lowborn ಅಪರಾಧ ಘಟನೆಗಳು 05-09-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 05-09-20

ಚಿನಾಹಳ್ಳಿ ಪೊಲೀಸ್ ಠಾಣಾ ಮೊ.ಸಂ. 90/2020 ಕಲಂ 323, 324, 354, 504 506 ರೆ/ವಿ 34 ಐ.ಪಿ.ಸಿ.

ದಿನಾಂಕ:- 04/09/2020 ರಂದು  ಸಂಜೆ 04.45 ಗಂಟೆ  ಸಮಯದಲ್ಲಿ ಪಿರ್ಯಾದುದಾರರಾದ ಕುಮಾರಯ್ಯ ಬಿನ್ ಲೇಟ್ ಯಳಿಯಪ್ಪ,  ಸುಮಾರು 48 ವರ್ಷ, ಗೊಲ್ಲ ಜನಾಂಗ, ಕೂಲಿಕೆಲಸ, ಕೆಂಪರಾಯನಹಟ್ಟಿ, ಕಂದಿಕೆರೆ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ: 02/09/2020 ರಂದು ಸುಮಾರು 07.30 ರಲ್ಲಿ ನಮ್ಮ ಗ್ರಾಮದ ವಾಸಿಗಳೇ ಆದ ನರಸಿಂಹಮೂರ್ತಿ ಬಿನ್ ಕಡ್ಲಗಯ್ಯ ಹಾಗೂ ತಿಮ್ಮಯ್ಯ ಕೋಂ ಕಡ್ಲಗಯ್ಯ ಇವರುಗಳು ರಸ್ತೆಯ ಗುಂಡಿಯಲ್ಲಿ ನಿಂತಿರುವ ಮಳೆಯ ನೀರನ್ನು ಸೀದಾ ನಮ್ಮ ಮನೆಯೊಳಗೆ ಬರುವ ಹಾಗೆ ಮಾಡಿರುತ್ತಾರೆ. ಇದನ್ನು ನನ್ನ ಹೆಂಡತಿಯಾದ ಕಮಲಮ್ಮ ಕೋಂ ಕುಮಾರಯ್ಯ ಇವರುಗಳು ಈ ತಿಮ್ಮಕ್ಕನವರನ್ನು ಕೇಳಿದ್ದಕ್ಕೆ ತಿಮ್ಮಕ್ಕನವರ ಮಗ ನರಸಿಂಹಮೂರ್ತಿ ಏಕಾಏಕಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ನಿಂದಿಸಿ ಕಮಲಮ್ಮನವರ ಜುಟ್ಟು ಹಿಡಿದು ಎಳೆದಾಡಿ ಬಟ್ಟೆಯನ್ನು ಹರಿದು ಹಾಕಿ ಕೆಳಕ್ಕೆ ಜೋರಾಗಿ ಬೀಳಿಸಿ ಕಾಲಿನಿಂದ ಮತ್ತು ಕೈಗಳಿಂದ ಹೊಡೆದು ಹಲ್ಲೆ ಮಾಡುತ್ತಿದ್ದನು ಮತ್ತು ತಿಮ್ಮಕ್ಕನವರು ಸಹ ನನ್ನ ಹೆಂಡತಿಯನ್ನು ಬಿಗಿಯಾಗಿ ಹಿಡಿದುಕೊಂಡು ಕೈಗಳಿಂದ ಹಲ್ಲೆ ಮಾಡುತ್ತಿದ್ದರು. ಅಷ್ಟರಲ್ಲಿ ಕೆಲಸದಿಂದ ಬಂದ ನಾನು ಈ ಗಲಾಟೆಯನ್ನು ನೋಡಿ ಈ ನರಸಿಂಹಮೂರ್ತಿ ಮತ್ತು ತಿಮ್ಮಕ್ಕನವರನ್ನು ಏಕೆ ನನ್ನ ಹೆಂಡತಿಯ ಮೇಲೆ ಹಲ್ಲೆ ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ತಿಮ್ಮಕ್ಕ ಹಾಗೂ ನರಸಿಂಹಮೂರ್ತಿ ಇಬ್ಬರು ನನ್ನ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಲು ಬಂದು ಈ ನರಸಿಂಹಮೂರ್ತಿ ಅಲ್ಲೇ ಇದ್ದ ಕರಣೆಯಿಂದ ನನ್ನ ಬಲಗೈಗೆ ಬಲವಾಗಿ ಹೊಡೆದು ನೋವುಂಟು ಮಾಡಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಸೊಸೆಗೆ ಸೀಮೆಎಣ್ಣೆಯಿಂದ ಬೆಂಕಿ ಹಚ್ಚಿದ ಹಾಗೆ ನಿಮಗೂ  ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದರು. ನಂತರ ಮನೆಯವರ ಜೊತೆ ಮಾತನಾಡಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಾವು ತಾವುಗಳು ದಯಮಾಡಿ ಈ ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಕಠಿಣ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ  ಎಂದು ನೀಡಿದ ಪಿರ್ಯಾದಿನ ಮೇರೆಗೆ ಠಾಣಾ ಮೊ.ಸಂ. 90/2020 ಕಲಂ 323, 324, 354, 504 506 ರೆ/ವಿ 34 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ತುರುವೇಕೆರೆ ಪೊಲೀಸ್ ಠಾಣಾ  ಮೊ.ನಂ: 187/2020. ಕಲಂ: 323. 324. 504. ಐಪಿಸಿ.

