lowborn ಅಪರಾಧ ಘಟನೆಗಳು 07-09-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >> ಪತ್ರೀಕಾ ಪ್ರಕಟಣೆ ದಿನಾಂಕ 31/08/2020 ಕೋಲೆ ಆರೋಪಿಗಳ ಬಂಧನ ದಿನಾಂಕ: 21-08-2020 ರಂದು ರಾತ್ರಿ 11-00... >>       ಪತ್ರಿಕಾ ಪ್ರಕಟಣೆ ದಿ : 26-08-2020   ಖರ್ತನಾಕ್ ಕಳ್ಳನ ಬಂಧನ, ಕಳವಾಗಿದ್ದ ಸುಮಾರು 03... >> ಪತ್ರಿಕಾ ಪ್ರಕಟಣೆ ದಿ18-08-20 ರಾತ್ರಿ ವೇಳೆ ಮಹಿಳೆಯರ ಕೊರಳಿನಲ್ಲಿದ್ದ ಸರಗಳನ್ನು... >> ಪತ್ರಿಕಾ ಪ್ರಕಟಣೆ ರಾಬರಿಯಾದಂತೆ ಘಟನೆಯನ್ನು ತಾವೇ ಸೃಷ್ಠಿಸಿ, ಬ್ಯಾಂಕಿನ ರಿಕವರಿ... >> ಪತ್ರಿಕಾ ಪ್ರಕಟಣೆ ದಿನಾಂಕ: 19/06/2020 ಅಪರಿಚಿತ ಸುಮಾರು 55 ರಿಂದ 60 ವರ್ಷ ವಯಸ್ಸಿನ... >> ಪತ್ರಿಕಾ ಪ್ರಕಟಣೆ ದಿನಾಂಕ 14-06-2020 ಕೋವಿಡ್-19 ಸೋಂಕು ಹರಡಲು ಕಾರಣನಾದ ಮಹಮದ್ ಅಬೂಬಕರ್ ರವರ... >> ಪತ್ರಿಕಾ ಪ್ರಕಟಣೆ. ದಿನಾಂಕ 12-06-2020 ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್... >> ಪತ್ರಿಕಾ ಪ್ರಕಟಣೆ ದಿನಾಂಕ: 09/06/2020   OLX ನಲ್ಲಿ (ARMY ) ಸೈನಿಕರ ಹೆಸರಿನಲ್ಲಿ ವಂಚಿಸುತ್ತಿರುವ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 07-09-20

ಜಯನಗರ ಪೊಲೀಸ್ ಠಾಣಾ ಯುಡಿಆರ್.ನಂ. 22/2020 ಕಲಂ 174 ಸಿಆರ್ ಪಿಸಿ

ದಿನಾಂಕ: 06/09/2020 ರಂದು ರಾತ್ರಿ 08-00 ಗಂಟೆಯಲ್ಲಿ ತುಮಕುರು ಟೌನ್‍, ಉಪ್ಪಾರಹಳ್ಳಿ ವಾಸಿ ಲಕ್ಷ್ಮೀನಾರಾಯಣ ಬಿನ್ ಲಕ್ಷ್ಮೀನರಸಿಂಹಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಅಂಶವೇನೆಂದರೆ, ಈ ದಿನ ದಿನಾಂಕ: 06/09/2020 ರಂದು ಸುಮಾರು 5-30 ಗಂಟೆ ಸಮಯದಲ್ಲಿ ಉಪ್ಪಾರಹಳ್ಳಿ ಫ್ಲೈಓವರ್ ಕೆಳಗೆ ಜನರು ಗುಂಪು ಸೇರಿದ್ದು, ಏನೆಂದು ನೋಡಲು ನಾನು ಅಲ್ಲಿಗೆ ಹೋದಾಗ ಉಪ್ಪಾರಹಳ್ಳಿ ವಾಸಿ ಗಾರೆ ಕೆಲಸ ಮಾಡುವ ಸುರೇಶ ಬಿನ್ ಲೇಟ್ ಸಿದ್ದಪ್ಪರವರ ಜೊತೆಯಲ್ಲಿ ಅಲ್ಲಿ ಇಲ್ಲಿ ಗಾರೆ ಕೆಲಸ ಮಾಡಿಕೊಂಡು ಸುರೇಶನ ಜೊತೆಯಲ್ಲಿಯೇ ಈಗ್ಗೆ ಸುಮಾರು 2 ವರ್ಷಗಳಿಂದ ಓಡಾಡಿಕೊಂಡಿದ್ದ ಹೆಂಗಸು ಆಯಿಶಾ ಬಿನ್ ಫಾತಿಮಳು ಉಪ್ಪಾರಹಳ್ಳಿ ಫ್ಲೈಓವರ್ ಕೆಳಗೆ ರಸ್ತೆಯ ಡಿವೈಡರ್ ಕಟ್ಟೆಯ ಪಕ್ಕ ಮಲಗಿದ್ದ ಸ್ಥಳದಲ್ಲಿಯೇ ಮಧ್ಯಾಹ್ನ ಯಾವಾಗಲೋ ಮೃತಪಟ್ಟಿದ್ದಳು. ಈಕೆಯು ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ. ಆಯಿಶಾಳ ತಂದೆ ತಾಯಿ ಹಾಗೂ ಆಕೆಯ ರಕ್ತ ಸಂಬಂಧಿಕರು ಯಾರೂ ಇರುವುದಿಲ್ಲ. ಸುಮಾರು 2 ವರ್ಷಗಳಿಂದ ಸುರೇಶನ ಜೊತೆಯಲ್ಲಿಯೇ ಉಪ್ಪಾರಹಳ್ಳಿ ಪಾರ್ಕ್‌ಹತ್ತಿರ ಒಂದು ಶೆಡ್‌ನಲ್ಲಿ ವಾಸವಾಗಿದ್ದಳು. ಆದ್ದರಿಂದ ತಾವು ಸ್ಥಳ ಪರಿಶೀಲನೆ ಮಾಡಿ ಮೃತಳ ಶವವನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಪಿರ್ಯಾದು ಅಂಶವಾಗಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣೆ ಮೊ.ನಂ-81/2020 ಕಲಂ:279, 337, 304(ಎ) ಸಿಆರ್.ಪಿ.ಸಿ.

ದಿನಾಂಕ:06/09/2020 ರಂದು ಮಧ್ಯಾಹ್ನ   ಗಂಟೆಗೆ ಪಿರ್ಯಾದಿ ಪಿ.ವಿ. ಸುರೇಶ್ ಕುಮಾರ್ ಬಿನ್ ಪಿ.ವಿ ಕೃಷ್ಣಾರೆಡ್ಡಿ, 30 ವರ್ಷ, ರೆಡ್ಡಿ ಜನಾಂಗ, ಪಾಪಸಾನಪಲ್ಲಿ ಗ್ರಾಮ,ಮಡಕಶಿರಾ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನ್ನ ದೊಡ್ಡಪ್ಪ ಪಿ.ವಿ. ಜಯರಾಮರೆಡ್ಡಿ ಬಿನ್ ಲೇ|| ವೆಂಕಟರೆಡ್ಡಿ ಮತ್ತು ನನ್ನ ದೊಡ್ಡಮ್ಮ ಲಕ್ಷ್ಮೀದೇವಮ್ಮ ಇಬ್ಬರೂ ಕೆಲಸದ ನಿಮಿತ್ತ ಮಧುಗಿರಿ ತಾಲ್ಲೂಕಿನ ಹನುಮಂತಪುರ ಗ್ರಾಮಕ್ಕೆ ಬರಲು ಈ ದಿನ ಬೆಳಿಗ್ಗೆ 09-15 ಗಂಟೆಯಲ್ಲಿ  ಕೆಎ-64-ಆರ್-5478 ನೇ ಡಿಯೋ ದ್ವಿಚಕ್ರ ವಾಹನದಲ್ಲಿ ಊರಿನಿಂದ ಬಂದಿದ್ದರು. ನಂತರ ಇದೇ ದಿನ ಬೆಳಿಗ್ಗೆ ಸುಮಾರು 09-30 ಗಂಟೆಗೆ ಚಂದ್ರಬಾವಿ ಗ್ರಾಮದ ಅನಿಲ್ ಕುಮಾರ್ ರವರು ನನಗೆ ಪೋನ್ ಮಾಡಿ ನಿಮ್ಮ ಸಂಬಂದಿ ಜಯರಾಮರೆಡ್ಡಿ ಮತ್ತು ಅವರ ಹೆಂಡತಿ ಲಕ್ಷ್ಮೀದೇವಮ್ಮರವರಿಗೆ ನಮ್ಮೂರಿನ ಹತ್ತಿರ ಆಕ್ಸಿಡೆಂಟ್ ಆಗಿದೆ ನೀವು ಬೇಗ ಬನ್ನಿ ಎಂತ ತಿಳಿಸಿದರು. ಅಷ್ಠರಲ್ಲಿ ಕೆಲಸದ ನಿಮಿತ್ತ ಚಂದ್ರಬಾವಿಗೆ ಬರುತ್ತಿದ್ದ ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ದೊಡ್ಡಪ್ಪ ಜಯರಾಮರೆಡ್ಡಿರವರ ಬಲಮೊಣಕಾಲಿಗೆ ,ಎಡಕಾಲಿನ ಮಂಡಿಗೆ ಹಾಗೂ ಮುಖಕ್ಕೆ  ಪೆಟ್ಟುಗಳು ಬಿದ್ದು ರಕ್ತ ಗಾಯಗಳಾಗಿದ್ದವು. ನನ್ನ ದೊಡ್ಡಮ್ಮ ಲಕ್ಷ್ಮೀದೇವಮ್ಮನಿಗೆ ಬಲಭುಜಕ್ಕೆ ಸೊಂಟಕ್ಕೆ ಮುಖಕ್ಕೆ ಪೆಟ್ಟುಗಳು ಬಿದ್ದು ರಕ್ತ ಗಾಯಗಳಾಗಿದ್ದವರನ್ನು ಅಪಘಾತ ಪಡಿಸಿದ ವ್ಯಾನಿನ ಚಾಲಕ ವೇಣುಗೋಪಾಲ್ ಮತ್ತು ಅನಿಲ್ ಕುಮಾರ್ ರವರುಗಳು ಉಪಚರಿಸುತ್ತಿದ್ದರು. ನಂತರ ಅಪಘಾತದ ವಿಚಾರವನ್ನು ಅನಿಲ್ ಕುಮಾರ್ ರವರಿಂದ ತಿಳಿಯಲಾಗಿ ಈ ದಿನ ಬೆಳಿಗ್ಗೆ ನಿನ್ನ ದೊಡ್ಡಪ್ಪ ನಿನ್ನ ದೊಡ್ಡಮ್ಮನನ್ನು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ನೀಲಕಂಠಾಪುರ  ರಸ್ತೆಯಲ್ಲಿ ಬಂದವರು ಮಧುಗಿರಿ ಕಡೆಗೆ ಹೋಗಲು  ಮಧುಗಿರಿ ಪಾವಗಡ ರಸ್ತೆಗೆ ತಿರುಗಿಕೊಂಡು ಹೋಗುತ್ತಿರುವಾಗ ಮಧುಗಿರಿ ಕಡೆಯಿಂದ ಅದೇ ರಸ್ತೆಯಲ್ಲಿ ಎದುರಿಗೆ ಬಂದ  ಕೆಎ-06-ಎಂ-8784 ನೇ ಓಮಿನಿ ವ್ಯಾನಿನ ಚಾಲಕ ತನ್ನ ವಾಹನವನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ನಿನ್ನ ದೊಡ್ಡಪ್ಪ ಓಡಿಸಿಕೊಂಡು ಹೋಗುತ್ತಿದ್ದ ಡಿಯೋ ವಾಹನಕ್ಕೆ ಡಿಕ್ಕಿ ಹೊಡೆಸಿದನೆಂತ ತಿಳಿಸಿದರು. ಅಷ್ಠರಲ್ಲಿ ವಿಚಾರ ತಿಳಿದು ಸ್ಥಳಕ್ಕೆ ಬಂದ ಕೆಶಿಪ್ ಆಂಬ್ಯೂಲೆನ್ಸ್ ನಲ್ಲಿ ನನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮ ನನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದುಕೊಂಡು ಹೋಗಿ ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಮ್ಮ ದೊಡ್ಡಮ್ಮನನ್ನು ಎಂ,ಸಿ. ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಗಾಯಗಳಾಗಿದ್ದ ನಮ್ಮ ದೊಡ್ಡಪ್ಪನನ್ನು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರನ್ನು ಪರಿಕ್ಷಿಸಿದ ವೈದ್ಯರು ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದರಿಂದ ಅವರ ಶವವನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ತಂದಿಟ್ಟಿರುತ್ತೇವೆ. ಆದ್ದರಿಂದ ಈ ಅಪಘಾತ ಉಂಟು ಮಾಡಿ ನಮ್ಮ ದೊಡ್ಡಪ್ಪನ ಸಾವಿಗೆ ಕಾರಣನಾದ ಮೇಲ್ಕಂಡ ಕೆಎ-06-ಎಂ-8784 ನೇ ಓಮಿನಿ ವ್ಯಾನಿನ ಚಾಲಕ ವೇಣು ಗೋಪಾಲ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-128/2020 ಕಲಂ 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್

