lowborn ಅಪರಾಧ ಘಟನೆಗಳು 12-10-20 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police
Curfew Pass Application

ಡಾ. ಕೋನ ವಂಶಿ ಕೃಷ್ಣ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ತುಮಕೂರು ನಗರದಲ್ಲಿ ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಜಾಗೃತಿ... >> ಪತ್ರಿಕಾ ಪ್ರಕಟಣೆ ದಿನಾಂಕ  15-10-20 ಡ್ರಾಪ್‍ ಕೇಳುವ ನೆಪದಲ್ಲಿ ಹಣ ದೋಚುತ್ತಿದ್ದ... >> ಕೊವೀಡ್-19 ರ ವಿರುದ್ಧ ತುಮಕೂರು ಜಿಲ್ಲಾ ಪೊಲೀಸ್ ಅಭಿಯಾನ                 ... >>   ಪತ್ರಿಕಾ ಪ್ರಕಟಣೆ ದಿ:10/10/20 ಎನ್.ಜಿ.ಓ. ಹೆಸರಿನಲ್ಲಿ ಹಣ ದೋಚುತ್ತಿದ್ದ ಆರೋಪಿಗಳ ಬಂಧನದ... >> ಪತ್ರಿಕಾ ಪ್ರಕಟಣೆ ದಿ:03/10/20 ಆನ್ ಲೈನ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ: 01-10-2020 ಸರಣಿ ಮನೆ ಕಳ್ಳರ ಬಂಧನ, 13 ಲಕ್ಷ 50 ಸಾವಿರ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ 23-09-2020 ಅಕ್ರಮ ಗಾಂಜಾ ಸಾಗಾಟ / ಮಾರಾಟ ಮಾಡುತ್ತಿದ್ದ ಮೂವರ... >> ಪತ್ರಿಕಾ ಪ್ರಕಟಣೆ ದಿನಾಂಕ : 22-9-2020 ಮೋಟಾರ್ ಸೈಕಲ್ ಕಳ್ಳನ ಬಂಧನ: 1 ಲಕ್ಷ ರೂ ಮೌಲ್ಯದ 3... >> ಪತ್ರಿಕಾ ಪ್ರಕಟಣೆ ದಿನಾಂಕ: 18-09-2020 ಪೊಲೀಸ್ ಇಲಾಖೆಯು ಖಾಲಿ ಇರುವ ಸಿಪಿಸಿ ಹುದ್ದೆಗಳಿಗೆ... >> ಪತ್ರಿಕಾ ಪ್ರಕಟಣೆ ದಿ:11/09/20 ದ್ವಿ ಚಕ್ರ ವಾಹನ ಕಳವು ಆರೋಪಿಯ ಬಂಧನ. ದಿನಾಂಕ : 17-08-2020 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 12-10-20

ಹೆಬ್ಬೂರು ಪೊಲೀಸ್ ಠಾಣಾ ಮೊ ನಂ-145/2020 ಕಲಂ 87 ಕೆ.ಪಿ.ಆಕ್ಟ್

ದಿನಾಂಕ:-11-10-2020 ರಂದು ಸಂಜೆ 5-45 ಗಂಟೆಗೆ ಮಾನ್ಯ ಪಿ ಎಸ್‌ ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದಿನಾಂಕ:-11-10-2020 ರಂದು ಮದ್ಯಾಹ್ನ 3-00 ಗಂಟೆಗೆ ಮುನಿರಾಜು ಸಿ.ಹೆಚ್.ಸಿ-463 ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಏನೆಂದರೆ ಈ ದಿನ ನಾನು ಪಿ.ಎಸ್.