lowborn ಅಪರಾಧ ಘಟನೆಗಳು 05-10-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 05-10-20

ಕ್ಯಾತಸಂದ್ರ ಪೊಲೀಸ್ ಠಾಣೆ ಮೊ.ಸಂ 187/2020 ಕಲಂ-457,380 ಬಾದಂಸಂ

ದಿನಾಂಕ: 04-10-2020 ರಂದು ಮದ್ಯಾಹ್ನ 02.30 ಗಂಟೆಗೆ ಪಿರ್ಯಾದಿ ವೀರಭಧ್ರಪ್ಪ ಬಿನ್ ಲೇಟ್ ರುದ್ರಪ್ಪ , 65 ವರ್ಷ, ಲಿಂಗಾಯಿತರು , ವ್ಯವಸಾಯ , ವಾಸ; ಮನೆ 1 ನೇ ಕ್ರಾಸ್ ಶ್ರೀ ನಗರ ಕ್ಯಾತ್ಸಂದ್ರ ತುಮಕೂರು ನಗರ ಸ್ವಂತ ಊರು – ಗೌರಗೊಂಡನಹಳ್ಳಿ, ಕೋರಾ ಹೋಬಳಿ, ತುಮಕೂರು ತಾ|| ತುಮಕೂರು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ವ್ಯವಸಾಯ ಮತ್ತು ಅಡಿಕೆ ವ್ಯಾಪಾರ ಮಾಡಿಕೊಂಡಿದ್ದು, ತುಮಕೂರಿನ ಶ್ರೀನಗರ ಬಡಾವಣೆಯ 1-ನೇ ಕ್ರಾಸ್ ನಲ್ಲಿ ನನ್ನ ಸ್ವಂತ ಮನೆ ಇರುತ್ತದೆ. ಕೆಳಗಿನ ಮನೆಯನ್ನು ನಾವು ವಾಸಕ್ಕೆ ಇಟ್ಟುಕೊಂಡಿದ್ದು, 1-ನೇ ಮಹಡಿಯಲ್ಲಿರುವ 02 ಮನೆಗಳನ್ನು ಬಾಡಿಗೆಗೆ ಕೊಟ್ಟಿರುತ್ತೇವೆ. ನಾನು ಗೌರಗೊಂಡನಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ವಾರದಲ್ಲಿ 02 ಬಾರಿ ತುಮಕೂರಿನ ಬಟವಾಡಿಯ A.P.M.C ಯಾರ್ಡಿಗೆ ಅಡಿಕೆ ವ್ಯಾಪಾರಕ್ಕೆ ಬಂದಾಗ ಶ್ರೀನಗರದ ಮನೆಯಲ್ಲಿ ಇರುತ್ತಿದ್ದೆನು. ಈ ಮನೆಯಲ್ಲಿ ಯಾರೂ ಸಂಸಾರ ಇರುವುದಿಲ್ಲ. ವ್ಯಾಪಾರ ಮುಗಿಸಿಕೊಂಡು ನಾನು ಈ ನನ್ನ ಮನೆಗೆ ಡೋರ್ ಲಾಕ್ ಹಾಕಿಕೊಂಡು ವಾಪಸ್ಸು ಊರಿಗೆ ಹೋಗುತಿದ್ದೆನು. ನಾನು ದಿನಾಂಕ: 24-09-2020 ರಂದು ತುಮಕೂರಿಗೆ ಅಡಿಕೆ ವ್ಯಾಪಾರಕ್ಕೆ ಬಂದ್ದಿದ್ದು, ಅಂದು ರಾತ್ರಿ ಶ್ರೀನಗರದ ಮನೆಯಲ್ಲಿ ಉಳಿದುಕೊಂಡೆನು. ಹಾಗೂ ನನಗೆ ಅಡಿಕೆ ವ್ಯಾಪಾರದಲ್ಲಿ ಬಂದಿದ್ದ 30 ಸಾವಿರ ಹಣವನ್ನು ಸೋಮವಾರ ಮಂಡಿಗಳಿಗೆ ಕಟ್ಟಬೇಕಾಗಿತ್ತು. ಆದರೆ ಸೋಮವಾರ ಕರ್ನಾಟಕ ಬಂದ್ ಇದ್ದುದ್ದರಿಂದ ನಾನು ನನ್ನ ಬಳಿ ಇದ್ದ 30 ಸಾವಿರ ಹಣವನ್ನು ನಮ್ಮ ಶ್ರೀನಗರದ ಮನೆಯ ರೂಮಿನಲ್ಲಿರುವ ವಾರ್ಡ್ ರೋಬಿನಲ್ಲಿ ಇಟ್ಟು ಅದಕ್ಕೆ ಬೀಗಹಾಕಿ, ರೂಮಿಗೂ ಬೀಗ ಹಾಕಿ ನಂತರ ಮನೆಗೆ ಡೋರ್ ಲಾಕ್ ಹಾಕಿಕೊಂಡು ಮರುದಿನ ನಾನು ನಮ್ಮೂರಿಗೆ ಹೋಗಿದ್ದೆನು. ಇವತ್ತು ಬೆಳಿಗ್ಗೆ 8-30 ಗಂಟೆಯಲ್ಲಿ ನಮ್ಮ ಮನೆಯ ಮೇಲಿನ ಬಾಡಿಗೆ ಮನೆಯ ಲಕ್ಷ್ಮಮ್ಮರವರು ನಮಗೆ ಪೋನ್ ಮಾಡಿ ನಿಮ್ಮ ಮನೆಯ ಮುಂಭಾಗಿಲಿನ ಡೋರ್ ಲಾಕ್ ಅನ್ನು ಯಾರೋ ಹೊಡೆದಿರುತ್ತಾರೆಂದು ತಿಳಿಸಿದರು. ನಂತರ ಇದೇ ದಿವಸ ನಾನು ಶ್ರೀನಗರದ ನಮ್ಮ ಮನೆಯ ಬಳಿಗೆ ಬಂದು ನೋಡಿದಾಗ ನಮ್ಮ ಮನೆಯ ಬಾಗಿಲಿನ ಡೋರ್ ಲಾಕ್ ಅನ್ನು ಯಾರೋ ಮೀಟಿ ತೆಗೆದು, ಒಳಗಿನ ರೂಮಿನ ಬೀಗವನ್ನು ಸಹಾ ಹೊಡೆದಿದ್ದು, ರೂಮಿನ ಒಳಗಿನ ವಾರ್ಡ್ ರೋಬ್ ಬಾಗಿಲನ್ನು ಸಹಾ ಮೀಟಿ ತೆಗೆದಿದ್ದು, ಅದರಲ್ಲಿ ನಾನು ಇಟ್ಟಿದ್ದ 30 ಸಾವಿರ ರೂ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನೆನ್ನೆ ರಾತ್ರಿ  ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗವನ್ನು ಹೊಡೆದು ವಾರ್ಡ್ ರೋಬಿನಲ್ಲಿಟ್ಟಿದ್ದ ನನ್ನ 30 ಸಾವಿರ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರತ್ತೆ.

ಹೆಬ್ಬೂರು ಪೊಲೀಸ್ ಠಾಣಾ ಮೊ.ನಂ. 140/2020 ಕಲಂ 279, 304(ಎ) ಐಪಿಸಿ ರೆ/ವಿ 134(ಎ&ಬಿ), 187 ಐ.ಎಂ.ವಿ ಆ್ಯಕ್ಟ್‌

ದಿನಾಂಕ 04-10-2020 ರಂದು ಬೆಳಗ್ಗೆ 09-30 ಗಂಟೆಗೆ ಪಿರ್ಯಾದಿ ಹನುಮಯ್ಯ ಬಿನ್ ಲೇಟ್ ಗಂಗಯ್ಯ, 38 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ,  ವಡೇರಪುರ ಗ್ರಾಮ, ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನನ್ನ ತಂದೆ ಲೇಟ್ ಗಂಗಯ್ಯ ತಾಯಿ ಲೇಟ್ ಈರಮ್ಮ ರವರಿಗೆ 03 ಜನ ಗಂಡು ಮಕ್ಕಳು ಒಬ್ಬರು ಹೆಣ್ಣು ಮಗಳಿದ್ದು ಎಲ್ಲರಿಗೂ ಮದುವೆಯಾಗಿ ಬೇರೆ ಬೇರೆ ವಾಸವಾಗಿರುತ್ತೇವೆ, 01 ನೇ ಗಂಗಮ್ಮ 02 ನೇ ನರಸಿಂಹಯ್ಯ, 03 ನೇ ಹನುಮಂತಯ್ಯ, 04 ನೇ ನಾನು ಹನುಮಯ್ಯ ಆಗಿದ್ದು ನನ್ನ ಅಣ್ಣನಾದ ಹನುಮಂತಯ್ಯ ಬಿನ್ ಲೇಟ್ ಗಂಗಯ್ಯ, ಸುಮಾರು 40 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯವಸಾಯ, ವಡೇರಪುರ ಗ್ರಾಮ, ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ ರವರಿಗೆ, ಇಬ್ಬರು ಗಂಡು ಮಕ್ಕಳಿದ್ದು 01 ನೇ ಗಂಗಹನುಮಯ್ಯ 02 ನೇ ರಾಮಾಂಜಿನೇಯ ಆಗಿದ್ದು, ನನ್ನ ಅಣ್ಣ ದಿನಾಂಕ:-01-10-2020 ರಂದು ಆತನ ಸ್ವಂತ ಕೆಲಸದ ನಿಮಿತ್ತ ಆತನ ಸೈಕಲ್ ನಲ್ಲಿ ಸಾಯಂಕಾಲ ಸುಮಾರು 4-30 ಗಂಟೆಯಲ್ಲಿ ಅವರ ಮನೆಯಿಂದ ಹೆಬ್ಬೂರು ಗ್ರಾಮಕ್ಕೆ ಬಂದು ಅವರ ಕೆಲಸ ಮುಗಿಸಿಕೊಂಡು ವಾಪಸ್ಸು ಅವರ ಸೈಕಲ್ ನಲ್ಲಿ ಕೋಡಿಪಾಳ್ಯ ಬಳಿ ಇರುವ ರಾಜಣ್ಣ ರವರ ಮನೆಯ ನೇರದಲ್ಲಿ ಕುಣಿಗಲ್ ತುಮಕೂರು ಟಾರು ರಸ್ತೆಯ ಮೇಲೆ ಸಾಯಂಕಾಲ ಸುಮಾರು 6-30 ಗಂಟೆಯಲ್ಲಿ ಬರುತ್ತಿರುವಾಗ್ಗೆ, ಅದೇ ಸಮಯಕ್ಕೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಒಂದು ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ನನ್ನ ಅಣ್ಣ ಬರುತ್ತಿದ್ದ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನನ್ನ ಅಣ್ಣ ಸೈಕಲ್  ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ ಅಲ್ಲಿಯೇ ನೋಡಿದ ಗಿರೀಶ ಎಂಬುವರು ನೋಡಿ, ಓಡಿ ಹೋಗಿ ನೋಡಿ  ಕೂಡಲೆ ನನ್ನ ಮಗನಾದ  ನಟೇಶನಿಗೆ ತಿಳಿಸಿದಾಗ ನನ್ನ ಮಗ ನಟೇಶನು ಹೋಗಿ ನೋಡಲಾಗಿ ನನ್ನ ಅಣ್ಣನ ತಲೆಗೆ ಪೆಟ್ಟು ಬಿದ್ದು ರಕ್ತ ಬರುತ್ತಿದ್ದು, ಅಲ್ಲಿಯೇ ಇದ್ದ ಗಿರೀಶ ರವರಿಗೆ ಕೇಳಲಾಗಿ ಅಪಘಾತಪಡಿಸಿದ ದ್ವಿಚಕ್ರ ವಾಹನದ ನಂಬರನ್ನು ನಾನು ನೋಡಿದ್ದು ಕೆಎ-06-ಹೆಚ್.