಕ:14.05.2020 ರಂದು... >> ಪತ್ರಿಕಾ ಪ್ರಕಟಣೆ ದಿನಾಂಕ. 27-04-2020 ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ - 19... >> ಪತ್ರಿಕಾ ಪ್ರಕಟಣೆ ದಿನಾಂಕ. 21-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >> ಪತ್ರಿಕಾ ಪ್ರಕಟಣೆ ದಿನಾಂಕ. 16-04-2020 ಕೋವಿಡ್ - 19 ರ ಹಿನ್ನೆಲೆಯಲ್ಲಿ  ಮಾನ್ಯ ಸರ್ಕಾರವು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 30-07-20

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 97/2020 ಕಲಂ 279,304() ಐಪಿಸಿ

ದಿನಾಂಕ:30/07/2020 ರಂದು ಬೆಳಗ್ಗೆ 8:30 ಗಂಟೆಗೆ ಸಿದ್ದಪ್ಪ ಬಿನ್ ಮೂರ್ಕಣ್ಣಪ್ಪ ,ಸುಮಾರು 54 ವರ್ಷದ, ಕುಂಚಿಟಿಗ ಜನಾಂಗ, ವ್ಯವಸಾಯ ವೃತ್ತಿ, ಧರ್ಮಪುರ ಗ್ರಾಮ, ಹಿರಿಯೂರು ತಾಲ್ಲೂಕ್ ಚಿತ್ರದುರ್ಗ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ವಿದ್ಯಾವಾಹಿನಿ ಪಿಯು  ಕಾಲೇಜಿನಲ್ಲಿ  ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು ಪ್ರತಿದಿನ ಧರ್ಮಪುರ ಗ್ರಾಮದಿಂದ  ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಕಾಲೇಜಿಗೆ ಹೋಗಿ ಬರುತ್ತಿದ್ದರು. ದಿನಾಂಕ 29/07/2020 ರಂದು  ಬೆಳಗ್ಗೆ ಹನುಂತರಾಯ ಕೆ.ಬಿ. ಮತ್ತು ಅವರ ಮಗ ಬ್ರಿಜೇಶ್ ಪಾಟೀಲ್ ಎಂ ಹೆಚ್ ರವರು ತಮ್ಮ ಸ್ವಂತ ಕೆಲಸದ ನಿಮ್ಮಿತ್ತ ತಮ್ಮ ಬಾಬ್ತು  KA02MP9771  ನೇ ನಂಬರಿನ ಕಾರಿನಲ್ಲಿ ತುಮಕೂರಿಗೆ ಹೋಗಿದ್ದರು . ದಿನಾಂಕ 29/07/2020 ರಂದು ರಾತ್ರಿ ಪಿರ್ಯಾದಿ ಮನೆಯಲ್ಲಿದ್ದಾಗ ಸುಮಾರು 9:45 ಗಂಟೆ ಸಮಯದಲ್ಲಿ ತಮ್ಮ ಸಂಬಂಧಿ ಬ್ರಿಜೇಶ್ ಪಾಟೀಲ್ ರವರು ಪಿರ್ಯಾದಿಗೆ ಫೋನ್ ಕರೆಮಾಡಿ ನಾನು ಮತ್ತು ನಮ್ಮ ಅಪ್ಪ ನಮ್ಮ ಕಾರಿನಲ್ಲಿ ನಾನು  ಕಾರನ್ನು ಚಾಲನೆ ಮಾಡಿಕೊಂಡು  ತುಮಕೂರಿನಿಂದ ಧರ್ಮಪುರಕ್ಕೆ ವಾಪಸ್ ಬರುತ್ತಿರುವಾಗ ರಾತ್ರಿ 9:30 ಗಂಟೆ ಸಮಯದಲ್ಲಿ  ಲಕ್ಕವ್ವನಹಳ್ಳಿ ಮತ್ತು ದ್ವಾರನಕುಂಟೆ ಗ್ರಾಮದ ರಸ್ತೆ ಮದ್ಯೆ ತಿರುವಿನಲ್ಲಿ ನಮ್ಮ ಕಾರು ಪಲ್ಟಿಯಾಗಿ  ಅಪಘಾತವಾಗಿದೆ ಬೇಗ ಬನ್ನಿ ಎಂದು ತಿಳಿಸಿದರು. ಆಗ ಪಿರ್ಯಾದಿ ಮತ್ತು ಪಿರ್ಯಾದಿಯ ಮತ್ತೊಬ್ಬ ಸಂಬಂಧಿ ರಾಜಕುಮಾರ್ ರವರು ತಕ್ಷಣ ಯಾವುದೋ ಒಂದು ವಾಹನದಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ಬ್ರಿಜೇಶ್ ರವರು ಪಿರ್ಯಾದಿಗೆ ಕರೆಮಾಡಿ ತಿಳಿಸಿದ ವಿಚಾರ ಸತ್ಯವಾಗಿರುತ್ತೆ, ಅಪಘಾತವಾದ ಸ್ಥಳವನ್ನು ನೋಡಲಾಗಿ ಬ್ರಿಜೇಶ್ ಪಾಟೀಲ್ ರವರು ಶಿರಾ ಕಡೆಯಿಂದ ತಮ್ಮ ಕಾರನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಬಂದ ಪರಿಣಾಮ ರಸ್ತೆಯ ಎಡ ಭಾಗದಲ್ಲಿರುವ ಹಳ್ಳಕ್ಕೆ ಕಾರು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿರುತ್ತೆ. ಹನುಮಂತರಾಯ ಕೆ.ಬಿ  ರವರಿಗೆ ಕಿವಿಯಲ್ಲಿ ರಕ್ತ ಬರುತ್ತಿದ್ದು ಎದೆಯ ಭಾಗಕ್ಕೆ ಪೆಟ್ಟುಗಳು ಬಿದ್ದಿದ್ದವು ಬ್ರಿಜೇಶ್ ರವರಿಗೆ ಸಣ್ಣಪುಟ್ಟ ತರಚುಗಾಯಗಳಾಗಿದ್ದವು  ನಂತರ ಪಿರ್ಯಾದಿರವರು  ಸ್ಥಳಕ್ಕೆ ಬಂದ 108 ಆಂಬ್ಯುಲೆನ್ಸ ನಲ್ಲಿ  ಹನುಮಂತರಾಯ ಕೆ.ವಿ. ಮತ್ತು ಬ್ರಿಜೆಶ್ ಪಾಟೀಲ್ ರವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ್ಗೆ  ಸುಮಾರು11:00ಗಂಟೆ ಸಮಯದಲ್ಲಿ ಶಿರಾ ನಗರದ ಗುಡದಹಟ್ಟಿ ಬಳಿ ಹನುಮಂತರಾಯ ಕೆ.ಬಿ  ರವರು  ಮಾರ್ಗಮದ್ಯದಲ್ಲಿ ಮೃತಪಟ್ಟಿರುತ್ತಾರೆ  ನಂತರ ಪಿರ್ಯಾದಿರವರು ಶಿರಾ ಸರ್ಕಾರಿ ಆಸ್ಪತ್ರೆಗೆ ಹೋಗಲಾಗಿ ವೈದ್ಯರು ಪರೀಕ್ಷಿಸಿ ಹನುಮಂತರಾಯ ಕೆ.ಬಿ ರವರು ಮೃತಪಟ್ಟಿರುತ್ತಾರೆಂದು ತಿಳಿಸಿದರು ಈಗ ಹನುಮಂತರಾಯ ಕೆ.ಬಿ ರವರ ಮೃತದೇಹವು ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಈ ವಿಚಾರವನ್ನು ಪಿರ್ಯಾದಿ ತಮ್ಮ ಸಂಬಂಧಿಕರುಗಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು  ಈ ಅಪಘಾತಕ್ಕೆ ಬ್ರಿಜೇಶ್ ಪಾಟೀಲ್ ರವರು  ರಸ್ತೆ ತಿರುವುನಲ್ಲಿ ತಮ್ಮ ಕಾರನ್ನು ಅತಿವೇಗ ಮತ್ತು ಅಜಾಗೂಕರತೆಯಿಂದ ಚಾಲನೆ ಮಾಡಿರುವುದರಿಂದ ಈ ಅಪಘಾತ ಉಂಟಾಗಿದ್ದು ಕಾರು ಸಂಪೂರ್ಣ ಜಖಂ ಗೊಂಡಿರುತ್ತದೆ ಆದ್ದರಿಂದ ಸದರಿ ಕಾರಿನ ಚಾಲಕ ಬ್ರಿಜೇಶ್ ಪಾಟೀಲ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು  ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 110/2020 ಕಲಂ; 279, 304(ಎ) ಐಪಿಸಿ

