lowborn ಪತ್ರಿಕಾ ಪ್ರಕಟಣೆ ದಿ18-08-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ18-08-20

ಪತ್ರಿಕಾ ಪ್ರಕಟಣೆ ದಿ18-08-20

ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು ದೋಚುತ್ತಿದ್ದ ಆರೋಪಿಯ ಬಂಧನ

ಸುಮಾರು 10 ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರಗಳ ವಶ

* * * * * * *

ದಿನಾಂಕ : 01-08-2020 ರಂದು ರಾತ್ರಿ ಸುಮಾರು 01-30 ಗಂಟೆ ಸಮಯದಲ್ಲಿ  ಕೊರಾ ಪೊಲೀಸ್ ಠಾಣಾ ಸರಹದ್ದಿನ ಹಂಚಿಹಳ್ಳಿ ಗ್ರಾಮದ ಪಿರ್ಯಾದಿ ಮುನೇಶ್ ರವರ ಮನೆಗೆ ಸುಮಾರು 35-40 ವರ್ಷ ವಯಸ್ಸಿನ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಇದ್ದಕ್ಕಿದ್ದಂತೆ ಒಳನುಗ್ಗಿ ಪಿರ್ಯಾದಿಯ  ಪತ್ನಿ ಶ್ರೀಮತಿ. ಚೈತ್ರ ರವರ ಕೊರಳಿನಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಇದೇ ರೀತಿಯ ಪ್ರಕರಣಗಳು ಕೋರಾ ಪೊಲೀಸ್ ಠಾಣೆಯ ವಡ್ಡರಹಳ್ಳಿ, ಶಂಭೋನಹಳ್ಳಿ, ಮುದ್ದರಾಮಯ್ಯನಪಾಳ್ಯ, ಡಿ. ಕೊರಟಗೆರೆ, ಹಿರೇಗುಂಡಗಲ್, ಹಂಚಿಹಳ್ಳಿ ಗ್ರಾಮಗಳಲ್ಲಿ ಒಂಟಿ ಮನೆಗಳಲ್ಲಿ ಮಲಗಿದ್ದ ಹೆಂಗಸರ ಸರಗಳನ್ನು ಕಳವು ಮಾಡಲಾಗಿತ್ತು.

ಸದರಿ ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಲು ಎಂ.ವಿ.ಶೇಷಾದ್ರಿ. ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ದಿನಾಂಕ: 05-08-2020 ರಂದು ಆರೋಪಿ ರಂಗಪ್ಪ @ ರಾಜ @ ಪ್ರತಾಪ @ ಪ್ರಭು ಬಿನ್ ಲೇ. ಗೋವಿಂದಪ್ಪ, 38 ವರ್ಷ, ಅಂತರಸನಹಳ್ಳಿ ಪುಟ್ಟಮ್ಮನ ವಠಾರ, ಹೊಳೆ ಚೌಡೇಶ್ವರಿ ರಸ್ತೆ, ತುಮಕೂರು. ಸ್ವಂತ ಊರು: ಕಾಟಗೊಂಡನಹಳ್ಳಿ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕ್ ಎಂಬ ಆರೋಪಿಯನ್ನು ಬಂಧಿಸಿ ಈತನಿಂದ ಒಟ್ಟು 6 ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ  ಒಟ್ಟು 194 ಗ್ರಾಂ ತೂಕದ 5 ಮಾಂಗಲ್ಯದ ಸರಗಳನ್ನು ಹಾಗೂ 2 ಚಿನ್ನದ ಸರಗಳು ಒಟ್ಟು 10 ಲಕ್ಷ ಬೆಲೆ ಬಾಳುವ ವಡವೆಗಳನ್ನು ವಶಪಡಿಸಿಕೊಂಡು ದಿನಾಂಕ: 06-08-2020 ರಂದು ರಾತ್ರಿ 8-30 ಗಂಟೆಗೆ ಕೋರ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿತ್ತು. ಅದೇ ದಿನ ರಾತ್ರಿ 10-20 ಗಂಟೆಗೆ ಆರೋಪಿ ಕೋರ ಪೊಲೀಸ್ ಠಾಣೆಯ ಲಾಕಪ್‍ ನಿಂದ ಪರಾರಿಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾರುತ್ತೆ. ನಂತರ ಸದರಿ ಆರೋಪಿಯ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.

ಶಿರಾ ಪೊಲೀಸ್ ಠಾಣೆಯ ಪಿ.ಎಸ್.ಐ ಭಾರತಿ ಸಿಬ್ಬಂದಿಗಳಾದ ಶಿವಕುಮಾರ್ ಮತ್ತು ನಾಗರಾಜು ರವರುಗಳ ತಂಡವು ದಿನಾಂಕ: 18-08-2020 ರಂದು ಈ ದಿನ ಪರಾರಿಯಾಗಿದ್ದ ಆರೋಪಿಯನ್ನು ಮಧುಗಿರಿ ತಾಲ್ಲೂಕು ಮರುವೇಕೆರೆ ಗ್ರಾಮದಲ್ಲಿ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಂಡಿರುತ್ತಾರೆ.

