lowborn ಅಪರಾಧ ಘಟನೆಗಳು 11-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-08-20

ಚಿನಾಹಳ್ಳಿ ಪೊಲೀಸ್  ಠಾಣಾ ಮೊ.ನಂ. 80/2020 ಕಲಂ 457, 380 ಐಪಿಸಿ

ದಿನಾಂಕ:- 10/08/2020 ರಂದು ಸಂಜೆ 04.45 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ರತ್ನಮ್ಮ ಕೋಂ ನಿಂಗರಾಜು, 35 ವರ್ಷ, ಕುರುಬ ಜನಾಂಗ, ಕೂಲಿ ಕೆಲಸ, ಹೊನ್ನೆ ಬಾಗಿ, ಕಸಬಾ ಹೋಬಳಿ, ಚಿ.ನಾ.ಹಳ್ಳಿ ತಾಲ್ಲೂಕು ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಏನೆಂದರೆ  ನನ್ನ ಗಂಡ ನಿಂಗರಾಜುರವರು ಅಂಗವಿಕಲಾರಾಗಿದ್ದು  ಇತ್ತಿಚಿಗೆ ಇವರೆಗೆ ಸುಮಾರು  20 ದಿನಗಳ ಹಿಂದೆ ಪಾಶ್ವವಾಯು ಹೊಡೆದಿದ್ದು ಅವರನ್ನು ಹಾರನಹಳ್ಳಿಯಲ್ಲಿ ನಾಟಿ ವೈದ್ಯರಿಂದ ಚಿಕಿತ್ಸೆ ಕೊಡಿಸಿ ನನ್ನ ತವರು ಮನೆ ಹಂದನಕೆರೆಯಲ್ಲಿ ಬಿಟ್ಟಿದ್ದೆವು. ನಾನು  ದಿನಾಂಕ 08-08-2020 ಹೊನ್ನೆಬಾಗಿ ಮನೆಗೆ ಬಂದು ಮನೆಯನ್ನು ತೊಳೆದು ಮನೆಯಲ್ಲಿ ಪೂಜೆ ಮಾಡಿ ಮತ್ತೆ ವಾಪಸ್ಸು  ದಿನಾಂಕ 09-08-2020 ರಂದು ಸಂಜೆ   ಮನೆಗೆ ಬೀಗ ಹಾಕಿಕೊಂಡು ಹಂದನಕೆರೆಗೆ ಹೋದೆನು. ದಿನಾಂಕ 10-08-2020 ರಂದು ಬೆಳಿಗ್ಗೆ ಸುಮಾರು 10.00 ಗಂಟೆಯಲ್ಲಿ ನಮ್ಮ ಗ್ರಾಮದ ನಮ್ಮ ಸಂಬಂಧಿ ರೇವಣ್ಣ ಬಿನ್ ಪರ್ವತಯ್ಯ ರವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ತೆಗೆದಿದ್ದು ಯಾರೋ ಕಳ್ಳತನ ಮಾಡಿರಬಹುದು ಎಂದು ತಿಳಿಸಿದ್ದರಿಂದ ನಾನು ತಕ್ಷಣ ಹಂದನಕೆರೆಯಿಂದ ಹೊನ್ನೆಬಾಗಿಗೆ ಬಂದು ನೋಡಲಾಗಿ ದಿನಾಂಕ 09-08-2020 ರಾತ್ರಿ ಯಾವುದೋ ಸಮಯದಲ್ಲಿ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು  ಯಾರೋ ಕಳ್ಳರು ಮುರಿದು, ಒಳಗೆ ಹೋಗಿ ಬೀರುವಿನ ಡೋರ್ ಅನ್ನು ಯಾವುದೋ ಆಯುಧದಿಂದ  ಮೀಟಿ ತೆಗೆದಿದ್ದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿ  ಬಿದ್ದಿದ್ದವು . ನಾನು ಗಾಬರಿಯಿಂದ ಬೀರುವನ್ನು ಚೆಕ್ ಮಾಡಲಾಗಿ ಬಲಭಾಗದ ಲಾಕರ್ ನಲ್ಲಿ  ಇತ್ತೀಚಿಗೆ ಗ್ರಾಮೀಣ ಕೂಟದಿಂದ ಸಾಲವಾಗಿ ತಂದಿದ್ದ ಹಣದ ಪೈಕಿ  20000.00 ರೂ ಹಣ,  ಇದರ ಜೊತೆ ಸುಮಾರು 05 ಗ್ರಾಂ ಚಿನ್ನದ ಒಂದು ಜೊತೆ ಓಲೆ,  ಸುಮಾರು 02 ಗ್ರಾಂ ತೂಕದ ಚಿನ್ನದ ಕಿವಿಯ ಗುಂಡುಗಳು(ಇವುಗಳ ಸುಮಾರು ಬೆಲೆ 21000.00 ರೂಗಳು) ಹಾಗೂ ಹಳೆಯ ಒಂದು ಜೊತೆ ಕಾಲಂದಿಗೆ ಮತ್ತು ಒಂದು ಜೊತೆ ಕಾಲು ಚೈನ್  (ಇವುಗಳ ಅಂದಾಜು ಬೆಲೆ 3000.00 ರೂಗಳಾಗಿದ್ದು) ಎಲ್ಲವನ್ನು ಒಂದು ಪರ್ಸ್ ನಲ್ಲಿ ಇಟ್ಟಿದ್ದು ಇವುಗಳನ್ನು ಪರ್ಸ್ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆ.  ಮನೆಯಲ್ಲಿ ಕಳುವಾಗಿದ್ದ ಬಗ್ಗೆ ಪರಿಶೀಲಿಸಿ ಈಗ ಬಂದು ದೂರು ನೀಡುತ್ತಿದ್ದು  ಕಳುವು ಮಾಡಿರುವರನ್ನು ಪತ್ತೆ ಮಾಡಿ ಕಳುವಾಗಿರುವ ಮಾಲನ್ನು ಪತ್ತೆ ಮಾಡಿಕೊಂಡಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ನೀಡಿದ ಕಂಪ್ಯೂಟರ್ ಮುದ್ರಿತ ದೂರನ್ನು ಸ್ವೀಕರಿಸಿ ಠಾಣಾ ಮೊ.ನಂ. 80/2020 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣವನ್ನು  ದಾಖಲು ಮಾಡಿರುತ್ತೆ