ದಿನಾಂಕ:29-07-2020 ರಂದು ಮಧ್ಯಾಹ್ನ 01-00 ಗಂಟೆಗೆ ಪಿರ್ಯಾದುದಾರರಾದ ಲಕ್ಷ್ಮಮ್ಮ ಕೋಂ ಲೇಟ್‌ ಆಂಜಿನಪ್ಪ, 72 ವರ್ಷ, ಆದಿ ದ್ರಾವಿಡ ಜನಾಂಗ, ಗೃಹಿಣಿ, ಹೊನ್ನುಡಿಕೆ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕ್ & ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  “ನಾನು ಈಗ್ಗೆ ಸುಮಾರು 50 ವರ್ಷಗಳ ಹಿಂದೆ ಹೊನ್ನುಡಿಕೆ ಗ್ರಾಮದ ವಾಸಿ ಕರಿಯಪ್ಪ ರವರ ಮಗನಾದ ಆಂಜಿನಪ್ಪ ರವರೊಂದಿಗೆ ಮದುವೆಯಾಗಿದ್ದು, ನನಗೆ ಸಂಸಾರ ಜೀವನದಲ್ಲಿ 03 ಜನ ಗಂಡು ಮಕ್ಕಳಿದ್ದು, ಮೊದಲನೆಯವರು ಕಂಬಯ್ಯ, ಎರಡನೇ ರಾಜಣ್ಣ, ಮೂರನೆ ಕುಮಾರ್‌‌ ಹೆಚ್‌.ಎ ಆಗಿದ್ದು, ಎಲ್ಲರಿಗೂ ಮದುವೆ ಆಗಿ ಬೇರೆ ವಾಸವಾಗಿರುತ್ತಾರೆ. ನನ್ನ ಮೂರನೇ ಮಗನಾದ ಕುಮಾರ್‌‌ ಹೆಚ್‌.ಎ ಬಿನ್ ಲೇಟ್‌ ಆಂಜಿನಪ್ಪ, 46 ವರ್ಷ, ಆದಿದ್ರಾವಿಡ ಜನಾಂಗ, ಗ್ರಾಮಸಹಾಯಕ, ಹೊನ್ನುಡಿಕೆ ಗ್ರಾಮ ರವರು ನಮ್ಮ ಗ್ರಾಮದಲ್ಲಿಯೇ ಅವರ ಹೆಂಡತಿ ಶಶಿಕಲಾ ಮತ್ತು ಮಗಳಾದ ಸ್ವಪ್ನ ರವರೊಂದಿಗೆ ನನ್ನ ಮನೆಯ ಪಕ್ಕದಲ್ಲಿಯೇ ವಾಸವಾಗಿರುತ್ತಾರೆ. ದಿನಾಂಕ 23-07-2020 ರಂದು ನನ್ನ ಮಗನಾದ ಕುಮಾರ್‌ ಹೆಚ್‌.ಎ ರವರು ಕುಡಿಯಲು ಫಿಲ್ಟರ್‌ ನೀರು ತರಲು ಅವನ ಬಾಬ್ತು ಕೆಎ-06-ಇ,ಡಬ್ಲ್ಯೂ-6637 ನೇ ಸ್ಪ್ಲೆಂಡರ್‌ ಪ್ಲಸ್‌‌ ದ್ವಿಚಕ್ರ ವಾಹನದಲ್ಲಿ ನೀರಿನ ಕ್ಯಾನ್‌ ಅನ್ನು ದ್ವಿಚಕ್ರ ವಾಹನದ ಮುಂಭಾಗದಲ್ಲಿ ಇಟ್ಟುಕೊಂಡು ಹೋಗಿ ನೀರನ್ನು ತೆಗೆದುಕೊಂಡು ವಾಪಸ್‌ ಮನೆಗೆ ಬರಲು ರಾತ್ರಿ ಸುಮಾರು 07-30 ಗಂಟೆ ಸಮಯದಲ್ಲಿ ನಮ್ಮ ಮನೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು, ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಸಿಗದೆ ಸ್ಕಿಡ್‌ ಆಗಿ ರಸ್ತೆಯ ಪಕ್ಕಕ್ಕೆ ನೀರಿನ ಕ್ಯಾನ್‌ ಸಮೇತ ಕೆಳಗೆ ಬಿದ್ದಿದ್ದು, ಅಲ್ಲಿಯೇ ಇದ್ದ ನಾನು ಮತ್ತು ನನ್ನ ಸೊಸೆಯಾದ ಶಶಿಕಲಾ ರವರು ಹೋಗಿ ನನ್ನ ಮಗನನ್ನು ನೋಡಲಾಗಿ ನನ್ನ ಮಗನ ತಲೆಗೆ, ಎದೆಗೆ ಏಟುಗಳು ಬಿದ್ದಿದ್ದು, ಯಾವುದೋ ಒಂದು ವಾಹನದಲ್ಲಿ ನನ್ನ ಮಗನನ್ನು ದಿನಾಂಕ 24-07-2020 ರಂದು ಜೀವನ್‌ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ದಿನಾಂಕ 29-07-2020 ರಂದು ಬೆಳಗ್ಗೆ 05-35 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತ ದೇಹವು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ಶವಾಗಾದಲ್ಲಿರುತ್ತೆ. ನನಗೆ ದೂರು ನೀಡಬೇಕೆಂದು ತಿಳಿಯದೇ ಹಾಗೂ ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ: 110/2020 ಕಲಂ; 279, 304(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಕೆ.ಬಿ ಕ್ರಾಸ್ ಪೊಲೀಸ್ ಠಾಣಾ ಮೊ ನಂ 45/2020 ಕಲಂ ಕಲಂ 323, 324, 504 ರೆ/ವಿ 34 ಐ.ಪಿ.ಸಿ

ದಿನಾಂಕ 29.07.2020 ರಂದು ಬೆಳಗ್ಗೆ 8.30 ಗಂಟೆ ಸಮಯದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಮಹಾಲಿಂಗಯ್ಯ ರವರ ಹೇಳಿಕೆಯನ್ನು ಹೆಚ್.ಸಿ 206 ರವರು ಠಾಣೆಗೆ ತಂದು ಹಾಜರುಪಡಿಸಿದ ಹೇಳಿಕೆಯ ಅಂಶವೇನೆಂದರೆ, ದಿನಾಂಕ 28.07.2020 ರಂದು ಮದ್ಯಾಹ್ನ 12.15 ಗಂಟೆ ಸಮಯದಲ್ಲಿ ನನಗೆ ಸೇರಿದ ಶೆಟ್ಟಿಹಳ್ಳಿ ಗ್ರಾಮದ ಸರ್ವೇ ನಂ-83/1 ರ ಪಕ್ಕದಲ್ಲಿ ಇರುವ ಒತ್ತುವರಿ ಜಮೀನನ್ನು ನಾನು ಉಳುಮೆ ಮಾಡಿಕೊಂಡಿದ್ದು ಈ ಜಮೀನಿನ ಬದಿಗೆ ನಮ್ಮ ಗ್ರಾಮದ ಪುಟ್ಟಯ್ಯ ಬಿನ್ ಕಂಬಯ್ಯ, ಪ್ರೇಮ ಕೋಂ ಪುಟ್ಟಯ್ಯ, ಮಹಲಿಂಗಯ್ಯ ಬಿನ್ ಕಂಬಯ್ಯ ರವರಗಳು ದನಗಳನ್ನು ಮೇಯಲು ಕಟ್ಟಿದ್ದರು. ನಾನು ಕೂಡ  ಬದಿಗೆ ದನಗಳನ್ನು ಕಟ್ಟಲು ಹೋದಾಗ ಮೇಲ್ಕಂಡ ಮೂವರೂ ನನಗೆ ಅಮ್ಮ, ಅವ್ವ ಅಂತಾ ಅವಾಚ್ಯವಾಗಿ ಬೈದು ಗಲಾಟೆ ಮಾಡಿ ಮೂವರೂ ತಲಾ ಒಂದೊಂದು ಕಲ್ಲುಗಳನ್ನು ತೆಗೆದಕೊಂಡು ನನ್ನ ಭುಜಕ್ಕೆ, ತಲೆಗೆ, ಬಲ ಕಿವಿಗೆ ಹೊಡೆದು ಗಾಯಪಡಿಸಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಮಗ ಮನು ಮತ್ತು ಸುರೇಶ್ ಬಿನ್ ರಾಮಲಿಂಗಯ್ಯ ಜಗಳವನ್ನು ಬಿಡಿಸಿ ಸಮಾಧಾನಪಡಿಸಿದರು. ಅಲ್ಲಿಗೆ ಬಂದ ಪುಟ್ಟಯ್ಯನವರ ಮಕ್ಕಳಾದ ಯೋಗಾನಂದ ಮತ್ತು ಸುದರ್ಶನ್ ರವರುಗಳು ಕೂಡ ನನಗೆ ಹೊಡೆದಿರುತ್ತಾರೆ. ಗಲಾಟೆಯಲ್ಲಿ ಗಾಯಗೊಂಡ ನನ್ನನ್ನು ನನ್ನ ಮಗನಾದ ಮನುರವರು ಬೈಕಿನಲ್ಲಿ ಕೂರಿಸಿಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಮೇಲ್ಕಂಡರವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳ ಬೇಕೆಂತ ಕೋರಿರುತ್ತೇನೆ ಇತ್ಯಾದಿ ನೀಡಿದ ಹೇಳಿಕೆಯನ್ನು ಪಡೆದು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 42 guests online
Content View Hits : 833591
Hackguard Security Enabled