ಐ ರವರ ಆದೇಶದಂತೆ ಗುಪ್ತ ಮಾಹಿತಿ ಸಂಗ್ರಹಕ್ಕಾಗಿ ನೇಮಕಗೊಂಡಿದ್ದು, ನಾನು ನೇಮಕದಂತೆ ಠಾಣಾ ಸರಹದ್ದಿನ ಕಲ್ಯಾಣಪುರ, ದಾಸರಹಳ್ಳಿ, ನಿಡುವಳಲು ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಮದ್ಯಾಹ್ನ ಸುಮಾರು 2-15 ಗಂಟೆಯ ಸಮಯದಲ್ಲಿ ತೊಂಡಗೆರೆ ಗ್ರಾಮದ ಕಡೆ ಗಸ್ತಿಗಾಗಿ ಹೋಗುತ್ತಿರುವಾಗ್ಗೆ ನನಗೆ ಬಂದ ಮಾಹಿತಿ ಏನೆಂದರೆ ಹೊನ್ನೇನಹಳ್ಳಿ ಗ್ರಾಮದ ಅರಣ್ಯವಲಯದಲ್ಲಿ ಯಾರೋ 4-5 ಜನರು ಗುಂಪಾಗಿ ಸೇರಿಕೊಂಡು ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹರ್ ಎಂಬ ಇಸ್ಪೀಟು ಜೂಜಾಟವನ್ನು ಆಡುತ್ತಿರುತ್ತಾರೆಂತಾ ಮಾಹಿತಿ ಮೇರೆಗೆ ನಾನು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಹೊನ್ನೇನಹಳ್ಳಿ ಅರಣ್ಯ ವಲಯದ ಬಳಿಗೆ ಹೋಗಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಜನರು ಗುಂಪಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿ ಕಟ್ಟಿಕೊಂಡು 4-5 ಜನರು ಅಂದರ್ ಬಾಹರ್ ಆಟವಾಡುತ್ತಿದ್ದುದು ಖಾತ್ರಿ ಪಡಿಸಿಕೊಂಡು ವಾಪಸ್ಸು ಮದ್ಯಾಹ್ನ 3-00 ಗಂಟೆಗೆ ಠಾಣೆಗೆ ಬಂದು ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿ ಆರ್ ನಂ- 390/2020 ರಲ್ಲಿ  ನಮೂದು ಮಾಡಿಕೊಂಡು ಸದರಿ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ಸ್ಥಳದಲ್ಲಿ ಸಿಕ್ಕ 1] ಶ್ರೀನಿವಾಸಮೂರ್ತಿ ಎಸ್.ಎ. ಬಿನ್ ಲೇಟ್ ಆಂಜಿನಪ್ಪ, 30 ವರ್ಷ, ವಕ್ಕಲಿಗರು, ವ್ಯವಸಾಯ,   ಚಿಕ್ಕಾಪುರ ಮಜರೆ ಶ್ರೀನಿವಾಸಪುರ ಹೆಬ್ಬೂರು ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, ದೂ.ನಂ. 8880002771, 2]ಮಂಜು.ಹೆಚ್.ಜಿ ಬಿನ್ ಗಂಗಣ್ಣ, 28 ವರ್ಷ, ವಕ್ಕಲಿಗರು, ವ್ಯವಸಾಯ, ಮನೆ ನಂಬರ್-03, ಗೋಕುಲ ನಿಲಯ 2 ನೇ ಕ್ರಾಸ್ ಸದಾಶಿವ ನಗರ ತುಮಕೂರು, ದೂ.ನಂ. 7353458961, 3] ಜಗದೀಶ ಬಿನ್ ಕೆಂಪಯ್ಯ, 34 ವರ್ಷ, ವಕ್ಕಲಿಗರು, ವ್ಯವಸಾಯ, ಮರಾಡಿಗರಪಾಳ್ಯ, ಹೆಬ್ಬೂರು  ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, ದೂ.ನಂ. 