lowborn ಅಪರಾಧ ಘಟನೆಗಳು 07-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 07-08-20

ತಿಲಕ್ ಪಾರ್ಕ್‌ ಪೊಲೀಸ್ ಠಾಣಾ ಯು, ಡಿ, ಆರ್ ನಂ. 16/2020 ಕಲಂ 174 ಸಿ ಆರ್ ಪಿ ಸಿ

ದಿನಾಂಕ:-06.08.2020 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿಯಾದ ಶಿವ ಸುಮ್ರಮಣಿಂ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿನ ಸಾರಂಶವೇನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ನನ್ನ ಅಣ್ಣನಾದ 42 ವರ್ಷದ  ಸಕ್ತಿವೇಲ್ ಪೊನ್ನಸಾಮಿ (Sakthivel ponnu samy)  ಎಂಬ ಇಬ್ಬರು ಮಕ್ಕಳಿರುತ್ತೇವೆ. ಈಗ್ಗೆ ಸುಮಾರು 06 ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ತೆಂಗಿನ ಕಾಯಿ ಸಿಪ್ಪೆಯನ್ನು ತೆಗೆಯುವ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು.  ದಿನಾಂಕ:- 05.08.2020 ರಂದು ಮದ್ಯಾನ ಸುಮಾರು 02.00 ಗಂಟೆಗೆ ನನ್ನ ಅಣ್ಣನಾದ ಸಕ್ತಿವೇಲ್ ಪೊನ್ನಸಾಮಿ ರವರು ಗುಬ್ಬಿ ಗೇಟ್‌ನಲ್ಲಿರುವ ಜಿ.ಸಿ.ಬಿ ಬಿಡಿ ಬಾಗದ ಅಂಗಡಿಗೆ ಬಂದು ಬಿಡಿ ಬಾಗಗಳನ್ನು ತೆಗೆದುಕೊಳ್ಳುತ್ತಿರುವಾಗ್ಗೆ, ಇದ್ದಕ್ಕಿದಂತೆ ನೆಲಕ್ಕೆ ಕುಸಿದು ಬಿದ್ದಿರುತ್ತಾರೆ. ನಂತರ ಕೂಡಲೇ ಅಲ್ಲಿನ ಜನರು 108 ಅಂಬುಲೆನ್ಸ್ ಮುಖಾಂತರ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು, ಪ್ರಥಮ ಚಿಕಿತ್ಸೆ ನೋಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದು, ರಾತ್ರಿ ಸುಮಾರು 12.30 ಗಂಟೆಯಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ ಇ.ಸಿ.ಜಿ ಮಾಡಿಸಿದಾಗ ನನ್ನ ಅಣ್ಣನಾದ ಸಕ್ತಿವೇಲ್ ಪೊನ್ನಸಾಮಿ ರವರು ಮೃತಪಟ್ಟಿರುತ್ತಾರೆ. ಸಕ್ತಿವೇಲ್ ಪೊನ್ನಸಾಮಿ ರವರು ಇತ್ತೀಚಿಗೆ ಆರೋಗ್ಯ ಸರಿಯಿರಲಿಲ್ಲ. ಸದರಿಯವನು ಯಾವಗಲೂ ಎದೆ ನೋವು ಎದೆ ನೋವು ಎಂದು ಹೇಳುತ್ತಿದ್ದನು. ನನ್ನ ಅಣ್ಣನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನನ್ನ ಅಣ್ಣನು ಯಾವುದೋ ಖಾಯಿಲೆಯಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುತ್ತಾನೆ. ಹೆಣವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು, ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