ದಿನಾಂಕ 04/09/2020 ರಂದು ಸಂಜೆ 4-00 ಗಂಟೆ ಸಮಯಕ್ಕೆ ಪಿರ್ಯಾದಿಯಾದ ಕೃಷ್ಣಸ್ವಾಮಿ ಬಿನ್ ಸಣ್ಣ ಹಾಲಯ್ಯ 38 ವರ್ಷ ಗೊಲ್ಲರು ಕೂಲಿ ಕೆಲಸ ಕಳ್ಳನಕೆರೆ ಗೊಲ್ಲರಹಟ್ಟಿ ತುರುವೇಕೆರೆ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರ ದಿನಾಂಕ 02/09/2020 ರಂದು ಬುಧವಾರ ಸುಮಾರು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾನು ಕಂದನ್ನು ಕೀಳುತ್ತಿದ್ದೇನು, ಆಗ ಬಂದು ಕೆ,ಎನ್ ಕುಮಾರ್ ಬಿನ್ ನಂಜುಂಡಯ್ಯ ಎಂಬುವನು ಮತ್ತು ಅವನ ಮನೆಯ ಆಳು ಬಂದು  ನಾನು ಬೇರೆಯವರ ಕೆಲಸ ಮಾಡುತ್ತಿದ್ದಾಗ ನಮ್ಮ ಮನೆಯ ಕೆಲಸಕ್ಕೆ ಬರಲ್ಲಿವೆಂದು ನನ್ನ ಹೊಟ್ಟೆಗೆ ಕಲ್ಲಿನಿಂದ ಹೊಡೆದು ಬಾಯಿಗೆ ಬಂದ ಹಾಗೆ ಬೈದಿರುತ್ತಾನೆ, ನನಗೆ ಹೊಟ್ಟೆ ಅಪರೇಷನ್ ಆಗಿರುತ್ತದೆ, ಆರೋಗ್ಯ ಸರಿಯಿಲ್ಲ ಈತನನ್ನು ಪೊಲೀಸ್ ಸ್ಟೇಷನ್  ಗೆ ಕರೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿಕೊಕಳ್ಳುತ್ತೇನೆ, ಅವನ ಮನೆಯಲ್ಲಿ 3 ತಿಂಗಳು ಕೂಲಿ ಮಾಡಿ1500 ರೂಗಳು ಮಾತ್ರ ಹಣ ಕೊಟ್ಟಿರುತ್ತಾನೆ, ನಮಗೆ ನ್ಯಾಯ ದೊರಕಿಸಿಕೊಟ್ಟು ನೆಮ್ಮದಿಯಿಂದ ಬಾಳುವಂತೆ ಸಹಕರಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿ,ಕೊಳ್ಳುತ್ತೇನೆಂತ ನೀಡಿರುವ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲು ಮಾಡಿರುತ್ತೇನೆ,

