lowborn ಅಪರಾಧ ಘಟನೆಗಳು 04-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >>
 • Facebook: TumkurDistrictPolice
 • Picasa: tumkurpolice
 • Twitter: sptumkur
 • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 04-08-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ. ನಂ. 77/2020 ಕಲಂ 504 ಐಪಿಸಿ

ದಿನಾಂಕ: 03/08/2020 ರಂದು ಸಂಜೆ 07.00 ಗಂಟೆಯಲ್ಲಿ ನ್ಯಾಯಾಲಯದ ಸಿಪಿಸಿ 872 ರವರು ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದು ತಂದು ಹಾಜರುಪಡಿಸಿದ ಮನವಿಯ ಅಂಶವೇನೆಂದರೆ, ಘನ ನ್ಯಾಯಾಲಯದಲ್ಲಿ ಕೋರುವುದೇನೆಂದರೆ, ಚಿನಾಹಳ್ಳಿ ತಾಲ್ಲೂಕಿನ ಮಾನ್ಯ ತಾಲ್ಲೂಕಿನ ತಹಶೀಲ್ದಾರ್ ರವರಾದ ಶ್ರೀಮತಿ ತೇಜಸ್ವಿನಿ ರವರು, ಮಾನ್ಯ ಆರಕ್ಷಕ ವೃತ್ತನಿರೀಕ್ಷಕರ ಕಚೇರಿಗೆ ಈಮೇಲ್ ಮುಖೇನ ಬಂದಿರುವ ದೂರನ್ನು ಲಗತ್ತಿಸಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನವನ್ನು ಸ್ವೀಕರಿಸಿ ಪರಿಶೀಲಿಸಲಾಗಿ, ಈ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 28/07/2020 ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯ ತಹಸೀಲ್ದಾರ್ ಇ-ಮೇಲ್ ಗೆ ಶ್ರೀ ಮಲ್ಲಿಕಾರ್ಜುನಯ್ಯ ಬಿ.ಎಸ್., ಭಟ್ಟರಹಳ್ಳಿ, ಹುಳಿಯಾರು ಹೋಬಳಿ ರವರು ಸಂದೇಶ ರವಾನಿಸಿ ಮಣ್ಣನ್ನು ಬಳಸಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಛೇರಿ ಕಟ್ಟಡದ ಕಳಪೆ ಕಾಮಗಾರಿ ನಿರ್ವಹಿಸುತ್ತಿರುವ ಬಗ್ಗೆ ಎಂಬ ವಿಷಯದಡಿ ಈ ಕೆಳಕಂಡಂತೆ ವಿವರ ಇರುತ್ತದೆ. ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ಮಿನಿ ವಿಧಾನಸೌಧ ಸರ್ಕಾರಿ ಕಟ್ಟಡದ ಆವರಣದಲ್ಲಿ ಸಂಗ್ರಹಿಸಿರುವ ಇಟ್ಟಿಗೆ ಚೂರುಗಳು ಕರಗಿ ಮಣ್ಣಾಗಿದ್ದು, ಇಂತಹ ಕಳಪೆ ವಸ್ತುಗಳನ್ನು ಬಳಸಿ ಸದರಿ ಕಟ್ಟಡದ ಚುರುಕಿ ಹಾಕುವ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿರುವಂತಿದೆ. ಸದರಿ ಜಿ.ಪಿ.ಎಸ್. ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ರೀತಿ ರಾಜಾರೋಷವಾಗಿ ಸಾರ್ವಜನಿಕರಿಗೆ ಇಂತಹ ಕಳಪೆ ವಸ್ತುಗಳು ಕಾಣುತ್ತಿರುವುದಾದರೆ ಈ ಕಛೇರಿಯ ಮುಖ್ಯಸ್ಥರಾದ ತಹಸೀಲ್ದಾರ್ ರವರಿಗೆ ಏಕೆ? ಕಾಣಿಸುತ್ತಿಲ್ಲ. ಒಂದು ವೇಳೆ ಇವುಗಳನ್ನು ಈ ಕಾಮಗಾರಿಗೆ ಬಳಸಿಲ್ಲವೆನ್ನುವುದಾದರೆ ತಾಲ್ಲೂಕು ಕಛೇರಿ ಆವರಣವೇನಾದರೂ ಇಂತಹ ಕಸ ತಂದು ಸುರಿಯುವ ಡಂಪಿಂಗ್ ಯಾರ್ಡಾ? ನೌಕರರು ತಾಲ್ಲೂಕಿನ ಬಡರೈತರು ಸದಾ ಭೇಟಿ ನೀಡುವ ಇಂತಹ ಸರ್ಕಾರಿ ಕಟ್ಟಡದ ದುರಸ್ಥಿ ಕಾಮಗಾರಿ ಇಷ್ಟೊಂದು ಕಳಪೆಯಾಗಿ ನಡೆಯುತ್ತಿರುವ ಶಂಕೆ ಇದ್ದು, ಕೂಡಲೇ ಸದರಿ ಕಾಮಗಾರಿಯನ್ನು ತಜ್ಞರ ನೆರವಿನೊಂದಿಗೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ಕೈಗೊಂಡು ಕಳಪೆ ಕಾಮಗಾರಿ ನಡೆಯುತ್ತಿದ್ದರೆ ತಕ್ಷಣ ನಿಲ್ಲಿಸಬೇಕೆಂದು ಮತ್ತು ಇಂತಹ ಬೇಜವಾಬ್ದಾರಿಗೆ ಈ ಕಛೇರಿ ಮುಖ್ಯಸ್ಥರಾದ ತಹಸೀಲ್ದಾರ್ ರವರನ್ನು ಹೊಣೆಗಾರರನ್ನಾಗಿಸಿ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕೆಂದು ಈ ತಾಲ್ಲೂಕಿನ ನಾಗರೀಕನಾಗಿ ಪ್ರಾರ್ಥಿಸುತ್ತೇನೆಂದು ತಿಳಿಸಿರುತ್ತಾರೆ. ಮೇಲ್ಕಂಡ ವಿಷಯಗಳನ್ವಯ ಪರಿಶೀಲಿಸಲಾಗಿ ಸದರಿ ತಾಲ್ಲೂಕು ಕಛೇರಿಯ ದುರಸ್ಥಿ ಕಾಮಗಾರಿ ಬಗ್ಗೆ ಪಿ.ಡಬ್ಲ್ಯೂ.ಡಿ. ಇಲಾಖೆಯವರು ಅಂದಾಜು ಮತ್ತು ನಕ್ಷೆಯನ್ನು ತಯಾರಿಸಿ ಮತ್ತು ತಾಂತ್ರಿಕ ಅನುಮೋದನೆಯನ್ನು ಪಡೆದು ಕಾರ್ಯಪಾಲಕ ಅಭಿಯಂತರರು, ಪಿ.ಡಬ್ಲ್ಯೂ.ಡಿ., ಚಿಕ್ಕನಾಯಕನಹಳ್ಳಿರವರು ನಿರ್ವಹಿಸುತ್ತಿರುತ್ತಾರೆ. ಸದ್ಯದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯ ದುರಸ್ಥಿ ಕಾರ್ಯಕ್ಕೆ ತಾಲ್ಲೂಕು ಕಛೇರಿಗೆ ಹಣ ಬಿಡುಗಡೆಯಾಗಿರುವುದಿಲ್ಲ. ಸದರಿ ಕಾಮಗಾರಿಯ ಪೂರ್ಣ ಜವಾಬ್ದಾರಿ ಪಿ.ಡಬ್ಲ್ಯೂ.ಡಿ. ಇಲಾಖೆಯವರಿಗೆ ಸಂಬಂಧಿಸಿರುತ್ತದೆ. ಕಾಮಗಾರಿಯ ಬಗ್ಗೆ ಪರಿಶೀಲಿಸಲು ತಹಸೀಲ್ದಾರ್ ರವರು ತಾಂತ್ರಿಕ ತಜ್ಞರಾಗಿರುವುದಿಲ್ಲ. ಈ ಬಗ್ಗೆ ಪೂರ್ಣ ವರದಿಯನ್ನು ಪಿ.ಡಬ್ಲ್ಯೂ.ಡಿ. ಇಲಾಖೆಯ ಅಭಿಯಂತರರು ನೀಡಬೇಕಾಗಿರುತ್ತದೆ. ಶ್ರೀ ಮಲ್ಲಿಕಾರ್ಜುನಯ್ಯ ಬಿ.ಎಸ್., ಭಟ್ಟರಹಳ್ಳಿ, ಹುಳಿಯಾರು ಹೋಬಳಿ ಇವರು ಕಾಮಗಾರಿಯ ಸಂಪೂರ್ಣ ಮಾಹಿತಿ ಇಲ್ಲದೇ ಜಿಪಿಎಸ್ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳ ಆಧಾರದ ಮೇಲೆ ತಹಸೀಲ್ದಾರ್ ಆದ ನನ್ನ ಮೇಲೆ ಭ್ರಷ್ಟಾಚಾರದ ಆರೋಪ, ಕರ್ತವ್ಯಲೋಪ, ಬೇಜವಾಬ್ದಾರಿ ಎಂದು ಮನವಿಯಲ್ಲಿ ತಿಳಿಸಿರುತ್ತಾರೆ.