9743885970,   4] ಆನಂದ ಬಿನ್ ಬೋರೇಗೌಡ, 30 ವರ್ಷ, ವಕ್ಕಲಿಗರು, ವ್ಯವಸಾಯ, ಚಿಕ್ಕಾಪುರ ಹೆಬ್ಬೂರು ಹೋಬಳಿ  ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, 5] ಯತೀಶ ಬಿನ್ ವೆಂಕಟಾಚಲಯ್ಯ, 35 ವರ್ಷ, ಕುರುಬರು, ವ್ಯವಸಾಯ ತೊಂಡಗೆರೆ ಗ್ರಾಮ, ಹೆಬ್ಬುರು  ಹೋಬಳಿ ತುಮಕೂರು ತಾಲ್ಲೂಕು ಮತ್ತು ಜಿಲ್ಲೆ 05 ಜನ ಆಸಾಮಿಗಳನ್ನು ಅಸಲು ಪಂಚನಾಮೆಯೊಂದಿಗೆ ಸ್ಥಳದಲ್ಲಿ ಸಿಕ್ಕ ಒಂದು ಹಳೆಯ ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳು ಮತ್ತು 7,350/- ನಗರು ಹಣವನ್ನು ವಶಕ್ಕೆ ಪಡೆದು ಮತ್ತು 05 ಜನ ಆಸಾಮಿಗಳನ್ನು  41 ಸಿಆರ್‌ಪಿಸಿ ರೀತ್ಯಾ ಪೊಲೀಸ್ ನೋಟೀಸ್ ಜಾರಿ ಮಾಡಿ ವಾಪಸ್ ಠಾಣೆಗೆ ಬಂದು ಹಾಜರು ಪಡಿಸಿದ್ದನ್ನು ಪಡೆದು ಮತ್ತು ಹೆಚ್ ಸಿ 37 ರವರ ಮುಖಾಂತರ ಎನ್ ಸಿ ಆರ್ ನಂ-390/2020 ನ್ನು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿ ಪಡೆದು ಹಾಜರುಪಡಿಸಿದ್ದನ್ನು ಸಂಜೆ 5-45 ಗಂಟೆಗೆ ಪಡೆದು ಠಾಣಾ ಮೊ ನಂ-145/2020 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್ ನಂ:21-2020 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:11/10/2020 ರಂದು ಸಂಜೆ 06-00 ಗಂಟೆಯಲ್ಲಿ ಫಿರ್ಯಾದಿ ದೊಡ್ಡೇರಿ ವಾಸಿ ಮಹಾಲಿಂಗಯ್ಯ ಬಿನ್ ಲೇಟ್ ರಾಮಯ್ಯ ರವರು ಠಾಣೆಗೆ ಹಾಜರಾಗಿ, ಈ ದಿನ ಅಂದರೆ ದಿನಾಂಕ:11/10/2020 ರಂದು ನಾನು ಮತ್ತು ನನ್ನ ಹೆಂಡತಿಯಾದ ಮಂಜುಳ ರವರು ನನ್ನ ದೊಡ್ಡೇರಿ ಗ್ರಾಮದ ಲೇಟ್ ಪುಟ್ಟರಂಗಮ್ಮ ರವರ ಸರ್ವೆ ನಂ:199 ರ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದೆವು. ನಮ್ಮ ಜೊತೆಯಲ್ಲಿ ನನ್ನ ಮಗನಾದ ನಂದನ್ ಡಿ.ಎಂ ಸಹ ಬಂದಿದ್ದನು. ಮಧ್ಯಾಹ್ನ ಸುಮಾರು 02-30 ರ ಸಮಯದಲ್ಲಿ ನನ್ನ ಮಗನಾದ ನಂದನ್ ಡಿ.ಎಂ ನಿಗೆ ಯಾವುದೋ ವಿಷಪೂರಿತ ಹಾವು ಕಡಿದು ಆತ ಕೂಗಿದಾಗ ನಾನು ಹೋಗಿ ನೋಡಿದಾಗ ನನ್ನ ಮಗನ ಎಡಗೈನ ಹೆಬ್ಬೆಟ್ಟು ಹಾಗೂ ತೋರು ಬೆರಳ ಮಧ್ಯಭಾಗಕ್ಕೆ ಹಾವು ಕಡಿದಿದ್ದು ನೋಡಿ ತಕ್ಷಣ ನಾನು ದೊಡ್ಡೇರಿ ಆಸ್ಪತ್ರೆಗೆ ಎತ್ತಿಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ. ಆದ್ದರಿಂದ ತಾವುಗಳು ನನ್ನ ಮಗನ ಸಾವಿನ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಮಧುಗಿರಿ ಪೊಲೀಸ್ ಠಾಣಾ UDR No:22/2020 ಕಲಂ:174 CRPC

