lowborn ಅಪರಾಧ ಘಟನೆಗಳು 06-09-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 06-09-20

ಮಧುಗಿರಿ ಪೊಲೀಸ್ ಠಾಣಾ CR No:122/2020 ಕಲಂ:454,457,380 IPC

ದಿನಾಂಕ:05-09-2020 ರಂದು ಸಂಜೆ 06-15 ಗಂಟೆಗೆ ಈ ಕೇಸಿನ ಪಿರ್ಯಾದಿ ರೂಪ ಕೋಂ ಶ್ರೀನಿವಾಸ, 29 ವರ್ಷ, ಆದಿಕರ್ನಾಟಕ ಜನಾಂಗ, ಮನೆಕೆಲಸ, ಲಿಂಗೇನಹಳ್ಳಿ,ಮಧುಗಿರಿ ಟೌನ್|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯನ್ನು ದಿನಾಂಕ;10.05.2015 ರಂದು ಮಧುಗಿರಿ ಟೌನ್|| ಲಿಂಗೇನಹಳ್ಳಿಯಲ್ಲಿ ವಾಸವಿರುವ ಶ್ರೀನಿವಾಸ ಎಂಬುವರಿಗೆ ಕೊಟ್ಟು ಮಧುವೆ ಮಾಡಿದ್ದು ಕೆಲ ವರ್ಷಗಳ ಕಾಲ ಜೋತೆಗೆ ಸಂಸಾರ ಮಾಡಿದ ಬಳಿಕ ನನ್ನ ಗಂಡ ನನ್ನ ಜೋತೆಗೆ ಸಂಸಾರ ಮಾಡಲು ಇಚ್ಚಿಸದ ಕಾರಣ ನಾನು ಲಿಂಗೇನಹಳ್ಳಿಯಲ್ಲಿರುವ ನನ್ನ ಮಾವನಾದ ದಾಸಪ್ಪ ರವರಿಗೆ ಸೇರಿರುವ ಮತ್ತೊಂದು ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿರುತ್ತೇನೆ.ನನ್ನ ಗಂಡನು ಮಧುಗಿರಿ ಕೋರ್ಟ ನಲ್ಲಿ ವಿವಾಹ ವಿಚ್ಚೇದನ ಸಂಬಂದ ನನ್ನ ಮೇಲೆ ದಾವೆ ಹೂಡಿದ್ದು,ವಿಚಾರಣೆ ಹಂತದಲ್ಲಿರುತ್ತೆ.ನಾನು ದಿನಾಂಕ;05.08.2020 ರಂದು ನನ್ನ ತವರು ಮನೆಯಾದ ಗೆಡ್ಡೆತಿಮ್ಮನಹಳ್ಳಿಗೆ ಹೋಗಿದ್ದು ನಂತರ ನಾನು ದಿನಾಂಕ;28.08.2020 ರಂದು ಬೆಳಗ್ಗೆ;10.30 ಗಂಟೆಗೆ ಲಿಂಗೇನಹಳ್ಳಿಯ ನಾನು ವಾಸವಿರುವ ಮನೆಗೆ ಬಂದು ನೋಡಲಾಗಿ ನನ್ನ ಮನೆಯಲ್ಲಿ ಬೇರೆಯವರು ವಾಸವಿದ್ದರು ಆಗ ನಾನು ಅವರನ್ನು ವಿಚಾರಿಸಿದಾಗ ನಿಮ್ಮ ಅತ್ತೆ ಮಾವ ನಮಗೆ ಬಾಡಿಗೆ ನೀಡಿರುತ್ತಾರೆಂದು ತಿಳಿಸಿದರು, ನಂತರ ನಾನು ಮನೆಯ ಒಳಗೆ ಹೋಗಿ ನೋಡಲಾಗಿ ನನ್ನ ಬಾಬ್ತು ಯಾವುದೇ ಸಾಮಾನುಗಳು ಅಲ್ಲಿರಲಿಲ್ಲ, ನಂತರ ಮನೆಯ ಮೇಲೆ ಹೋಗಿ ನೋಡಲಾಗಿ ನಾನು ನನ್ನ ಮನೆಯಲ್ಲಿ ಇಟ್ಟಿದ್ದ ಬೀರುವು ಮನೆಯ ಮೇಲೆ ತಂದು ಇಟ್ಟಿದ್ದು ಈ ಬೀರಿವಿನ ಬಾಗಿಲು ಹೊಡೆದಿತ್ತು.ನಾನು ಇಲ್ಲದ ಸಮಯವನ್ನು ನೋಡಿಕೊಂಡು ನಾನು ವಾಸವಿದ್ದ ಮನೆ  ಬೀರುವನ್ನು ನನ್ನ ಗಂಡ ಶ್ರೀನಿವಾಸ,ನನ್ನ ಮಾವ ದಾಸಪ್ಪ ನನ್ನ ಅತ್ತೆ ಸಾಕಮ್ಮ ರವರು ಹೊಡೆದುಹಾಕಿ ಬೀರುವಿನಲ್ಲಿದ್ದ 1) ಮೂರುವರೆ ಗ್ರಾಂ ಚಿನ್ನದ ಉಂಗುರ, ಬೆಲೆ 10000.00,2)28 ಗ್ರಾಂ ಚಿನ್ನದ ಚೈನ್ ಬೆಲೆ 85000.00,3)109 ಗ್ರಾಂ ಬೆಳ್ಳಿಯ ಕಾಲು ಚೈನ್ ಬೆಲೆ 5000.00 ,4)10000.00 ರೂ ನಗದು ಹಣವನ್ನು,5)ಸುಮಾರು 8000 ರೂ ಬೆಲೆ ಬಾಳುವ ರೇಷ್ಮೇ ಸೀರೆಗಳನ್ನು ಕಳ್ಳತನ ಮಾಡಿರುತ್ತಾರೆ.ಬೀರುವಿನಲ್ಲಿದ್ದ ಕೆಲ ಬಟ್ಟೆಗಳನ್ನು ಹೊರಗೆ ಹಾಕಿರುತ್ತಾರೆ.ಅದ್ದರಿಂದ ಈ ಕೃತ್ಯವನ್ನು ಮಾಡಿರುವ ನನ್ನ ಗಂಡ ಶ್ರೀನಿವಾಸ,ನನ್ನ ಮಾವ ದಾಸಪ್ಪ ನನ್ನ ಅತ್ತೆ ಸಾಕಮ್ಮ ರವರುಗಳ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತೆ.