ಇ-9849 ನೇ ಆಕ್ಸಿಸ್ ದ್ವಿಚಕ್ರ ವಾಹನವಾಗಿದ್ದು, ದ್ವಿಚಕ್ರ ವಾಹನದ ಸವಾರ ವಾಹನವನ್ನು ನಿಲ್ಲಿಸದೇ ಹೊರಟು ಹೋದನೆಂತ ತಿಳಿಸಿದಾಗ ಕೂಡಲೆ ನನ್ನ ಮಗ 108 ಅಂಬುಲೆನ್ಸ್ ಕರೆಸಿಕೊಂಡು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರು  ಹೆಚ್ಚಿನ ಚಿಕಿತ್ಸೆಗಾಗಿ   ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿರುವುದಾಗಿ ನಮಗೆ ತಿಳಿಸಿದಾಗ, ಅಲ್ಲಿಗೆ ನಾನು ನನ್ನ ಅಣ್ಣನ ಮಗ ಗಂಗಹನುಮಯ್ಯ ಮತ್ತು ನನ್ನ ಅತ್ತಿಗೆ ಸಿದ್ದಗಂಗಮ್ಮ ರವರು ತುಮಕೂರಿಗೆ ಹೋಗಿ ಬೇರೆ ಆಂಬುಲೆನ್ಸ್ ನಲ್ಲಿ ಬೆಂಗಳೂರು ನಿಮನ್ಸ್ ಆಸ್ಪತ್ರೆಗೆ, ನನ್ನ ಮಗ ನಟೇಶ ನನ್ನ ಅತ್ತಿಗೆ ಸಿದ್ದಗಂಗಮ್ಮ, ಅವರ ಮಗ ಗಂಗಹನುಮಯ್ಯ ರವರು ಕರೆದುಕೊಂಡು ಹೋಗಿ ದಿನಾಂಕ:-01-10-2020 ರಿಂದ ದಿನಾಂಕ:-04-10-2020 ರಂದು ಬೆಳಗಿನ ಜಾವ 3-00 ಗಂಟೆಯವರೆಗೆ ಚಿಕಿತ್ಸೆ ಕೊಡಿಸಿದರೂ ಸಹಾ ಚಿಕಿತ್ಸೆ ಫಲಕಾರಿಯಾಗದೆ, ಈದಿನ ದಿನಾಂಕ:-04-10-2020 ರಂದು ಬೆಳಗಿನ ಜಾವ ಸುಮಾರು 03-00 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ನನ್ನ ಅಣ್ಣನ ಮಗ ಗಂಗಹನುಮಯ್ಯ ರವರು ನನಗೆ ತಿಳಿಸಿದ್ದು, ನಾವು ಎಲ್ಲರೂ ಚಿಕಿತ್ಸೆ ಕೊಡಿಸಿಕೊಂಡು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿದ್ದುದರಿಂದ ನಾವು ದೂರು ಕೊಡಲು ಆಗಿರಲಿಲ್ಲ, ನಾನು ವಿಚಾರವನ್ನು ಖಾತ್ರಿ ಪಡಿಸಿಕೊಂಡು ನನ್ನ ಅಣ್ಣನಿಗೆ ಅಪಘಾತಪಡಿಸಿ ಮೃತಪಡಲು ಕಾರಣನಾದ ಕೆಎ-06-ಹೆಚ್.ಇ-9849 ನೇ ಆಕ್ಸಿಸ್ ದ್ವಿಚಕ್ರ ವಾಹನದ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಈ ನನ್ನ ದೂರನ್ನು ನೀಡಿರುತ್ತೇನೆ ಎಂದು ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಮೊ.ನಂ: 140/2020 ಕಲಂ 279, 304(ಎ) ಐ.ಪಿ.ಸಿ ರೆ/ವಿ 134(ಎ&ಬಿ), 187 ಐ.ಎಂ.ವಿ ಆ್ಯಕ್ಟ್‌ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ- ಮೊ.ನಂ- 94/2020 ಕಲಂ; 420,423,465,468,471,177 ಐ.ಪಿ.ಸಿ.