 • ಶ್ರೀ ಮಲ್ಲಿಕಾರ್ಜುನಯ್ಯ ಬಿ.ಎಸ್., ಭಟ್ಟರಹಳ್ಳಿ ಇವರು ಸಂಪೂರ್ಣ ಮಾಹಿತಿ ಇಲ್ಲದೇ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುತ್ತಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಈ ಕಛೇರಿಗೆ ಯಾವುದೇ ಅನುದಾನ ಬಿಡುಗಡೆ ಆಗಿರುವುದಿಲ್ಲ. ಆದಾಗ್ಯೂ ಕೂಡ ಪಿ.ಡಬ್ಲ್ಯೂ.ಡಿ. ಇಲಾಖೆಯ ಕಾಮಗಾರಿಯ ಬಗ್ಗೆ ಮೂರನೇ ವ್ಯಕ್ತಿಯಿಂದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿಕೊಳ್ಳಬಹುದಾಗಿದೆ.
 • ತಾಲ್ಲೂಕು ಕಛೇರಿಯ ಮಿನಿವಿಧಾನಸೌಧವು 1981 ರಲ್ಲಿ ಪ್ರಾರಂಭವಾದ ನಂತರದ ದಿನಗಳಲ್ಲಿ ಯಾವುದೇ ದುರಸ್ಥಿ ಕಾರ್ಯ ನಡೆಯದ ಕಾರಣ ಕಾಮಗಾರಿಗೆ ಬೇಕಾಗಿರುವ ಸಾಮಗ್ರಿಗಳನ್ನು ಕಛೇರಿಯ ಆವರಣದಲ್ಲಿ ಸಂಗ್ರಹ ಮಾಡಲಾಗಿರುತ್ತದೆ.
 • ತಾಲ್ಲೂಕು ಕಛೇರಿಗೆ ಮತ್ತು ಕಂದಾಯ ಇಲಾಖೆಯ ಅಧೀನ ಕಛೇರಿಗೆ ಭೇಟಿ ನೀಡಿ ನೌಕರರ ಗುರುತಿನ ಚೀಟಿಯ ಬಗ್ಗೆ ಪ್ರಶ್ನಿಸುವುದು, ಕೆಲಸ ಮಾಡುವ ವಿಧಾನ ಮತ್ತು ರೀತಿಯನ್ನು ಪ್ರಶ್ನಿಸುವುದು ಹಾಗೂ ಟಪಾಲು ಶಾಖೆಯವರು ಕೆಲಸ ಮಾಡುವ ವಿಧಾನ ಮತ್ತು ರೀತಿಯನ್ನು ಪ್ರಶ್ನಿಸಿ ನಿಮ್ಮ ಮೇಲೆ ಜಾಲತಾಣಗಳಲ್ಲಿ ಮತ್ತು ಮೀಡಿಯಾದವರಿಗೆ ಕೊಡುತ್ತೇನೆಂದು ಹೆದರಿಸಿ ಅವರು ಕೆಲಸ ಮಾಡದಂತೆ ತಡೆಯುತ್ತಾರೆ.