 

ಚಿನಾಹಳ್ಳಿ ಪೊಲೀಸ್ ಠಾಣಾ ಮೊ.ನಂ. 91/2020 ಕಲಂ 279, 337 ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ: 05-09-2020 ರಂದು ಸಂಜೆ 06.00 ಗಂಟೆಯ ಸಮಯದಲ್ಲಿ ಪಿರ್ಯಾದುದಾರರಾದ ಶಿವಣ್ಣ ಬಿನ್ ಲೇಟ್ ಮರಿಯಪ್ಪ, ಸುಮಾರು 60 ವರ್ಷ, ನಾಯಕ ಜನಾಂಗ, ಜಿರಾಯ್ತಿ, ದಬ್ಬೇಘಟ್ಟ, ಕಸಬಾ ಹೋಬಳಿ, ಚಿನಾಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 29/08/2020 ರಂದು ನನ್ನ ಮಗನಾದ ಮೋಹನ್ ಕುಮಾರ್ ಬಿನ್ ಶಿವಣ್ಣ, ಸುಮಾರು 35 ವರ್ಷ, ರವರು ಕೆಲಸದ ನಿಮಿತ್ತ ದಬ್ಬೇಘಟ್ಟದಿಂದ ಕೆ.ಬಿ. ಕ್ರಾಸ್ ಗೆ ಹೋಗುತ್ತಿರುವಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಟ್ರ್ಯಾಕ್ಟರ್ (ಕಲ್ಲುತುಂಬಿದ) ನಂ. ಕೆಎ44, ಟಿ 7147 ನನ್ನ ಮಗ ಓಡಿಸುತ್ತಿದ್ದ ಮೋಟಾರ್ ಸೈಕಲ್ ಗೆ ಬೆಳಿಗ್ಗೆ 11.00 ಗಂಟೆಗೆ ತರಬೇನಹಳ್ಳಿ ಗ್ರಾಮದ ಕುಂಬಾರರ ಮನೆಯ ಸಮೀಪ ಡಿಕ್ಕಿ ಹೊಡೆದ ಪರಿಣಾಮಕ್ಕೆ ಬಲ ಮತ್ತು ಎಡಗಾಲಿಗೆ ಹಾಗೂ ಬಲಗಣ್ಣಿಗೆ ತೀವ್ರತರವಾದ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆ. ನಮ್ಮ ಊರಿನ ಮಲ್ಲಿಕಯ್ಯನವರು ಅದೇ ದಾರಿಯಲ್ಲಿ ಬರುತ್ತಿದ್ದು, ನಮಗೆ ದೂರವಾಣಿ ಮುಖಾಂತರ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಆತನನ್ನು ಆಟೋದಲ್ಲಿ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಅದೇ ದಿನ ಸುಮಾರು ಬೆಳಿಗ್ಗೆ 12.00 ಗಂಟೆ ವೇಳೆಗೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಸರ್ಕಾರಿ ತುರ್ತು ವಾಹನದಲ್ಲಿ (108) ಹೋಗಿದ್ದೆವು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಬಿ.ಹೆಚ್. ರಸ್ತೆಯಲ್ಲಿರುವ ವಿನಾಯಕ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಲಾಗಿದೆ. ನಾವುಗಳು ನನ್ನ ಮಗನ ಆರೋಗ್ಯ ನೋಡಿಕೊಳ್ಳುತ್ತಿದ್ದ ಕಾರಣ ಈ ದಿನ ತಡವಾಗಿ ದೂರನ್ನು ಸಲ್ಲಿಸುತ್ತಿದ್ದೇನೆ. ತಾವುಗಳು ದಯಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿದ ಟ್ರ್ಯಾಕ್ಟರ್ ನಂ. ಕೆಎ 44, ಟಿ 7147 ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಚಾಲಕನ ಹೆಸರು, ವಿಳಾಸ ತಿಳಿದಿರುವುದಿಲ್ಲ. ಅಪಘಾತ ಮಾಡಿದ ಚಾಲಕ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಎಂದು ನೀಡಿದ ದೂರನ್ನು ಸ್ವೀಕರಿಸಿ ಠಾಣಾ ಮೊ.ನಂ. 91/2020 ಕಲಂ 279, 337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 136/2020, ಕಲಂ 78(3) ಕೆ.ಪಿ ಆಕ್ಟ್.

ದಿನಾಂಕ:-05-09-2020 ರಂದು ಬೆಳಗ್ಗೆ 11:30 ಗಂಟೆಯಲ್ಲಿ ಠಾಣಾ ಹೆಚ್.ಸಿ-246 ತೋಂಟಾರಾಧ್ಯ ಡಿ ಎಂರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:-05.09.2020 ರಂದು ಬೆಳಗ್ಗೆ 11:30 ಗಂಟೆ ಸಮಯದಲ್ಲಿ ಹುಳಿಯಾರು ಹೋಬಳಿ ಪೋಚುಕಟ್ಟೆ ತಾಂಡ್ಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಭಾತ್ಮೀ ಬಂದಿದ್ದು ಮುಂದಿನ ಕ್ರಮ ಕೈಗೊಳ್ಳಲು ವರದಿಯನ್ನು ನೀಡಿರುತ್ತೇನೆ ಎಂದು ನೀಡಿದ್ದನ್ನು ಪಡೆದು ಎನ್ ಸಿ ಆರ್ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದ ದಾಖಲಿಸಿರುತ್ತೇನೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 137/2020, ಕಲಂ 78(3) ಕೆ.ಪಿ ಆಕ್ಟ್.

ದಿನಾಂಕ:-05-09-2020 ರಂದು ಬೆಳಗ್ಗೆ 11:45 ಗಂಟೆಯಲ್ಲಿ ಠಾಣಾ ಹೆಚ್.ಸಿ-246 ತೋಂಟಾರಾಧ್ಯ ಡಿ ಎಂರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:-05.09.2020 ರಂದು ಬೆಳಗ್ಗೆ 11:45 ಗಂಟೆ ಸಮಯದಲ್ಲಿ ಹುಳಿಯಾರು ಟೌನ್ ದುರ್ಗಮ್ಮನ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಭಾತ್ಮೀ ಬಂದಿದ್ದು ಮುಂದಿನ ಕ್ರಮ ಕೈಗೊಳ್ಳಲು ವರದಿಯನ್ನು ನೀಡಿರುತ್ತೇನೆ ಎಂದು ನೀಡಿದ್ದನ್ನು ಪಡೆದು ಎನ್ ಸಿ ಆರ್ ಪ್ರಕರಣ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣದ ದಾಖಲಿಸಿರುತ್ತೇನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 50 guests online
Content View Hits : 899284
Hackguard Security Enabled