ದಿನಾಂಕ:04/10/2020 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಶ್ರೀ ಕುಮಾರ್ ಬಿನ್ ಮಹಲಿಂಗಪ್ಪ, ಈಡೇನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಅಂಶವೇನೆಂದರೆ, ತಿಪಟೂರು ತಾಲ್ಲೂಕ್ ಈಡೇನಹಳ್ಳಿ ಗ್ರಾಮದ ಸರ್ವೆ ನಂ- 69/2 ರಲ್ಲಿ ಒಟ್ಟು 1-10 ½ ಗುಂಟೆ ಜಮೀನು ನನ್ನ ತಂದೆಯವರಾದ ಮಹಲಿಂಗಪ್ಪರವರ ಹೆಸರಿನಲ್ಲಿದ್ದು, ಇವರಿಗೆ ಜಂಟಿಯಾಗಿ ನಮ್ಮ ತಂದೆಯ ತಮ್ಮಂದಿರಾದ ಚನ್ನಬಸಪ್ಪ, ಸಣ್ಣನಂಜಪ್ಪ, ಮತ್ತು ನಮ್ಮ ತಾತ ರಂಗಪ್ಪನ ತಮ್ಮನ ಮಗನಾದ ಸದಾಶಿವಯ್ಯ ಬಿನ್ ಮರಿಬಸವಯ್ಯ ರವರ ಹೆಸರಿಗೆ ಪಹಣಿಯಲ್ಲಿ ನಮೂದಾಗಿರುತ್ತದೆ.