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ ನಂ- 13/2020 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 10/08/2020 ರಂದು ಮಧ್ಯಾಹ್ನ 2-15 ಗಂಟೆಗೆ ಪಿರ್ಯಾದಿ ಶ್ರೀಮತಿ ಎನ್.ಕಮಲಮ್ಮ ಕೋಂ ರೇಣುಕಾರಾಧ್ಯ ಕೆ.ಎಸ್ 45 ವರ್ಷ, ಗೃಹಿಣಿ, ಕಲ್ಲೇಗೌಡನಪಾಳ್ಯ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಪತಿಯವರಾದ ರೇಣುಕಯ್ಯನವರು ಚಿ,ನಾ ಹಳ್ಳಿ ತಾಲ್ಲೂಕ್ ತಿಮ್ಮನಹಳ್ಳಿ ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಮಗೆ ಇಬ್ಬರು ಗಂಡು ಮಕ್ಕಳು ಇದ್ದು, ದೊಡ್ಡಮಗ ಶಶಾಂಕ್ , ಹಾಗೂ ಎರಡನೆಯ ಮಗ ಶ್ರೇಯಸ್ ಆಗಿರುತ್ತಾರೆ. ಶ್ರೇಯಸ್ 10 ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ಈತನಿಗೆ ಸುಮಾರು 2 ವರ್ಷದಿಂದ ಹೊಟ್ಟೆನೋವು ಬರುತ್ತಿದ್ದು, ಅವನಿಗೆ ಹಲವಾರು ಕಡೆ ಚಿಕಿತ್ಸೆ ಕೊಡಿಸಿರುತ್ತೇವೆ. ಆದರೂ ಸಹ ಸರಿಯಾಗಿ ಗುಣಮುಖವಾಗಿರದೇ ಹೊಟ್ಟೆನೋವು ಬರುತ್ತಿದ್ದು, ಈ ಸಮಯದಲ್ಲಿ ಮಾತ್ರೆಗಳನ್ನು ನುಂಗಿ ಹೊಟ್ಟೆನೋವು ಗುಣಪಡಿಸಿಕೊಳ್ಳುತ್ತಿದ್ದನು. ಈಗಿರುವಾಗ ದಿನಾಂಕ: 10/08/2020 ರಂದು ಬೆಳಿಗ್ಗೆ ನಾನು ಮತ್ತು ನನ್ನ ದೊಡ್ಡ ಮಗ ಶಶಾಂಕ್ ತೋಟಕ್ಕೆ ಹೋಗಿದ್ದು, ನನ್ನ ಯಜಮಾನರಾದ ರೇಣುಕಯ್ಯನವರು ಬ್ಯಾಂಕಿಗೆ ಕೆಲಸಕ್ಕೆ ಹೋಗಿದ್ದರು. ನಂತರ ಮಧ್ಯಾಹ್ನ 12-15 ಗಂಟೆಯ ಸಮಯದಲ್ಲಿ ಮನೆಗೆ ವಾಪಸ್ ಬಂದು ನೋಡಲಾಗಿ ನನ್ನ ಮಗ ಶ್ರೇಯಸ್ ಮನೆಯಲ್ಲಿ ಹಟ್ಟದ ತೊಲೆಗೆ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡು ಬಂತು. ಅದನ್ನು ನೋಡಿ ನಾನು ಕೂಗಿ ಕೊಂಡಾಗ ನಮ್ಮ ಗ್ರಾಮದ ಮಂಜುನಾಥ್ ರವರು ಬಂದಿದ್ದು, ಅವರು ಮತ್ತು ನಾನು ಶ್ರೇಯಸ್ ಗೆ ಜೀವ ಇರಬಹುದೆಂದು ತಿಳಿದು ತಕ್ಷಣ ಹಗ್ಗವನ್ನು ಕಡಿದು ಯಾವುದೋ ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಇಲ್ಲಿನ  ವೈದ್ಯರು ಶ್ರೇಯಸ್ ಮರಣ ಹೊಂದಿರುತ್ತಾರೆಂತಾ ತಿಳಿಸಿದರು. ಅವನ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ನನ್ನ ಎರಡನೆಯ ಮಗ ಶ್ರೇಯಸ್ ರವರಿಗೆ ಬರುತ್ತಿದ್ದ ಹೊಟ್ಟೆನೋವು ಗುಣಮುಖವಾಗದೇ ಜೀವನದಲ್ಲಿ ಬೇಸರಗೊಂಡು ನಾನು ಬದುಕಿರಬಾರದು ಎಂತಾ  ತೀರ್ಮಾನ ತಂದುಕೊಂಡು ತನ್ಮೂಲಕ ತಾನೇ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇವನ ಸಾವಿನಲ್ಲಿ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಯು.ಡಿ.ಆರ್ ನಂ- 13/2020 ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 35 guests online
Content View Hits : 905452
Hackguard Security Enabled