ಹುಳಿಯಾರು ಪೊಲೀಸ್ ಠಾಣೆ ಮೊ. ನಂ. 115/2020 ಕಲಂ 15 (ಎ), 32(3) K E Act

ದಿನಾಂಕ:06.08.2020 ರಂದು ಸಂಜೆ 06:30 ಗಂಟೆಗೆ ಪಿ.ಎಸ್.ಐ ರವರು ನೀಡಿದ ಜ್ಞಾಪನದ ಅಂಶವೇನೆಂದರೆ ಹುಳಿಯಾರು ಪೊಲೀಸ್ ಠಾಣಾ  ಪಿ.ಎಸ್.ಐ ಆಗಿ  ಕರ್ತವ್ಯ ನಿರ್ವಹಿಸುತ್ತಿರುವ  ರಮೇಶ್ ಕೆ.ಟಿ ಆದ ನನಗೆ ದಿನಾಂಕ:-06.08.2020 ರಂದು ಸಂಜೆ 4.00  ಗಂಟೆ ಸಮಯದಲ್ಲಿ ಭಾತ್ಮೀದಾರರು ಪೋನ್ ಮಾಡಿ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಯಾರು ಹೋಬಳಿ, ಕಂಪನಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ಲೇ ಹನುಮಂತಪ್ಪ, ಎಂಬುವವರ ಮನೆಯ ಮುಂದೆ ಸಾರ್ವಜನಿಕವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು  ಮಾಹಿತಿ ಬಂದಿದ್ದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಮನೆಯ ಮುಂಭಾಗದಲ್ಲಿ ಇಬ್ಬರು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿದ ಇಬ್ಬರೂ ಆಸಾಮಿಗಳು ನಮ್ಮ ಕೈಗೆ ಸಿಗದೆ ಓಡಿಹೋಗಿದ್ದು ಪಂಚರ ಸಮಕ್ಷಮ ಪಂಚನಾಮೆಯನ್ನು ಕೈಗೊಂಡು ಮಾಲು ಮತ್ತು ಆರೋಪಿತನೊಂದಿಗೆ  ಠಾಣೆಗೆ ಬಂದು ಮುಂದಿನ ಕ್ರಮಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದು ಠಾಣಾ ಮೊ. ನಂ. 115/2020 ಕಲಂ 15 (ಎ), 32(3) K E Act  ರೀತ್ಯಾ ಪ್ರಕರಣ ದಾಖಲಿಸಿರುತ್ತೆ

 