ನಮ್ಮ ಚಿಕ್ಕಪ್ಪ ಚನ್ನಬಸವಯ್ಯರವರ ಮಗನಾದ ಸಿ.ರವಿಶಂಕರ್ ರವರು ಕಾನೂನು ಬಾಹಿರವಾಗಿ ಖಾತೆ ಬದಲಾವಣೆ ಮಾಡಿಕೊಂಡು ನಮಗೆ ಮೋಸ ಮಾಡಿ “ಪೌವತಿವಾರಸು” ಖಾತೆ ಬದಲಾವಣೆ ಸಲುವಾಗಿ ಸಲ್ಲಿಸಿರುವ ವಂಶವೃಕ್ಷ ಪತ್ರದ ಸಂಖ್ಯೆ: RD0039137062353 ದಿನಾಂಕ: 03/12/2015 ರಲ್ಲಿ ರಂಗಪ್ಪನವರು ಒಬ್ಬನೇ ಮಗ, ಸದಾಶಿವಯ್ಯರವರಿಗೆ ಗೌರಮ್ಮ ಎಂಬ ಹೆಂಡತಿ ಇದ್ದು, ಇಬ್ಬರು ಪವತಿ ಎಂದು ನಮೂದಿರುತ್ತಾರೆ. ಮತ್ತು ಇವರಿಗೆ ಮೂರು ಜನ ಮಕ್ಕಳಿದ್ದು, 1ನೇ ಮಹಲಿಂಗಪ್ಪ ಎಂದು ಮತ್ತು ಅವರ ಹೆಂಡತಿಯ ಹೆಸರು ನಿಜವಾಗಿ ನಂಜುಂಡಮ್ಮ ಎಂಬುದಾಗಿದ್ದು, ಆದರೆ ಹೊನ್ನಮ್ಮ ಎಂತಲೂ ಅವರಿಗೆ ಮಕ್ಕಳಿರುವುದಿಲ್ಲ ಎಂದು ತಪ್ಪಾಗಿ ನಮೂದಿಸಿರುತ್ತಾರೆ. ಸದರಿ ರವಿಶಂಕರ್ ರವರ ಹೆಸರು ಮತ್ತು ಅವರ ಕುಟುಂಬವನ್ನು ನಮೂದಿಸಿರುತ್ತಾರೆ. 3ನೇ ಸಣ್ಣನಂಜಪ್ಪನವರ ಹೆಸರನ್ನು ನಮೂದಿಸಿ ಅವರಿಗೆ ಲಗ್ನವಿಲ್ಲ ಎಂದು ಬರೆದಿರುತ್ತಾರೆ. ಮಹಲಿಂಗಪ್ಪನವರಿಗೆ 5 ಜನ, ಸಣ್ಣಪ್ಪನವರಿಗೆ ಮದುವೆಯಾಗಿ ಹೊನ್ನಮ್ಮ ಎಂಬ ಹೆಂಡತಿ ಇದ್ದು, ಅವರು ಜೀವಂತವಾಗಿರುತ್ತಾರೆ. ಮತ್ತು ಇಬ್ಬರು ಗಂಡು ಮಕ್ಕಳಿರುತ್ತಾರೆ. ಇದರ ಎಲ್ಲಾ ದಾಖಲಾತಿಗಳನ್ನು ನಾನು ನೀಡಿರುವ ವಂಶವೃಕ್ಷ ಪತ್ರದ ಸಂಖ್ಯೆ:RD0039137256747 ದಿನಾಂಕ: 13/07/2020 ರ ಪ್ರಮಾಣ ಪತ್ರದಲ್ಲಿ ನಮೂದಿಸಿರುತ್ತೇನೆ.