 • ಕೊರೋನಾ ಸಮಯದಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಆಹಾರ ಪೊಟ್ಟಣ ವಿತರಣೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕ್ರಮ ಕೈಗೊಂಡ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಅವಹೇಳನಕಾರಿ ಆರೋಪ ಮಾಡುತ್ತಿರುತ್ತಾರೆ.
 • ಹುಳಿಯಾರು ಪಟ್ಟಣ ಪಂಚಾಯತಿಯ ಕ್ವಾರಂಟೈನ್ ಸೆಂಟರ್ ನಲ್ಲಿನ ಗಲಾಟೆ ವಿಚಾರಕ್ಕೆ ಇವರು ಮತ್ತು ಇವರ ಸಹಚರರು ಕಾರಣರಾಗಿರುತ್ತಾರೆ.
 • ಕೊರೋನಾ ಸಂಬಂಧಿತ ಕರ್ತವ್ಯ ನಿರ್ವಹಿಸುವ ನೌಕರರ ಮನೋಸ್ಥೈರ್ಯ ಕುಗ್ಗುವ ರೀತಿಯಲ್ಲಿ ತೊಂದರೆಗಳನ್ನು ನೀಡುತ್ತಾರೆ.
 • ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುತ್ತಾರೆ ಹಾಗೂ ಸಾರ್ವಜನಿಕರಿಗೆ ಸುಳ್ಳು ಸಂದೇಶಗಳನ್ನು ಹರಡುತ್ತಿರುತ್ತಾರೆ.
 • ತಾಲ್ಲೂಕು ಆಡಳಿತದಿಂದ ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಲು ತುಂಬಾ ಅಡಚಣೆಯನ್ನು ಸದರಿಯವರು ಮಾಡುತ್ತಿರುತ್ತಾರೆ.

ಮೇಲ್ಕಂಡ ಅಂಶಗಳನ್ವಯ ಶ್ರೀ ಮಲ್ಲಿಕಾರ್ಜುನಯ್ಯ ಬಿ.ಎಸ್., ಭಟ್ಟರಹಳ್ಳಿ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ತಪ್ಪು ಸಂದೇಶಗಳನ್ನು ರವಾನಿಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ ಎಂದು ನೀಡಿದ ಅರ್ಜಿಯನ್ನು ಪಡೆದು ಮೇಲ್ಕಂಡ ಉಲ್ಲೇಖದ ರೀತ್ಯಾ ಅರ್ಜಿ ನಮೂದು ಮಾಡಿಕೊಂಡಿರುತ್ತೆ.

ಮೇಲ್ಕಂಡ ಈ ಅರ್ಜಿಯಲ್ಲಿ ನಮೂದಿಸಿರುವ ಅಪರಾಧವು ಅಸಂಜ್ಞೇಯ ಅಪರಾಧವಾಗಿರುತ್ತದೆ. ಆದ್ದರಿಂದ ಸದರಿ ವಿಷಯದ ಬಗ್ಗೆ ಕಲಂ 504 ಐ.ಪಿ.ಸಿ.,ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಗಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿರುತ್ತೆ ಎಂದು ನೀಡಿದ ಮನವಿಯನ್ನು ಪುರಸ್ಕರಿಸಿ ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ್ದು, ಅದನ್ನು ಪಡೆದು ಠಾಣಾ ಮೊ.ನಂ. 77/2020 ಕಲಂ 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

 

ಚಿನಾಹಳ್ಳಿ ಪೊಲೀಸ್  ಠಾಣಾ ಮೊ. ನಂ. 76/2020 ಕಲಂ : 380 ಐಪಿಸಿ