ದಿನಾಂಕ:11-10-2020 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ಕರೀಂ ಸಾಬ್ ಬಿನ್ ಲೇ|| ಸತ್ತರ್ ಸಾಬ್, 72 ವರ್ಷ, ಮುಸ್ಲಿಂ ಜನಾಂಗ, ಸಿಲ್ವರ್ ಪಾತ್ರೆ ವ್ಯಾಪಾರ, ಐ.ಡಿ ಹಳ್ಳಿ ಗ್ರಾಮ, ಮಧುಗಿರಿ ತಾ|| ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ  ಪಿರ್ಯಾದಿಯು ಹೆಂಡತಿ ನೂರ್ ಜಾನ್ ರವರು ಮಧುಗಿರಿ ಟೌನ್ 4 ನೇ ವಾರ್ಡ ನಲ್ಲಿ ವಾಸವಾಗಿದ್ದರು, ತನ್ನ ಹೆಂಡತಿಗೆ ಯಾವಾಗಲೂ ಹೊಟ್ಟೆನೋವು ಬರುತ್ತಿದ್ದು ಎಲ್ಲಾ ಕಡೆ ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಸಹ ವಾಸಿಯಾಗಿರುವುದಿಲ್ಲ,  ದಿನಾಂಕ: 10-10-2020 ರಂದು ಮದ್ಯಾಹ್ನ 03-00 ಗಂಟೆ ಸಮಯದಲ್ಲಿ  ಹೊಟ್ಟೆ ನೋವಿನ ಭಾದೆ ಜಾಸ್ತಿಯಾಗಿದ್ದರಿಂದ ಮನೆಯಲ್ಲಿ ಬಾತ್ ರೂಂ ತೊಳೆಯಲು ಇಟ್ಟಿದ್ದ ಪೆನಾಯಲ್ ಆಸಿಡ್ ಅನ್ನು ಯಾವುದೋ ಔಷಧಿ ಎಂದು ತಿಳಿದು ಕುಡಿದು ಮನೆಯಲ್ಲಿ ಒದ್ದಾಡುತ್ತಿದ್ದಾಗ ಮನೆಯಲ್ಲಿದ್ದ ಹೆಣ್ಣುಮಕ್ಕಳಾದ ಅಂಡಾ ಬಾನು, ಸಬೀಹಾ ಬಾನು ರವರು ನೋಡಿಕೊಂಡು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಅಂಬುಲೆನ್ಸ್ ನಲ್ಲಿ ಕಳುಹಿಸಿರುತ್ತಾರೆ, ನಂತರ ತುಮಕೂರು ಶ್ರೀದೇವಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:10-10-2020 ರಂದು  ಸಂಜೆ ಸುಮಾರು 06-00 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ, ನನ್ನ ಹೆಂಡತಿಯ ಮೃತ ದೇಹವು  ಶ್ರೀದೇವಿ ಆಸ್ಪತ್ರೆಯ ಶವಗಾರದಲ್ಲಿರುತ್ತದೆ, ನನ್ನ ಹೆಂಡತಿಯು ಹೊಟ್ಟೆನೋವು ಬಾದೆ ತಾಳಲಾರದೇ ಔಷಧಿ ಎಂದು ತಿಳಿದು ಪೆನಾಯಲ್ ಆಸಿಡ್ ಅನ್ನು ಕುಡಿದು ಮೃತಪಟ್ಟಿರುತ್ತಾರೆ, ನೂರ್ ಜಾಹನ್ ರವರ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ, ಅದ್ದರಿಂದ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಪಿರ್ಯಾದಿಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

ಸಿ.ಎಸ್.ಪುರ  ಠಾಣಾ ಯುಡಿಆರ್ ನಂ. 11/2020, ಕಲಂ:174(ಸಿ)  ಸಿ.ಆರ್.ಪಿ.,ಸಿ