ಖಾತೆ ಬದಲಾವಣೆಗಾಗಿ ಮೇಲ್ಕಂಡವರು ನೀಡಿರುವ ಮರಣ ಪ್ರಮಾಣ ಪತ್ರಗಳು ಹಾಗೂ ದಾಖಲೆಗಳು, ವಿವರಗಳು ಈ ಕೆಳಗಿನಂತಿವೆ.

1) ಸದಾಶಿವಯ್ಯನವರು ದಿ: 24-11-1980 ರಲ್ಲಿ ನಿಧನರಾಗಿದ್ದಾರೆ ಮತ್ತು ಅವರ ತಂದೆ ರಂಗಪ್ಪ ಎಂದು ತಪ್ಪಾಗಿ ನಮೂದಾಗಿದೆ.

2) ಸದಾಶಿವಯ್ಯನವರ ಪತ್ನಿ ಗೌರಮ್ಮ ದಿ:24/10/1987 ರಲ್ಲಿ ನಿಧನರಾಗಿದಾರೆಂದು ನಮೂದಿಸಲಾಗಿದೆ. ಆದರೆ ಅವರು ಇನ್ನು ಜೀವಂತವಿದ್ದಾರೆ.

3) ಮಹಲಿಂಗಪ್ಪನವರು ಮರಣ ಹೊಂದಿ ಬಹಳ ವರ್ಷಗಳೇ ಆಗಿದ್ದರೂ ಕೂಡ ದಿ: 10-08-2006 ಎಂದು ನಮೂದಿಸಿ ತಂದೆಯ ಹೆಸರನ್ನು ಸದಾಶಿವಯ್ಯ ಎಂದು ತಪ್ಪಾಗಿ ನಮೂದಿಸಲಾಗಿದೆ.

4) ಮಹಲಿಂಗಪ್ಪನವರು ಪತ್ನಿಯ ಹೆಸರನ್ನು ಹೊನ್ನಮ್ಮ ಎಂದು ನಮೂದಿಸಿ ಅವರು ದಿ: 22-06-2008 ರಂದು ಪವತಿ ಹೊಂದಿರುತ್ತಾರೆ ಎಂದು ತಪ್ಪು ನಮೂದಿಸಿರುತ್ತಾರೆ.