ದಿನಾಂಕ-06/09/2020 ರಂದು ಹೆಬ್ಬೂರು ಪೊಲೀಸ್ ಠಾಣಾ ಎ ಎಸ್ ಐ ನರಸಿಂಹರಾಜು ಎಸ್ ಸಿ ರವರು ತುಮಕೂರಿನ ಹೇಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಬ್ರುಹಾನ್ ಪಾಷ ಬಿನ್ ನಜೀರ್ ಸಾಬ್, 26 ವರ್ಷ, ಮುಸ್ಲಿಂ ಜನಾಂಗ, ಪ್ಯಾಸೆಂಜರ್ ಆಟೋ ಚಾಲಕ, ವಾಸ ಬೆಳಗುಂಬ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ದೂ.ನಂ-9620546251 ರವರು ಈ ದಿನ ವೈಧ್ಯರ ಸಮಕ್ಷಮ ನೀಡಿದ ಹೇಳಿಕೆ ಏನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ಸಂಸಾರ ಸಮೇತ ವಾಸವಾಗಿರುತ್ತೇನೆ, ನಾನು ಸುಮಾರು 05 ವರ್ಷಗಳ ಹಿಂದೆ ನನ್ನ ಚಿಕ್ಕಪ್ಪ ಅಬ್ದುಲ್ ಸಾಬ್ ರವರ ಹೆಸರಿನಲ್ಲಿರುವ ಕೆಎ-06-ಡಿ-5015 ನೇ ನಂಬರಿನ ಪ್ಯಾಸೆಂಜರ್ ಆಟೋವನ್ನು ಅವರಿಂದ ಬಾಡಿಗೆಗೆ ಪಡೆದು ದಿನಾಲೂ ಓಡಿಸಿಕೊಂಡಿರುತ್ತೇನೆ, ದಿನಾಂಕ-02/09/2020 ರಂದು ಬೆಳಿಗ್ಗೆ 8-00 ಗಂಟೆಗೆ ಮನೆ ಬಿಟ್ಟು ಕೆಎ-06-ಡಿ-5015 ನೇ ಆಟೋವನ್ನು ತೆಗೆದುಕೊಂಡು ತುಮಕೂರು ಟೌನ್ ನಲ್ಲಿ ಬಾಡಿಗೆ ಹೊಡೆಯಲು ಹೋಗಿದ್ದು ಇದೇ ದಿನ ಸಂಜೆ 6-00 ಗಂಟೆ ಸಮಯಕ್ಕೆ ನನಗೆ ಪರಿಚಯವಿರುವ ನಾಗವಲ್ಲಿ ಗ್ರಾಮದ ಬಳಿ ಇರುವ ಹೊನ್ನೇನಹಳ್ಳಿ ಗ್ರಾಮದ ಸಿದ್ದರಾಜು ಎಂಬುವವರು ಪೋನ್ ಮಾಡಿ ನನಗೆ ಉಷಾರಿಲ್ಲ ಆಸ್ಪತ್ರೆಗೆ ನನ್ನನ್ನು ತುಮಕೂರಿಗೆ ಕರೆದುಕೊಂಡು ಹೋಗು ಎಂತಾ ತಿಳಿಸಿದ್ದು, ನಾನು ಸಿದ್ದರಾಜುವನ್ನು ಅವರ ಊರಿನಿಂದ ತುಮಕೂರಿಗೆ ಕರೆದುಕೊಂಡು ಬರಲೆಂದು ನನ್ನ ಬಳಿ ಇರುವ ಆಟೋವನ್ನು ಚಾಲನೆ ಮಾಡಿಕೊಂಡು ತುಮಕೂರನ್ನು ಸಂಜೆ 6-30 ಗಂಟೆಗೆ ಬಿಟ್ಟು ತುಮಕೂರು ಕುಣಿಗಲ್ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಸ್ವಲ್ಪ ಹಿಂದೆ ತುಮಕೂರು ಕಡೆ, ರಸ್ತೆಯ ಎಡಬದಿಯಲ್ಲಿ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಗಿನಿಂದ ಒಂದು ಕಾರನ್ನು ಅದರ ಚಾಲಕ ಕುಣಿಗಲ್ ತುಮಕೂರು ರಸ್ತೆಗೆ ಅತಿವೇಗವಾಗಿ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾನು ಹೋಗುತ್ತಿದ್ದ ಆಟೋದ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಆಟೋ ಸಮೇತ ಟಾರ್ ರಸ್ತೆಯ ಪಕ್ಕಕ್ಕೆ ಬಿದ್ದಿದ್ದು ನೋಡಲಾಗಿ ನನಗೆ ಎಡಕೈಗೆ ಬಲವಾದ ಏಟು ಬಿದ್ದಿದ್ದು, ಎಡಕೆನ್ನೆ ಹುಬ್ಬು ಹಾಗೂ ಕಣ್ಣಿನ ಹುಬ್ಬಿಗೆ ರಕ್ತಗಾಯವಾಗಿ ಬೆನ್ನಿಗೆ ಮೂಗೇಟು ಬಿದ್ದಿದ್ದು ಆಟೋ ಪೂರಾ ಜಖಂ ಆಗಿದ್ದು ಆಗ ಸಮಯ ಸಂಜೆ ಸುಮಾರು 7-00 ಗಂಟೆ ಆಗಿದ್ದು ಅಪಘಾತ ಪಡಿಸಿದ ಕಾರನ್ನು ನೋಡಲಾಗಿ ಕೆಂಪುಬಣ್ಣದ ಕಾರಾಗಿದ್ದು ಅದರ ನಂಬರ್ ನೋಡಲಾಗಿ ಕೆಎ-06-ಎಂ-8593 ಆಗಿದ್ದು ಅದರಲ್ಲಿದ್ದವರಿಗೆ ಯಾವುದೇ ರಕ್ತಗಾಯಗಳಾಗಿರುವುದಿಲ್ಲ, ಚಾಲಕ ಹೆಸರು ತಿಳಿಯಲಿಲ್ಲ ನನಗೆ ಅಪಘಾತ ಪಡಿಸಿದ ಕಾರಿನ ಚಾಲಕ ಉಪಚರಿಸಿದೇ ಕಾರನ್ನು ಸ್ಥಳದಿಂದ ತೆಗೆದುಕೊಂಡು ಹೊರಟು ಹೋದ. ನಂತರ ನಮ್ಮ ಅಣ್ಣ ಸೈಯರ್ ಪಾಷ ರವರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಯಾವುದೋ ಖಾಸಗಿ ವಾಹನದಲ್ಲಿ ಸಾರ್ವಜನಿಕರ ಸಹಾಯದಿಂದ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಸರ್ಕಾರಿ ಆಸ್ಪತ್ರೆಯಿಂದ ಎಲ್ಲಿಹೋದರೆಂತ ತಿಳಿಯಲಿಲ್ಲ, ನಂತರ ನನಗೆ ದಿನಾಂಕ-04/09/2020 ರಂದು ಸಂಜೆ ಪ್ರಜ್ಞೆ ಬಂದಾಗ ತುಮಕೂರಿನ ಹೇಮಾವತಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆಯುತ್ತಿರುವುದಾಗಿ ತಿಳಿಯಿತು, ಆದ್ದರಿಂದ ದಿನಾಂಕ-02/09/2020 ರಂದು ಸಂಜೆ 7-00 ಗಂಟೆ ಸಮಯದಲ್ಲಿ ನನಗೆ ಅಪಘಾತ ಪಡಿಸಿ ರಕ್ತಗಾಯಪಡಿಸಿ ನೋವುಂಟು ಮಾಡಿ ನಿಲ್ಲಿಸದೇ ಹೊರಟುಹೋಗಿರುವ ಕೆಎ-06-ಎಂ-8593 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿಬೇಕೆಂದು ನನ್ನ ಹೇಳಿಕೆ ನೀಡಿರುತ್ತೇನೆ, ಅಪಘಾತಕ್ಕೋಳಗಾದ ನನ್ನ ಆಟೋ ಪಚ್ಚೇಗೌಡರವರ ಪಂಚರ್ ಅಂಗಡಿಯ ಮುಂಭಾಗ ಇರುತ್ತೆ ಎಂತಾ ನೀಡಿದ ಹೇಳಿಕೆಯನ್ನು ಪಡೆದು ಮಧ್ಯಾಹ್ನ 1-30 ಗಂಟೆಗೆ ಹಾಜರುಪಡಿಸಿದ್ದನ್ನು ಪಡೆದು ಠಾಣಾ ಮೊ ನಂ-128/2020 ಕಲಂ 279,337 ಐಪಿಸಿ ರೆ/ವಿ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 47 guests online
Content View Hits : 899291
Hackguard Security Enabled