ದಿನಾಂಕ:11.10.2020 ರಂದು  ಮದ್ಯಾಹ್ನ  2.00 ಗಂಟೆಗೆ ಸಿ.ಎಸ್.ಪುರ  ಪೊಲೀಸ್  ಠಾಣೆಯಲ್ಲಿ ಎಸ್.ಬಿ ಕರ್ತವ್ಯ  ನಿರ್ವಹಿಸುತ್ತಿರುವ  ದುಶ್ಯಂತ್, ಸಿಪಿಸಿ-861 ರವರು ಠಾಣೆಗೆ  ಹಾಜರಾಗಿ ನೀಡಿದ ವರದಿ ಆಂಶವೆಂದರೆ,   ದಿನಾಂಕ:11.10.2020 ರಂದು   ಮಾವಿನಹಳ್ಳಿ ಗ್ರಾಮದಲ್ಲಿ ಗಸ್ತು ನಿರ್ವಹಿಸುತ್ತಾ  ಮಾಹಿತಿ ಸಂಗ್ರಹಿಸುತ್ತಿರುವಾಗ್ಗೆ, ಮದ್ಯಾಹ್ನ  ಸುಮಾರು 1.00 ಗಂಟೆ ಸಮಯದಲ್ಲಿ ನೆಟ್ಟಿಕೆರೆ ಗೇಟ್ ಸಮೀಪ ಇರುವ ಹೇಮಾವತಿ ನಾಲೆಯಲ್ಲಿ ಒಂದು  ಗಂಡಸಿನ ಶವವು  ನೀರಿನಲ್ಲಿ  ತೇಲಿಕೊಂಡು ಬಂದು ಶಂಕರದೇವಿಹಳ್ಳಿ ಗ್ರಾಮದ ಬಳಿ ಸೇತುವೆಯ  ಕೆಳಗೆ  ತೇಲುತ್ತಿರುವ ಬಗ್ಗೆ  ಭಾತ್ಮಿ ಬಂದಿದ್ದು, ತಕ್ಷಣ  ನಾನು ಮಾವಿನಹಳ್ಳಿ-ನೆಟ್ಟಿಕೆರೆ ಗೇಟ್ ಮಾರ್ಗ ಮದ್ಯೆ ಬರುವ ಹೇಮಾವತಿ ನಾಲೆಯಲ್ಲಿ ಶಂಕರದೇವಿಹಳ್ಳಿ ಗ್ರಾಮದ ಬಳಿ ಸೇತುವೆಯ ಕೆಳಗೆ ಸುಮಾರು 35-40 ವರ್ಷ ವಯಸ್ಸಿನ ಗಂಡಸಿನ ಅನಾಮಧೇಯ ಶವವು ನೀರಿನಲ್ಲಿ ತೇಲುತಿದ್ದು, ಸದರಿ ಮೃತನ ಶವವನ್ನು ನೋಡಲಾಗಿ ಮೃತ ದೇಹವು ಸಂಪೂರ್ಣವಾಗಿ ಕೊಳೆತಿದ್ದು, ಮುಖ ಹಾಗೂ ದೇಹ ಊದಿಕೊಂಡಿರುತ್ತೆ,  ಮುಖ ಹಾಗೂ ಕೈ ಕಾಲುಗಳ ಚರ್ಮವನ್ನು  ಜಲಚರ ಪ್ರಾಣಿಗಳು ತಿಂದಿರುವ  ನಿಶಾನೆ ಕಂಡುಬಂದಿದ್ದು, ಮೃತನು ಕಪ್ಪು & ಹಳದಿ ಬಣ್ಣ ಮಿಶ್ರಿತ  ತುಂಬುತೋಳಿನ ಶರ್ಟು  ಹಾಗೂ  ಕಪ್ಪು ಬಣ್ಣದ  ಪ್ಯಾಂಟ್ ಧರಿಸಿದ್ದು, ಸದರಿ ಮೃತನು ಸುಮಾರು 3-4 ದಿನಗಳ ಹಿಂದೆ  ಎಲ್ಲಿಯೋ ನೀರು ಮುಟ್ಟಲು ಹೋಗಿಯೋ ಅಥವಾ ಇನ್ಯಾವುದೋ ಕಾರಣದಿಂದಲೋ  ಹರಿಯುತ್ತಿರುವ  ಹೇಮಾವತಿ ಚಾನೆಲ್ ನ ನೀರಿಗೆ ಬಿದ್ದು  ತೇಲಿಕೊಂಡು ಬಂದು ಸಿ.ಎಸ್.ಪುರ  ಠಾಣಾ ಸರಹದ್ದಿನ ನೆಟ್ಟಿಕೆರೆ ಗೇಟ್  ಸಮೀಪ ಇರುವ ಶಂಕರದೇವಿಹಳ್ಳಿ ಗ್ರಾಮದ ಬಳಿ ಸೇತುವೆಯ ಕೆಳಗೆ ಬಂದು ಬಿದ್ದಿದ್ದು ,ಮೃತ ಅನಾಮಧೇಯ ವ್ಯಕ್ತಿಯ ಸಾವಿನ ಬಗ್ಗೆ ಸ್ಪಷ್ಟ ಕಾರಣ ತಿಳಿದಿರುವುದಿಲ್ಲಾ  ಹಾಗೂ ಈತನ ವಾರಸುದಾರರ ಬಗ್ಗೆ ಮಾಹಿತಿ ಸಹ ಇರುವುದಿಲ್ಲಾ ಎಂದು ನೀಡಿದ  ವರದಿ ಪಡೆದು ಸಿ.ಎಸ್.ಪುರ  ಪೊಲೀಸ್ ಠಾಣಾ ಯುಡಿಆರ್ ನಂ.11/2020. ಕಲಂ:174(ಸಿ)  ಸಿ.ಆರ್.ಪಿ.ಸಿ ರೀತ್ಯಾ  ಪ್ರಕರಣ  ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ-95/2020 ಕಲಂ: 323,324,504,506,447 ರೆ/ವಿ 149 ಐ.ಪಿ.ಸಿ