5) ಚನ್ನ ಬಸವಯ್ಯನವರ ಮರಣ ದಿನಾಂಕ ಸರಿಯಿದ್ದರೂ ತಂದೆಯ ಹೆಸರನ್ನು ಸದಾಶಿವಯ್ಯ ಎಂದು ತಿದ್ದಿರುತ್ತಾರೆ.

6) ಸಣ್ಣನಂಜಪ್ಪನವರ ಮರಣ ದಿನಾಂಕವನ್ನು ಬದಲಾಯಿಸಿ ಅವರ ತಂದೆಯ ಹೆಸರನ್ನು ತಪ್ಪಾಗಿ ನಮೂದಿಸಿರುತ್ತಾರೆ

ಈ ಎಲ್ಲ ಪ್ರಮಾಣ ಪತ್ರಗಳಿಗೆ ಜನನ ಮರಣ ನೋಂದಣಾಧಿಕಾರಿಗಳವರ ಕಛೇರಿಯಲ್ಲಿ ಯಾವುದೇ ದಾಖಲೆ ಇರುವುದಿಲ್ಲ. ನನ್ನ ಚಿಕ್ಕಪ್ಪಂದಿರಾದ ಚನ್ನಬಸವಯ್ಯ, ಸಣ್ಣ ನಂಜಪ್ಪ ಮತ್ತು ಸದಾಶಿವಯ್ಯ ರವರುಗಳ ಜೆರಾಕ್ಸ್ ಮರಣ ಪ್ರಮಾಣ ಪತ್ರಗಳು ಹಾಗೂ ವಂಶವೃಕ್ಷಗಳ  ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತೇನೆ. ಮರಣ ಪ್ರಮಾಣ ಪತ್ರಗಳು ಎಲ್ಲವೂ ಹಳೆಯ ಪ್ರಮಾಣ ಪತ್ರಗಳ ಮೇಲೆ ಬಿಳಿ ಬಣ್ಣ ಹಚ್ಚಿ ತಿದ್ದಿರುವ ಶಂಕೆ ಇರುತ್ತದೆ. ರವಿಶಂಕರ್ ರವರು ದಿನಾಂಕ:28/06/2018 ರ ಒಪ್ಪಿಗೆ ಪತ್ರ ನೀಡಿ ಅದರಲ್ಲಿ ಈಡೇನಹಳ್ಳಿ ಗ್ರಾಮದ ವಾಸಿಗಳಾದ ರಂಗಪ್ಪನವರ ಸೊಸೆಯಂದಿರಾದ ನಂಜುಂಡಮ್ಮ ಕೋಂ ಮಹಲಿಂಗಪ್ಪ, ಹೊನ್ನಮ್ಮ ಕೋಂ ಸಣ್ಣನಂಜಪ್ಪ, ಗೌರಮ್ಮ ಕೋಂ ಸದಾಶಿವಯ್ಯ ಎಂದು ನಮೂದಿಸಿ ಇವರುಗಳಿಂದ ಎರಡು ಹೆಬ್ಬೆಟ್ಟಿನ ಸಹಿ ಮತ್ತು ಮೊತ್ತೊಂದು ಬರವಣಿಗೆ ಸಹಿ ಪಡೆದು ಒಪ್ಪಿಗೆ ಪತ್ರ ನೀಡಿರುತ್ತಾರೆ.

ರವಿಶಂಕರ್ ರವರು ಅಕ್ರಮ ಲಾಭ ಪಡೆಯುವ ದುರುದ್ದೇಶದಿಂದ ನಕಲಿ ವಂಶವೃಕ್ಷ ಹಾಗೂ ನಕಲಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ಖಾತೆ ಮಾಡಿಸಿಕೊಂಡು ನನಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ. ಆದ್ದರಿಂದ ರವಿಶಂಕರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಿ ನ್ಯಾಯ ದೊಕಿಸಿಕೊಡಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಠಾಣಾ ಮೊ.ನಂ- 94/2020 ಕಲಂ; 420,423,465,468,471,177 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 21 guests online
Content View Hits : 948950
Hackguard Security Enabled