ಸದರಿ ಆರೋಪಿಯು ಕೋರಾ ಪೊಲೀಸ್ ಠಾಣೆಯ ಒಟ್ಟು 07 ಪ್ರಕರಣಗಳ ಜೊತೆಗೆ ಈ ಹಿಂದೆ 2015 ನೇ ಸಾಲಿನಲ್ಲಿ ಬೆಂಗಳೂರು ನಗರದ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.

ಸದರಿ ಪ್ರಕರಣದ ಮಾಲು ಮತ್ತು ಆರೋಪಿಯನ್ನು ಪತ್ತೆ ಮಾಡಲು ಹಾಗೂ ಲಾಕಪ್ ನಿಂದ ಪರಾರಿಯಾಗಿದ್ದ ಸದರಿ ಆರೋಪಿಯನ್ನು ಬಂಧಿಸಲು ಶ್ರೀ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಎಂ.ವಿ.ಶೇಷಾದ್ರಿ. ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಪಿ.ಎಸ್.ಐ. ಹರೀಶ್,  ಕೋರಾ ಠಾಣೆಯ ಸಿಬ್ಬಂದಿಗಳಾದ ರಮೇಶ್, ನರಸಿಂಹರಾಜು, ಶಾಂತಕುಮಾರ್ ರವರುಗಳನ್ನು ಶ್ರೀ ಕೆ.ವಂಸಿಕೃಷ್ಣ, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ ರವರು ಅಭಿನಂದಿಸಿರುತ್ತಾರೆ.

 

 

*****************

 

ಕುಣಿಗಲ್ ಪೊಲೀಸರ ಕಾರ್ಯಾಚರಣೆ.

ಆಸ್ತಿಗಾಗಿ ಕೊಲೆ ಪ್ರಯತ್ನ ವಕೀಲ ಸೇರಿ 7 ಆರೋಪಿತರ ಬಂಧನ

 

ದಿನಾಂಕ 01/07/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಾಂಡುರಂಗ, ಪೋಟೋ ಗ್ರಾಫರ್, ಧನುಶ್ರೀ ಸ್ಟುಡಿಯೋ, ಕುಣಿಗಲ್ ಟೌನ್ ರವರು ಕುಣಿಗಲ್ ಮುಖ್ಯ ರಸ್ತೆಯಲ್ಲಿರುವ ತಮ್ಮ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದಾಗ  ಯಾರೋ ಇಬ್ಬರು ಅಪರಿಚಿತರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಪೋಟೋ ಕೇಳುವ ನೆಪದಲ್ಲಿ ಸ್ಟುಡಿಯೋ ಒಳಗೆ ಬಂದು ಪಿರ್ಯಾದಿಯ ಮುಖಕ್ಕೆ ಕಾರದ ಪುಡಿ ಎರಚಿ, ಚಾಕುವಿನಿಂದ  ಎಡಗೈಗೆ ಮತ್ತು ತಲೆಗೆ ಚುಚ್ಚಿದ್ದು ಆ ಸಮಯಕ್ಕೆ ಪಕ್ಕದ  ಅಂಗಡಿಯವರು ಬಂದಾಗ  ಪರಾರಿಯಾಗಿರುತ್ತಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣಾ ಮೊನಂ 161/2020 ಕಲಂ 307 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಸದರಿ ಪ್ರಕರಣವನ್ನು ಪತ್ತೆ ಮಾಡಲು ಶ್ರೀ ಕೆ.ಎಸ್.ಜಗದೀಶ್ KSPS. ಪೊಲೀಸ್ ಉಪಾಧೀಕ್ಷಕರು ಕುಣಿಗಲ್ ಉಪ-ವಿಭಾಗರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ವಿವಿಧ ಮಾರ್ಗೋಪಾಯ ಹಾಗೂ ತಾಂತ್ರಿಕತೆಯನ್ನು ಬಳಸಿಕೊಂಡು ಚಾಣಾಕ್ಷತೆಯಿಂದ ಕೊಲೆಗೆ ಸುಫಾರಿಕೊಟ್ಟಿದ್ದ ವಕೀಲರೂ ಸೇರಿದಂತೆ  ಈ ಕೆಳಕಂಡ 7 ಜನ ಆರೋಪಿಗಳನ್ನು  ಪತ್ತೆಮಾಡಿ ಸದರಿ ಆರೋಪಿತರು ಕೃತ್ಯಕ್ಕೆ ಬಳಸಿದ್ದ ಕೆಎ-01-ಎಂ.ಎ-1661 ಸ್ಯಾಂಟ್ರೋ ಕಾರು, ಕೆ.ಎ.05-MX-6399 ಸ್ವಿಪ್ಟ್ ಕಾರು, ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿರುತ್ತೆ.