ಜಯನಗರ ಪೊಲೀಸ್ ಠಾಣಾ ಮೊ.ನಂ. 53/2020 ಕಲಂ 448, 323, 324, 504, 506 ರೆ.ವಿ 34 ಐಪಿಸಿ

ದಿನಾಂಕ: 06/08/2020 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿ, ಕೆಸರಮಡು ವಾಸಿ ಕೆ.ವಿ. ಸುರೇಶ್ ಬಿನ್ ಲೇಟ್ ವೀರಭದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ಪಿರ್ಯಾದು ಅಂಶವೇನೆಂದರೆ, 2015 ನೇ ಇಸವಿಯಲ್ಲಿ ತುಮಕೂರು ಟೌನ್, ಮರಳೂರುದಿಣ್ಣೆ 7 ನೇ ಕ್ರಾಸ್‌‌ನಲ್ಲಿ  ಇರುವ ಜಯಮ್ಮ ಕೋಂ. ಶಂಕರಪ್ಪ ರವರ  ಮನೆಯನ್ನು ಕ್ರಯಕ್ಕೆ ಕೊಂಡು ಕೊಂಡಿದ್ದು, ನಂತರ ಜಯಮ್ಮ ಕೋಂ. ಶಂಕರಪ್ಪ ರವರಿಗೇ ಸದರಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದೆನು.  ಜಯಮ್ಮ ಕೋಂ. ಶಂಕರಪ್ಪರವರಿಗೆ ಸುಮಾರು ಸಾರಿ ಮನೆ ಖಾಲಿಮಾಡಿಸಲು ಪ್ರಯತ್ನಿಸಿದ್ದು, ಅವರು ನಮ್ಮ ಮನೆಯನ್ನು ಖಾಲಿ ಮಾಡದ ಕಾರಣ ನಾನು ನ್ಯಾಯಾಲಯಕ್ಕೆ ದೂರು ನೀಡಿ, ನ್ಯಾಯಾಲಯದ ಆದೇಶದ ಮೂಲಕ ಜಯಮ್ಮ ಕೋಂ. ಶಂಕರಪ್ಪ ರವರನ್ನು ಮನೆ ಖಾಲಿ ಮಾಡಿಸಿದ್ದೆವು. ಹೀಗಿರುವಲ್ಲಿ ಈ ದಿನ ದಿನಾಂಕ: 06-08-2020 ರಂದು ತುಮಕೂರು ಟೌನ್ ಮರಳೂರು ದಿಣ್ಣೆ 7 ನೇ ಕ್ರಾಸ್‌‌ನಲ್ಲಿರುವ ನಮ್ಮ ಮನೆಯನ್ನು ಕ್ಲೀನ್‌‌ಮಾಡಿಸಿ, ಮನೆಯ ಒಳಗೆ ಪ್ಲಾಸ್ಟಿಂಗ್‌‌‌ಮಾಡಿಸುತ್ತಿದ್ದಾಗ, ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಜಯಮ್ಮ ಕೋಂ.ಶಂಕರಪ್ಪ ಹಾಗೂ ಆಕೆಯ ಗಂಡ ಶಂಕರಪ್ಪ ಇಬ್ಬರೂ ಏಕಾಏಕಿ ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ, ಮನೆಯ ಒಳಗೆ ಪ್ಲಾಸ್ಟಿಂಗ್‌‌‌‌ಮಾಡಿಸುತ್ತಿದ್ದ ನನ್ನ ಮೇಲೆ ಜಗಳ ತೆಗೆದು ನನಗೆ ಬಾಯಿಗೆ ಬಂದಂತೆ ಸೂಳೇಮಗನೇ, ಲೋಪರ್‌‌ನನ್ನ ಮಗನೇ ನಮ್ಮನ್ನು ಮನೆಯಿಂದ ಖಾಲಿ ಮಾಡಿಸುತ್ತೀಯೇನೋ ಇವತ್ತು ನಿನ್ನನ್ನು ಬಿಡುವುದಿಲ್ಲ ಎಂತಾ ಜಗಳ ತೆಗೆದು ಇಬ್ಬರೂ ಸೇರಿ ಕೈಗಳಿಂದ ನನ್ನ ಮೈ ಮೇಲೆಲ್ಲಾ ಹೊಡೆದರು. ಅಷ್ಟರಲ್ಲಿ ಶಂಕರಪ್ಪ ಅಲ್ಲೇ ಮನೆಯ ಹಾಲ್‌‌ನಲ್ಲಿ ಗಾರೆ ಕೆಲಸದವರು ಪ್ಲಾಸ್ಟಿಂಗ್‌ಮಾಡಲು ತಂದಿಟ್ಟಿದ್ದ  ಮಟ್‌‌ಕೋಲನ್ನು ತೆಗೆದುಕೊಂಡು  ನನ್ನ ತಲೆಯ ಮದ್ಯಭಾಗಕ್ಕೆ ಹೊಡೆದನು.  ನಂತರ ಅದೇ ಮಟ್‌‌ಕೋಲಿನಿಂದ ಪುನ: ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು.  ಅಷ್ಟರಲ್ಲಿ ಅಲ್ಲಿಯೇ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸುತ್ತಿದ್ದ ಗಾರೆ ಮೇಸ್ತ್ರಿ ಮೊಹಿದ್ದೀನ್‌‌ಪಾಷ ಬಿನ್. ಲೇ|| ಕರೀಂಸಾಬ್ , ಗಾರೆ ಕೆಲಸ ಮಾಡುವ ಗೌಸ್‌‌ಪಾಷ ಬಿನ್. ಲೇ|| ಮಹಮ್ಮದ್‌‌ಹುಸೇನ್‌,  ದಾದಾಪೀರ್‌‌‌ಬಿನ್. ಅಬ್ದುಲ್‌‌‌‌ಸಲಾಮ್‌‌ಸಾಬ್‌, ಹಾಗೂ ಗಲಾಟೆಯ ಶಬ್ದ ಕೇಳಿ ನಮ್ಮ ಮನೆಯ ಬಳಿಗೆ ಬಂದ ಸಲ್ಮಾನ್‌‌‌ಬಿನ್. ಅಪ್ಜಲ್‌‌‌‌ರವರುಗಳು ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರಿಗೆ ಬುದ್ದಿ ಹೇಳಿ ಶಂಕರಪ್ಪನ ಕೈಯ್ಯಲ್ಲಿದ್ದ ಮಟ್ಟಗೋಲನ್ನು ಕಿತ್ತು ನಮ್ಮ ಮನೆಯ ಹಾಲ್‌‌ನಲ್ಲಿಯೇ ಬಿಸಾಕಿದರು.  ಆದರೂ ಸಹಾ ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರುಗಳು ನನ್ನನ್ನು ಕುರಿತು ನಿನ್ನನ್ನು ಇಷ್ಟಕ್ಕೇ ಬಿಡುವುದಿಲ್ಲ ಕೊಲೆ ಮಾಡಿಸಿಯೇ ತೀರುತ್ತೇವೆಂತಾ ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟುಹೋದರು.   ನಂತರ ಈ ಘಟನೆಯಲ್ಲಿ ಗಾಯಗೊಂಡಿದ್ದ ನನ್ನನ್ನು ಜಗಳ ಬಿಡಿಸಿದ ಸಲ್ಮಾನ್‌‌‌‌ಹಾಗೂ ನಮ್ಮ ಗಾರೆಮೇಸ್ತ್ರಿ ಮೊಹಿದ್ದೀನ್‌‌ಪಾಷ ರವರುಗಳು ಯಾವುದೋ ಒಂದು ಆಟೋದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ.  ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ವಿಶ್ರಾಂತಿ ಪಡೆದು ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ಶಂಕರಪ್ಪ ಹಾಗೂ ಆತನ ಹೆಂಡತಿ ಜಯಮ್ಮ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಸಿ.ಎಸ್.ಪುರ ಪೊಲೀಸ್ ಠಾಣೆ ಮೊ.ನಂ: 79/2020. ಕಲಂ: 279. 337 ಐಪಿಸಿ