ದಿನಾಂಕ:11/10/2020 ರಂದು ಸಂಜೆ 6-30 ಗಂಟೆಗೆ ಶ್ರೀ ಮಲ್ಲೇಶ ಬಿನ್ ಗಂಗಾಧರಯ್ಯ, 35 ವರ್ಷ, ಗೊಲ್ಲರ ಜನಾಂಗ, ವ್ಯವಸಾಯ, ಅಣ್ಣಾಮಲ್ಲೇನಹಳ್ಳಿ ಗೊಲ್ಲರಹಟ್ಟಿ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ವ್ಯವಸಾಯದ ಜೊತೆಗೆ ರೇಷ್ಮೇ ಹುಳು ಸಾಕಿಕೊಂಡು ಜೀವನ ಮಾಡುತ್ತಿರುತ್ತೇನೆ.  ಈ ದಿನ ದಿನಾಂಕ:11/10/2020 ರಂದು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಮ್ಮ ಬಾಬ್ತು ಅಣ್ಣಾಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂ- 12 ರ ಜಮೀನಿನಲ್ಲಿ ರೇಷ್ಮೇ ಸಪ್ಪನ್ನು ಕುಯ್ಯುತ್ತಿರುವಾಗ ಅಲ್ಲಿಗೆ ನಮ್ಮ ಊರಿನ ಗಿರಿಯಪ್ಪ ಬಿನ್ ಕಾಟಯ್ಯ. ಶಿವ ಬಿನ್ ಮಾಳಿಕಾಟಯ್ಯ, ಶಿವ ಬಿನ್ ಕಾಟಯ್ಯ, ಸಂತೋಷ್ ಬಿನ್ ಶಂಕರಯ್ಯ ಹಾಗೂ ಮಹೇಶ್ ಬಿನ್ ಶಾಂತಯ್ಯ ರವರುಗಳು ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಹಳೆಯ ಧ್ವೇಷದಿಂದ ನನ್ನನ್ನು ಬೋಳಿ ಮಗನೇ, ಸೂಳೆ ಮಗನೇ ಎಂತ ಕೆಟ್ಟ ಶಬ್ದಗಳಿಂದ ಬೈಯುತ್ತಾ ಏಕಾಏಕಿ ಗಿರಿಯಪ್ಪನು ಅಲ್ಲೇ ಇದ್ದ ಒಂದು ಕಲ್ಲಿನಿಂದ ನನ್ನ ಬಲಗೈ ಮುಂಗೈಗೆ ಹೊಡೆದು ಪೆಟ್ಟು ಮಾಡಿದನು. ಶಿವ ಬಿನ್ ಮಾಳಿಕಾಟಯ್ಯನು  ಕಲ್ಲಿನಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದನು. ಶಿವ ಬಿನ್ ಕಾಟಯ್ಯನು ಕಲ್ಲಿನಿಂದ ನನ್ನ ಎಡಭಾಗದ ಹಣೆಗೆ ಹೊಡೆದು ರಕ್ತಗಾಯಪಡಿಸಿದನು. ಸಂತೋಷ ಮತ್ತು ಮಹೇಶನು ದೊಣ್ಣೆಯಿಂದ ಮತ್ತು ಕೈಯಿಂದ ಮೈಕೈಗೆ ಹೊಡೆದು ನೋವುಂಟು ಮಾಡಿದರು. ನಂತರ ಅಲ್ಲಿಯೇ ಜಮೀನಿನಲ್ಲಿ ಇದ್ದ ನನ್ನ ಭಾವನಾದ ನಾಗರಾಜು ರವರು ಅಲ್ಲಿಗೆ ಬಂದು ಜಗಳ ಬಿಡಿಸಿದರು. ಅವರು ಹೋಗುವಾಗ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಒಂದು ಗತಿ ಕಾಣಿಸುತ್ತೇನೆ. ಎಂತ ಪ್ರಾಣ ಬೆದರಿಕೆಯನ್ನು ಹಾಕಿ ಹೋದರು. ಗಾಯಗೊಂಡ ನನ್ನನ್ನು ನನ್ನ ಭಾವ ನಾಗರಾಜುರವರು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ನಾನು ಚಿಕಿತ್ಸೆ ಪಡೆದು ಈಗ ಠಾಣೆಗೆ ಬಂದು ನನ್ನ ಮೇಲೆ ಗಲಾಟೆ ಮಾಡಿ ಹೊಡೆದಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂತ ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಠಾಣಾ ಮೊ.ನಂ-95/2020 ಕಲಂ: 323,324,504,506,447 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೆ.