ದಿನಾಂಕ: 03/08/2020 ರಂದು ಸಂಜೆ 06.00 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಅನಿತಾ ಕಿರಣ್ ಕುಮಾರ್ ಡಿ. ವಡಿಗೇರಿ ಕೋಂ ಶ್ರೀ ಕಿರಣ್ ಕುಮಾರ್ ಡಿ. ವಡಿಗೇರಿ, 43 ವರ್ಷ, ಹಿಂದೂ – ಈಡಿಗರು, ಗೃಹಿಣಿ, ಚಿನಾಹಳ್ಳಿ ನ್ಯಾಯಾಲಯದ ಕ್ವಾಟ್ರಸ್, ಚಿನಾಹಳ್ಳಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ ನಾವು ಪ್ರಸ್ತುತ ಚಿಕ್ಕನಾಯಕನಹಳ್ಳಿಯ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿರುವ ಸಿವಿಲ್ ನ್ಯಾಯಾಧೀಶರು(ಕಿ.ಶ್ರೇ.) ರವರ ವಸತಿ ಗೃಹದಲ್ಲಿ ನನ್ನ ಗಂಡ ಹಾಗೂ ಮಗನೊಂದಿಗೆ ವಾಸವಾಗಿದ್ದು, ದಿನಾಂಕ: 29/07/2020 ರಂದು ಪ್ರತಿದಿನದಂತೆ ನನ್ನ ಪತಿಯಾದ ಶ್ರೀ ಕಿರಣ್ ಕುಮಾರ್ ಡಿ. ವಡಿಗೇರಿ ರವರು ಆ ದಿನ ರಾತ್ರಿ ಅವರು ಕುತ್ತಿಗೆಗೆ ಹಾಕಿಕೊಂಡಿದ್ದ 24 ಗ್ರಾಂ ತೂಕದ ಒಂದು ಎಳೆಯ ಚಿನ್ನದ ಸರ, ಇದರ ಬೆಲೆ ರೂ.1,03,443-46 (ಒಂದು ಲಕ್ಷದ ಮೂರು ಸಾವಿರದ ನಾಲ್ಕುನೂರ ನಲವತ್ತ ಮೂರು ರೂಪಾಯಿ ನಲವತ್ತಾರು ಪೈಸೆ), ಸದರಿ ಸರವನ್ನು ಮಾರನೇ ದಿನ ಹಾಕಿಕೊಳ್ಳುವ ಷರ್ಟ್ ಜೇಬಿನಲ್ಲಿ ಇಟ್ಟು ಮಲಗಿದ್ದು, ದಿನಾಂಕ: 30.07.2020 ರಂದು ಬೆಳಿಗ್ಗೆ ಎಂದಿನಂತೆ ನಮ್ಮ ಮನೆಯವರು ಹೊರಗಡೆ ಪೇಪರ್ ಓದುತ್ತಾ ಕುಳಿತಿದ್ದರು. ನಮ್ಮ ಮಗ ನಿದ್ರೆ ಮಾಡುತ್ತಿದ್ದನು ಹಾಗೂ ನಾನು ಸ್ನಾನ ಮುಗಿಸಿಕೊಂಡು ಬಂದ ನಂತರ, ನಮ್ಮ ಯಜಮಾನರು ಸ್ನಾನ ಮುಗಿಸಿ ಬಂದು ಷರ್ಟ್ ಜೇಬಿನಲ್ಲಿ ಇಟ್ಟಿದ್ದ ಚಿನ್ನದ ಸರವನ್ನು ಹಾಕಿಕೊಳ್ಳುವ ಸಲುವಾಗಿ ಚೆಕ್ ಮಾಡಿದಾಗ ಜೇಬಿನಲ್ಲಿ ಇರಲಿಲ್ಲ. ಸದರಿ ಚಿನ್ನದ ಸರ ಕಳುವಾಗಿರುತ್ತದೆ. ಬಳಿಕ ಮನೆಯೆಲ್ಲಾ 2-3 ದಿವಸ ಹುಡುಕಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ತಡವಾಗಿ ಈ ದಿವಸ ಬಂದು ದೂರು ಸಲ್ಲಿಸಿರುತ್ತೇನೆ. ಆದ್ದರಿಂದ ಸದರಿ ಚಿನ್ನದ ಸರವನ್ನು ಹುಡುಕಿಸಿಕೊಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ಸ್ವೀಕರಿಸಿ ಠಾಣಾ ಮೊ. ನಂ. 76/2020 ಕಲಂ : 380 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲು ಮಾಡಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 32 guests online
Content View Hits : 905451
Hackguard Security Enabled