 

ಆರೋಪಿಗಳ ವಿವರ.

1) ಶಿವಪ್ರಸಾದ್ಎಸ್ @ ಶಿವು  ಬಿನ್ ಶಿವಮಾದಯ್ಯ, 32 ವರ್ಷ, ವಕೀಲ ವೃತ್ತಿ, ಬೆಂಗಳೂರು

2) ಸಾದಿಕ್ @ ಸಾಧಿಕ್ ವುಲ್ಲಾಖಾನ್ ಬಿನ್ ನಸೀಂವುಲ್ಲಾಖಾನ್, 38-ವರ್ಷ, ಡ್ರೈವರ್ ಕೆಲಸ,  ಸರ್ಜಾಪುರ ಟೌನ್, ಅನೇಕಲ್ ತಾಲ್ಲೂಕು, ಬೆಂಗಳೂರು(ಗ್ರಾ) ಜಿಲ್ಲೆ.

3) ಮೊಹಮದ್  ಅಕ್ಭರ್ ಬಿನ್ ಅಲ್ಲಾಭಕಾಷ್, 20-ವರ್ಷ, ಬಾರ್ ಬೆಂಡಿಂಗ್  ಕೆಲಸ, ಮೈಸೂರು ರಸ್ತೆ,  ಗೌರಿಪಾಳ್ಯ,ಬೆಂಗಳೂರು

4) ಮೊಹಮದ್ ಮಸೂದ್  ಬಿನ್ ಯಾಸೀನ್, 25-ವರ್ಷ, ಡಿಲವರಿ ಕೆಲಸ, ಶಿವಾಜಿನಗರ, ಬೆಂಗಳೂರು

5) ಶಾರುಕ್ ಖಾನ್ ಬಿನ್ ಪೈರೋಜ್ ಖಾನ್, 25-ವರ್ಷ, ಡ್ರೈವರ್ ಕೆಲಸ, ಗೌರಿಪಾಳ್ಯ, ಬೆಂಗಳೂರು

6) ಮೌಲ @ ಫರಾಜ್, ಬಿನ್ ಬಾಬುಖಾನ್,32-ವರ್ಷ, ಕಾರ್ ಡೀಲರ್ ಕೆಲಸ, ವಾಸ ಕಲ್ಲಹಳ್ಳಿ, ಅನೇಕಲ್  ತಾಲ್ಲೂಕು,

7) ಅರುಣ.ಕೆ @ಟಗರು ಬಿನ್ ಕಾರ್ತಿಕೇಯನ್ ಆರ್ 30ವರ್ಷ, ಮೊದಲಿಯಾರ್ ಜನಾಂಗ, ಕಾರುಡ್ರೈವರ್, ಕತ್ರಿಗುಪ್ಪೆ, ಬೆಂಗಳೂರು

8) ಮತ್ತೊಬ್ಬ ಆರೋಪಿ ಮುಜ್ಜು, ಬೆಂಗಳೂರು  ಈತನು ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಕ್ರಮ ಕೈಗೊಂಡಿರುತ್ತೆ.

 

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಶ್ರಮಿಸಿದ ಶ್ರೀ ಉದೇಶ ಟಿ.ಜೆ. ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರವರ ಮಾರ್ಗದರ್ಶನದಲ್ಲಿ, ಜಗದೀಶ ಕೆ.ಎಸ್.ಪಿ.ಎಸ್.ಪೊಲೀಸ್ ಉಪಾಧೀಕ್ಷಕರು, ಕುಣಿಗಲ್‌ ಉಪವಿಭಾಗ ರವರ ನೇತೃತ್ವದಲ್ಲಿ ಸಿ.ಪಿ.ಐ. ನಿರಂಜನ್ ಕುಮಾರ್, ಪಿ.ಎಸ್.ಐ.ಗಳಾದ ವಿಕಾಸ್.ಎಸ್., ಶೆಟ್ಟಳಪ್ಪ.ಆರ್.ಎಸ್.  ಎ.ಎಸ್.ಐ ದೇವರಾಜು, ಸಿಬ್ಬಂದಿಗಳಾದ ಸಿದ್ದರಾಜು, ನಂಧೀಶಯ್ಯ, ಶ್ರೀನಿವಾಸ್, ಮಂಜುನಾಥ,  ದಯಾನಂದ, ರೇಣುಕಾ ಪ್ರಸಾದ್, ರವಿಕುಮಾರ್, ಪ್ರೇಮಕುಮಾರಿ, ಹನುಮಂತಯ್ಯ, ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು ಮತ್ತು ರಮೇಶ್ ರವರುಗಳ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಸಿಕೃಷ್ಣ ಐ.ಪಿ.ಎಸ್. ರವರು ಅಭಿನಂದಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 54 guests online
Content View Hits : 899245
Hackguard Security Enabled