ಗುಬ್ಬಿ ಪೊಲೀಸ್ ಠಾಣಾ ಮೊ ನಂ 213/2020 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 11.10.2020 ರಂದು ಸಂಜೆ 6.00 ಗಂಟೆಗೆ ಪಿರ್ಯಾದಿ ರಾಮಚಂದ್ರಯ್ಯ ಬಿನ್ ಲೇ// ರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ; 9.10.2020 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಪಿರಯಾದಿ ಗ್ರಾಮದ ವಾಸಿಯಾದ ರಂಗಸ್ವಾಮಯ್ಯ ರವರ ಮನೆಯ ಮುಂದೆ ಪಿರ್ಯಾದಿ ತನ್ನ ಮಗಳ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ರಂಗಸ್ವಾಮಯ್ಯ ಬಿನ್ ರಂಗಪ್ಪ, ಅವರ ಹೆಂಡತಿ ದೊಡ್ಡಮ್ಮ ಮಕ್ಕಳಾದ ನಲ್ಲೂರಯ್ಯ, ಹೊನ್ನರಂಗಯ್ಯ, ಗಂಗಣ್ಣ ಹಾಗೂ ನೇತ್ರಾವತಿ ರವರುಗಳು ಪಿರ್ಯಾದಿಯನ್ನು ಹಿಡಿದುಕೊಂಡು ನೆಲಕ್ಕೆ ಕೆಡವಿ ಕಾಲಿನಿಂದ ತುಳಿದು ಬಳಕಾಲಿಗೆ, ಬಲಕೈ, ಮೈಕೈಗೆ ದೊಣ್ಣೆಯಿಂದ ಹೊಡೆದರು.  ಹಾಗೂ  ಬಾಯಿಗೆ ಬಂದ ಹಾಗೆ ಸೂಳೆ ಮಗನೇ, ಬೋಳಿ ಮಗನೆ ಇನ್ನು ಹಲವಾರು ಅವಾಚ್ಯ ಶಬ್ದಗಳಿಂದ ಬೈಯ್ದು ನಿನ್ನನ್ನು ತೀರಿಸಿ ಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿ ಚೇತರಿಸಿಕೊಂಡು ತನ್ನ ಮಗ ಗಿರೀಶನಿಗೆ ತಿಳಿಸಿದ್ದು, ಆಗ ಪಿರ್ಯಾದಿ ಮಗ ರಂಗಸ್ವಾಮಯ್ಯನ ಮನೆಯ ಹತ್ತಿರ ಹೋಗಿ  ಕೇಳಲಾಗಿ ಅವನನ್ನು ಸಹ  ಹೊಡೆದು ಕಾರದ ಪುಡಿ ಎರಚಿದರು.  ಈತನ ಜೊತೆಯಲ್ಲಿದ್ದ ನರಸಿಂಹರಾಜನಿಗೂ ಸಹ ಹೊಡೆದು ಗಾಯಗೊಳಿಸಿರುತ್ತಾರೆ.  ಭೂಮಿಯನ್ನು ಬರೆದು ಕೊಡದೆ ಇದ್ದರೆ ನಿಮ್ಮನ್ನು ತೀರಿಸಿ ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಆದ್ದರಿಂದ ಅವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಇತ್ಯಾದಿ ದೂರಿನ ಅಂಶ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ದಿಲೀಪ್
9916790692

ಸುಸನ್
7829794200

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

We have 34 guests online
Content View Hits : 948997
Hackguard Security Enabled