ಮಧುಗಿರಿ ಪೊಲೀಸ್ ಠಾಣಾ CR No:121/2020 ಕಲಂ:420 IPC

ದಿನಾಂಕ:04-09-2020 ರಂದು ಮದ್ಯಾಹ್ನ 01-15 ಗಂಟೆಗೆ ಈ ಕೇಸಿನ ಪಿರ್ಯಾದಿ ನಾಗರತ್ನಮ್ಮ ಕೋಂ ನರಸಪ್ಪ, 38 ವರ್ಷ, ವಕ್ಕಲಿಗರು, ಜಿರಾಯ್ತಿ, ಮರಿತಿಮ್ಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಧುಗಿರಿ ತಾ||  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯ ಮಗಳಾದ ರೂಪ ಕೋಂ ಜಗದೀಶ ರವರು ಬಾಣಂತಿಯಾಗಿದ್ದ ಕಾರಣದಿಂದ ಹೊರಗೆ ಓಡಾಡಲು ಅಗದ ಕಾರಣ ಆಕೆಯ ಬಾಬ್ತು ಬಡವನಹಳ್ಳಿ ಎಸ್,ಬಿ,ಐ ಬ್ಯಾಂಕಿನ  ಅಕೌಂಟ್ ನಂಬರ್ 38798621745 ನ ಎ,ಟಿ,ಎಂ ಕಾರ್ಡ ಅನ್ನು ಹಣದ ಅವಶ್ಯಕತೆ ಇರುವ ಕಾರಣ ತೆಗೆದುಕೊಂಡು ಬರಲು ನಾನು ನನ್ನ ಗಂಡ ನರಸಪ್ಪ ರವರು ಮಧುಗಿರಿಗೆ ಬಂದು ಅದೇ ದಿನ ದಿನಾಂಕ;30.06.2020 ರಂದು ಬೆಳಗ್ಗೆ;11.40 ಗಂಟೆಯ ಸಮಾರಿನಲ್ಲಿ ಮಧುಗಿರಿ ಎ,ಬಿ,ಐ ಬ್ಯಾಂಕಿನ ಎ,ಟಿ,ಎಂ ಸೆಂಟರ್ ಗೆ ನಾನು ಹೋಗಿ ನನ್ನ ಮಗಳ ಎ,ಟಿ,ಎಂ ಕಾರ್ಡ ಬಳಸಿ ಹಣ ಡ್ರಾ ಮಾಡಲು ಹೋದಾಗ ಇದೇ ಸಮಯಕ್ಕೆ ಒಬ್ಬ ಅಪರಿಚಿತ ವ್ಯಕ್ತಿಯು ಒಂದು ಎ,ಟಿ,ಎಂ ಕಾರ್ಡ ಅನ್ನು ಎ,ಟಿ,ಎಂ ಮೇಷಿನ್ ಗೆ  ಹಾಕುತ್ತಿದ್ದನು, ಅಗ ನಾನು ನನ್ನ ಎ,ಟಿ,ಎಂ ಕಾರ್ಡ ಅನ್ನು ಅತನಿಗೆ ಕೊಟ್ಟು ಹಣ ಡ್ರಾ ಮಾಡಿಕೊಡುವಂತೆ ಕೇಳಿದೆನು.ಆಗ ಆ ವ್ಯಕ್ತಿಯು ನನ್ನ ಕಾರ್ಡ ಅನ್ನು ಹಾಗು ಎ,ಟಿ,ಎಂ ಕಾರ್ಡನ ಪಿನ್ ನಂಬರ್ ಪಡೆದುಕೊಂಡನು,ನಂತರ ಆ ವ್ಯಕ್ತಿಯು ಅತನ ಬಳಿ ಇದ್ದ ನನ್ನ ಬಳಿ ಇರುವ ಎ,ಟಿ,ಎಂ ಕಾರ್ಡ ನಂತೆ ಇರುವ ಯಾವುದೋ ಎ,ಟಿ,ಎಂ ಕಾರ್ಡ ಅನ್ನು ಎ,ಟಿ,ಎಂ ಮೇಷಿನ್ ಗೆ  ಹಾಕಿ, ಈಗ ಹಣ ಬರುತ್ತೆ ತೆಗೆದಿಕೋ ಎಂದು ಹೇಳಿ ಅವಸರವಾಗಿ ಹೊರಗೆ ಹೋದನು.ನಂತರ ಎ,ಟಿ,ಎಂ ಮೇಷಿನ್ ನಲ್ಲಿ ಹಣ ಬಾರದ ಕಾರಣ ನಾನು ಹೊರಗೆ ಹೋಗಿ ಆ ವ್ಯಕ್ತಿಯನ್ನು ನೋಡಲಾಗಿ ಆವ್ಯಕ್ತಿಯು ಕಾಣಲಿಲ್ಲ.ನಂತರ ನನ್ನ ಮಗಳ ಮೊಬೈಲ್ ನಂಬರ್ ಗೆ 20000.00 ರೂ ಹಣ ಡ್ರಾ ಮಾಡಿರುವ ಬಗ್ಗೆ ಹಾಗು 2000.00 ರೂ ಪೆಟ್ರೋಲ್ ಬಂಕ್ ನಲ್ಲಿ  ಡ್ರಾ ಅಗಿರುವ ಬಗ್ಗೆ ಮೇಸೇಜ್ ಬಂದಿತು, ಆ ವ್ಯಕ್ತಿಯನ್ನು ನಾನು,ನನ್ನ ಗಂಡ ನರಸಪ್ಪ ರವರು ನೋಡಿರುತ್ತೇವೆ ನನ್ನ ಮಗಳು ಬಾಣಂತಿಯಾದ್ದರಿಂದ ಆಕೆಯನ್ನು ಹಾರೈಕೆ ಮಾಡುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು  ಅದ್ದರಿಂದ ನನ್ನ ಮಗಳ ಎ,ಟಿ,ಎಂ ಕಾರ್ಡ ಬಳಕೆ ಮಾಡಿಕೊಂಡು ಒಟ್ಟು 22000.00 ರೂ ಹಣವನ್ನು ಡ್ರಾ ಮಾಡಿಕೊಂಡು ನಮಗೆ ಮೋಸ ಮಾಡಿರುವ ಆ ವ್ಯಕ್ತಿಯನ್ನು ಪತ್ತೆ ಮಾಡಿ ಈ ಬಗ್ಗೆ ಮುಂದಿನ ಕಾನೂನು ಕ್ರಮಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 52 guests online
Content View Hits : 899252
Hackguard Security Enabled