ದಿನಾಂಕ:06.08.2020 ರಂದು ಸಂಜೆ 5.00 ಗಂಟೆಗೆ  ಈ ಕೇಸಿನ  ಫಿರ್ಯಾದಿಯಾದ  ಶಿವಮ್ಮ ಕೊಂ  ಲೊಕೇಶ, 30ವರ್ಷ, ಆದಿ ಕರ್ನಾಟಕ  ಜನಾಂಗ,  ಅಂಕಳ ಕೊಪ್ಪ ಗ್ರಾಮ, ಸಿ.ಎಸ್.ಪುರ  ಹೋಬಳಿ, ಗುಬ್ಬಿ  ತಾಲ್ಲೂಕು ರವರು ಠಾಣೆಗೆ   ಹಾಜರಾಗಿ  ನೀಡಿದ  ದೂರಿನ ಸಾರಾಂಶವೆಂದರೆ, ದಿನಾಂಕ:25.07.2020 ರಂದು  ಬೆಳಗ್ಗೆ 11.30 ಗಂಟೆ  ಸಮಯದಲ್ಲಿ  ನನ್ನ  ಮಗನಾದ   ನರಸಿಂಹ ಮೂರ್ತಿ  &  ಬೇರೆ ಹುಡುಗನೊಂದಿಗೆ ರಸ್ತೆ  ಪಕ್ಕ  ಕಾಲೋನಿಯ ಸಮೀಪ  ಆಟವಾಡುತ್ತಿರುವಾಗ್ಗೆ, ಬೋರಪ್ಪನಹಳ್ಳಿ  ಕಡೆಯಿಂದ  ಒಬ್ಬ ಆಸಾಮಿ ಅಂಕಳಕೊಪ್ಪದ ಕಡೆಗೆ  ದ್ವಿ ಚಕ್ರವಾಹನದಲ್ಲಿ  ಅತಿ ವೇಗ & ಅಜಾಗರುಕತೆಯಿಂದ  ತನ್ನ ದ್ವಿ ಚಕ್ರವಾಹನವನ್ನು  ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ  ಆಟವಾಡುತಿದ್ದ  ನನ್ನ  ಮಗ ನರಸಿಂಹ ಮೂರ್ತಿಯ  ಬಲಗಾಲಿಗೆ ಡಿಕ್ಕಿ ಹೊಡೆದು  ಅಪಘಾತಮಾಡಿ  ಕಾಲಿಗೆ  ಪೆಟ್ಟು   ಬಿದ್ದು ರಕ್ತಗಾಯವಾಗಿರುತ್ತದೆ. ಆಗ ನನ್ನ ಮಗ ಕಿರಾಡಿದಾಗ ಹೋಗಿ ನೋಡಲಾಗಿ  ಇಡಗೂರು  ವಾಸಿ ಚಂದ್ರ ಕುಮಾರ್  ಬಿನ್  ನರಸಿಂಹಯ್ಯ ಆಗಿದ್ದು, ವಾಹನ ನಂಬರ್ ನೋಡಲಾಗಿ ಕೆ.ಎ02-ಜೆಎಲ್-8140 ಹೊಂಡಾ  ಕಂಪನಿಯ ದ್ವಿ ಚಕ್ರವಾಹನವಾಗಿರುತ್ತೆ ಎಂದು   ಇತ್ಯಾದಿಯಾಗಿ  ನೀಡಿದ  ದೂರನ್ನು  ಪಡೆದು  ಸಿ.ಎಸ್.ಪುರ  ಠಾಣಾ  ಮೊ.ನಂ: 79/2020. ಕಲಂ: 279. 337 ಐಪಿಸಿ ರೀತ್ಯಾ   ಪ್ರಕರಣ  ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 21 guests online
Content View Hits : 905467
Hackguard Security Enabled